Sunday, January 19, 2025
ಸುದ್ದಿ

ಪ್ರೌಢಶಾಲಾ ಪಠ್ಯ ಪುಸ್ತಕದಲ್ಲಿ ಧರ್ಮಭೋದನೆಯ ಹೇರಿಕೆ ; ಸಾಮರಸ್ಯ ಕದಡುವ ಪ್ರಯತ್ನ ಪುತ್ತೂರಿನಲ್ಲಿ ವಿಎಚ್ ಪಿ, ಬಜರಂಗದಳ ಆರೋಪ – ಕಹಳೆ ನ್ಯೂಸ್

ಪುತ್ತೂರು : ಶಿಕ್ಷಣ ಇಲಾಖೆಯ 9ನೇ ತರಗತಿಯ ಅಂಗ್ಲ ಮಾದ್ಯಮ ಶಾಲೆಯ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಎಂಬ ಅದ್ಯಯವನ್ನು ಹಾಕಿ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪ್ರಭಾವ ಬೆಳೆಸಲು ಮತ್ತು ಸಾಮರಸ್ಯ ಕದಡಲು ಮಾಡಿರುವ ಸಂಚನ್ನು ಪಠ್ಯಪುಸ್ತಕ ದಿಂದ ತೆಗೆದು ಹಾಕಬೇಕು ಎಂದು ಆಗ್ರಹಿಸಿ ಶಿಕ್ಷಣ ಅಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆಯಿಂದ ಮನವಿ ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಅಧ್ಯಕ್ಷರು ಡಾ| ಕೃಷ್ಣ ಪ್ರಸನ್ನ, ಬಜರಂಗದಳ ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ, ಹಿಂದೂ ಪರಿಷದ್ ಪ್ರಖಂಡ ಅಧ್ಯಕ್ಷರು ಜನಾರ್ದನ ಬೆಟ್ಟ, ಪುತ್ತೂರು ಪ್ರಖಂಡ ಬಜರಂಗದಳ ಸಂಚಾಲಕ ನಿತೀನ್,
ಪ್ರವೀಣ್ ನಗರ , ರಂಜಿತ್, ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು