Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸಜೀಪ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶದಲ್ಲಿ ನಡೆದ ಯುವಶಕ್ತಿ ಸೇವಾಪಥದ ಎರಡನೇ ಸೇವಾ ಯೋಜನೆ – ಕಹಳೆ ನ್ಯೂಸ್

ಬಂಟ್ವಾಳ: ಸಜೀಪ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶದಲ್ಲಿ ನಡೆದ ಯುವಶಕ್ತಿ ಸೇವಾಪಥದ ಎರಡನೇ ಸೇವಾ ಯೋಜನೆಯಲ್ಲಿ ಕಿಡ್ನಿವೈಫಲ್ಯದಿಂದ ಬಳಲುತ್ತಿರುವ ಮಿತ್ತಮಜಲು ಸಾಗರ್ ಆಚಾರ್ಯ ಹಾಗೂ ಕಾಲು ಹಾಗೂ ಸೊಂಟದ ಬಲಹೀನತೆಯಿಂದ ಕಷ್ಟಪಡುತ್ತಿರುವ ಸಜೀಪಪಡು ಗೋಪಾಲರವರ ಚಿಕಿತ್ಸಾ ಮೊತ್ತಕ್ಕಾಗಿ ಶ್ರೀ ಶಾರದಾ ಪ್ರೆಂಡ್ಸ್ ಸರ್ಕಲ್(ರಿ)ವಿದ್ಯಾನಗರ, ಶ್ರೀಸತ್ಯದೇವತಾ ಯುವಕಸಂಘ ಕಂಚಿಲ, ಸುಭಾಷ್ ಯುವಕಮಂಡಲ(ರಿ) ಸುಭಾಷ್ ನಗರ, ಶ್ರೀವೀರಾಂಜನೇಯ ಸೇವಾಸಂಘ(ರಿ) ಸಜೀಪ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸೇವಾಸಂಕಲ್ಪ ಸಂಪನ್ನಗೊ0ಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೇವಾ ಸಂಕಲ್ಪದಲ್ಲಿ ಸಂಗಹಿಸಲ್ಪಟ್ಟ 1 ಲಕ್ಷ ರೂಪಾಯಿಗಳನ್ನು ಚಿಕಿತ್ಸಾ ವೆಚ್ಚವಾಗಿ ತಲಾ 50 ಸಾವಿರ ರೂ.ಗಳಂತೆ ಚೆಕ್ ನ್ನು ಷಣ್ಮುಖ ಸುಬ್ರಹ್ಮಣ್ಯ ದೇವರ ಮುಂಭಾಗದಲ್ಲಿ ಅರ್ಚಕರು/ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸಂಘಟನಾ ಮಿತ್ರರ ಉಪಸ್ಥಿತಿಯಲ್ಲಿ ಇಬ್ಬರು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ಯುವಶಕ್ತಿಯ ಮುಂದಿನ ಮೂರನೇ ಸೇವಾಯೋಜನೆಯು ಉಪ್ಪಿನಂಗಡಿ ಮಖೆ ಜಾತ್ರೆಯಲ್ಲಿ ಫೆ.23ರಂದು ಹಮ್ಮಿಕೊಂಡಿದ್ದು ಸಹೃದಯಿ ದಾನಿಗಳು ಸಹಕರಿಸುವಂತೆ ಮನವಿ ಮಾಡಲಾಗಿದೆ.