ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ಹಾಟ್ ವಾಟರ್ ಪ್ಯೂರಿಪೈರ್ ; ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ರಿ.) ಕೊಡುಗೆ – ಕಹಳೆ ನ್ಯೂಸ್
ಬಂದಾರು : ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ರಿ.) ಬಂದಾರು ಇದರ ವತಿಯಿಂದ ಬಂದಾರು ಸರಕಾರಿ ಉನ್ನತೀಕರಸಿದ ಪ್ರಾಥಮಿಕ ಶಾಲೆಗೆ “ಹಾಟ್ ವಾಟರ್ ಪ್ಯೂರಿಪೈರ್“ ಅನ್ನು ಕೊಡುಗೆಯಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ರಾಘವೇಂದ್ರ ಅವರು ಕೋವಿಡ್ ನ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಬಿಸಿ ನೀರಿನ ಉಪಯೋಗದಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಹಾಗೂ ಸಹಕಾರಿ ಸಂಘದ ಈ ಸಮಾಜಮುಖಿ ಸೇವೆಗೆ ಅಭಿನಂದನೆಗಳನ್ನು ಸಲ್ಲಿಸುವುದರ ಮೂಲಕ, ಮಹಿಳಾ ಸಹಕಾರಿ ಸಂಘದ ಇನ್ನಷ್ಟು ಸಮಾಜಮುಖಿ ಸೇವೆಗಳಾಗಲಿ ಎಂದು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ರಿ.) ಬಂದಾರು ಅಧ್ಯಕ್ಷರಾದ ಮಮತಾ ಕೆ ಗೌಡ ಕೆಳೆಂಜಿಮಾರು , ಉಪಾಧ್ಯಕ್ಷರಾದ ಧರ್ಮವತಿ ಪರಪ್ಪಾದೆ ಕಾರ್ಯದರ್ಶಿ ಭವ್ಯ ಕೆ ಎಸ್. ಕೇದಗೆಕೋಡಿ, ನಿರ್ದೇಶಕರಾದ ಮಮತಾ ನಿನಿಕಲ್ಲು ,ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಜಾರಪ್ಪ ಗೌಡ, ಉಪಾಧ್ಯಕ್ಷರಾದ ಸುಮಿತ್ರ ಕೋಡಿಮಜಲು , ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು..
ಶಿಕ್ಷಕರಾದ ಕು. ರಮ್ಯ ಸ್ವಾಗತಿಸಿ, ಚಂದ್ರಕಲಾ ಕೋಡಿನೆಕ್ಕಿಲು ವಂದಿಸಿದರು, ಪ್ರಶಾಂತ್ ದೈಹಿಕ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು.