Monday, January 20, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಮಂಗಳೂರಿನ ಫ್ಲ್ಯಾಟ್‌ನಲ್ಲಿ ಹೈ ಪ್ರೊಫೈಲ್ ವೇಶ್ಯಾವಾಟಿಕೆ ದಂದೆಯ ಮತ್ತಷ್ಟು ಕರಾಳ ಮುಖ ಬಯಲು ; ನೋಟ್ ಬುಕ್ ನಲ್ಲಿ ಗ್ರಾಹಕರ ಹೆಸರು, ನಂಬರ್ ಪತ್ತೆ – ಸೆಕ್ಸ್ ಬಯಸಿ ಬಂದ ಕಾಮುಕರಿಗೆ ಕಾದಿಗೆ ದಂಡ…! ನಂದಿಗುಡ್ಡೆ ಶಮೀನಾ ಆಂಟಿ ಮಾಂಸದ ಅಡ್ಡೆಯ ಕಾಮಪುರಾಣ..! – ಕಹಳೆ ನ್ಯೂಸ್

ಕಡಲನಗರಿ ಮಂಗಳೂರಿನಲ್ಲಿ ಆರ್ಥಿಕ ಸಂಕಷ್ಟ ಹೊಂದಿರುವ ವಿದ್ಯಾರ್ಥಿನಿಯರನ್ನೇ ಬಳಸಿಕೊಂಡು ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆ ಬೆಳಕಿಗೆ ಬಂದಿದೆ. ಈ ಸಂಬಂಧ ಇದೀಗ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನಗರದ ನಂದಿಗುಡ್ಡ ಬಳಿಯ ಲಿಯಾನಾ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬಳಸಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ಜಾಲದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮತ್ತಷ್ಟು ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಗ್ರಾಹಕರು ಸಹಿತ ವೇಶ್ಯಾವಾಟಿಕೆಗೆ ಸಹಕಾರ ನೀಡಿದ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ 10 ಮಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರಂಭದಲ್ಲಿ ಪ್ರಕರಣ ಬಯಲಾದಾಗ ಉಪ್ಪಳದ ಅಬೂಬಕ್ಕರ್‌ ಸಿದ್ದಿಕ್‌(42), ನಂದಿಗುಡ್ಡೆಯ ಶಮೀನಾ (41) ಮತ್ತು ಅಡ್ಯಾರ್‌ಪದವಿನ ಐಸಮ್ಮ(56) ಎಂಬವರನ್ನು ಬಂಧಿಸಲಾಗಿತ್ತು. ಇದೀಗ ಗ್ರಾಹಕರಾಗಿ ಬಂದು ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿದ ಮೂಡುಬಿದಿರೆ ಹೊಸಬೆಟ್ಟಿನ ಸಂದೀಪ್‌(33), ಕೈಕಂಬದ ಸಿಪ್ರಿಯಾನ್‌ ಅಂದ್ರಾದೆ(40), ಉದ್ಯಾವರ ಮಂಜೇಶ್ವರದ ಮಹಮ್ಮದ್‌ ಶರೀಫ್‌(46), ವೇಶ್ಯಾವಾಟಿಕೆ ಜಾಲಕ್ಕೆ ಸಹಕರಿಸಿದ ತಲಪಾಡಿಯ ರಹಮತ್‌(48), ಕಣ್ಣೂರಿನ ಸನಾ ಆಲಿಯಾಸ್‌ ಅಸ್ಮಾ(24), ಬಂಟ್ವಾಳ ನರಿಂಗಾನದ ಉಮ್ಮರ್‌ ಕುನ್ನಿ(43) ಮತ್ತು ಬೆಂದೂರ್‌ವೆಲ್‌ನ ಮಹಮ್ಮದ್‌ ಹನೀಫ್‌(46) ಬಂಧಿತರು. ಇವರೆಲ್ಲರ ವಿರುದ್ಧ ವಿವಿಧ ಕಲಂಗಳ ಜತೆ ಪೊಕ್ಸೋ ಕಾಯಿದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಗರದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಇಬ್ಬರು ಅಪ್ರಾಪ್ತೆಯರು ಸೇರಿ ಒಟ್ಟು ನಾಲ್ವರು ಸಂತ್ರಸ್ತರನ್ನು ಗುರುತಿಸಲಾಗಿದೆ. ಈ ಜಾಲದ ಬಗ್ಗೆ ಸಿಸಿಬಿ ಪೊಲೀಸರು ಸಮಗ್ರ ತನಿಖೆ ನಡೆಸಿದಾಗ ಇನ್ನಷ್ಟು ಆರೋಪಿಗಳು ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಸ್ಪಷ್ಟವಾಗಿದೆ.

ಈ ಹಿನ್ನೆಲೆಯಲ್ಲಿ ಅವರೆಲ್ಲರನ್ನು ಬಂಧಿಸಲಾಗಿದೆ. ಒಟ್ಟು ಆರು ಬಾರಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಇನ್ನಷ್ಟು ಮಂದಿ ಈ ಜಾಲದಲ್ಲಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದೂರು ನೀಡಿದ ಅಪ್ರಾಪ್ತ ಯುವತಿ ಆರಂಭದಲ್ಲಿ ಲೈಂಗಿಕ ಕ್ರಿಯೆಗೆ ಸಹಕಾರ ನೀಡಿರಲಿಲ್ಲ. ಆದರೆ ಮನೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ನಿನ್ನ ವಿಡಿಯೊ ರೆಕಾರ್ಡ್‌ ಆಗಿದೆ ಎಂದು ಆಕೆಯನ್ನು ಹೆದರಿಸಿ ಬಲವಂತವಾಗಿ ಈ ಕೃತ್ಯಕ್ಕೆ ಬಳಸಿಕೊಳ್ಳಲಾಗಿದೆ. ಆದರೆ ಇನ್ನಷ್ಟು ಮಂದಿಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಗ ಆಕೆ ಮಾಹಿತಿಯನ್ನು ಸಂಸ್ಥೆಯ ಪ್ರಿನ್ಸಿಪಾಲ್‌ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಿದ್ದರು.

ಅಲ್ಲಿಂದ ಪೊಲೀಸ್‌ ಇಲಾಖೆಗೆ ದೂರು ಬಂದಿತ್ತು. ಇದೀಗ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಕಮಿಷನರ್‌ ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್‌, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್‌ ಕುಮಾರ್‌, ಸಿಸಿಬಿ ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ಉಪಸ್ಥಿತರಿದ್ದರು.

ವ್ಯವಸ್ಥಿತ ಕೃತ್ಯ! :

ಆರೋಪಿಗಳು ವ್ಯವಸ್ಥಿತವಾಗಿ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದರು. ಮೊದಲ ಹಾಗೂ ಎರಡನೇ ಆರೋಪಿ ಮೊದಲು ವಿದೇಶದಲ್ಲಿದ್ದು, ಅಲ್ಲಿಂದ ಇಲ್ಲಿಗೆ ಬಂದ ಬಳಿಕ ಪೂರ್ವ ತಯಾರಿ ಮಾಡಿಕೊಂಡೇ ಈ ಜಾಲ ನಿರ್ವಹಿಸುತ್ತಿದ್ದರು. ಮನೆಯನ್ನು ಬಾಡಿಗೆಗೆ ಪಡೆದು ಯಾರಿಗೂ ಗೊತ್ತಾಗದ ರೀತಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು.

ಶಮೀನಾ ಮತ್ತು ಸಿದ್ದಿಕ್‌ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದಾರೆ ಎಂಬ ಬಗ್ಗೆಯೂ ಅನುಮಾನವಿದೆ. ಸಿದ್ದಿಕ್‌ಗೆ ಬೇರೆ ಮದುವೆಯಾಗಿರುವ ಬಗ್ಗೆ ಮಾಹಿತಿ ಇದೆ ಎಂದು ಕಮಿಷನರ್‌ ತಿಳಿಸಿದ್ದಾರೆ. ಆರೋಪಿಗಳು ಮತ್ತು ಗ್ರಾಹಕರು ದೂರವಾಣಿ ಕರೆ ಮಾಡುವಾಗ ವ್ಯಾಟ್ಸ್ಯಾಪ್‌ ಕರೆ ಮಾಡಿ ರೆಕಾರ್ಡ್‌ ದಾಖಲಾಗದಂತೆ ನೋಡಿಕೊಳ್ಳುತ್ತಿದ್ದರು.

ಗ್ರಾಹಕರು ಡಿಜಿಟಲ್‌ ಪೇಮೆಂಟ್‌ ಮೂಲಕ ಹಣ ಪಾವತಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಮೊಬೈಲ್‌ ಮೂಲಕ ನಡೆದ ಎಲ್ಲ ಚಾಟಿಂಗ್‌ಗಳನ್ನು ಅಳಿಸಿ ಹಾಕಿದ್ದರು. ಆದರೂ ಕೆಲವೊಂದು ಮಹತ್ವದ ಮಾಹಿತಿಗಳು ಸಿಕ್ಕಿವೆ ಎಂದು ಕಮಿಷನರ್‌ ತಿಳಿಸಿದ್ದಾರೆ.

ನೋಟ್‌ ಬುಕ್‌ನಲ್ಲಿ ದಾಖಲೆ

ಜಾಲ ನಡೆಸುತ್ತಿದ್ದ ಆರೋಪಿಗಳು ಯುವತಿಯರ ಹಾಗೂ ಬರುವ ಗ್ರಾಹಕರ ಬಗ್ಗೆ ನೋಟ್‌ ಬುಕ್‌ನಲ್ಲಿ ದಾಖಲೆಗಳನ್ನು ಬರೆದಿಟ್ಟಿದ್ದರು. ಅವರ ಹೆಸರು, ದೂರವಾಣಿ ಸಂಖ್ಯೆಗಳು ಪತ್ತೆಯಾಗಿವೆ. ಅಲ್ಲದೆ ಗ್ರಾಹಕರು ಅಪ್ತಾಪ್ತೆಯರನ್ನೇ ಕೇಳಿ ಈ ಫ್ಲ್ಯಾಟ್‌ಗೆ ಬರುತ್ತಿದ್ದರು. ಈ ಫ್ಲ್ಯಾಟ್‌ ಅಲ್ಲದೆ ಇತರ ಕೆಲವು ಮನೆಗಳನ್ನು ಉಪಯೋಗಿಸಿರುವ ಬಗ್ಗೆ ಮಾಹಿತಿ ಇದೆ ಎಂದು ಕಮಿಷನರ್‌ ತಿಳಿಸಿದ್ದಾರೆ.