Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿ

ಪದ್ಮುಂಜ-ಕಣಿಯೂರಿನಲ್ಲಿ ಶ್ರೀ ಕಲ್ಕುಡ ಸಪರಿವಾರ ದೈವಸ್ಥಾನದ ದೈವಗಳ ಭಂಡಾರ ಮನೆಯ ಶಿಲಾನ್ಯಾಸ ಮತ್ತು ವಾರ್ಷಿಕ ನೇಮೋತ್ಸವ- ಕಹಳೆ ನ್ಯೂಸ್

ಕಣಿಯೂರು : ಶ್ರೀ ಕಲ್ಕುಡ ಸಪರಿವಾರ ದೈವಸ್ಥಾನದ ಸೇವಾ ಟ್ರಸ್ಟ್ (ರಿ.) ಕಲ್ಕುಡ ಮಾಡ, ಪದ್ಮುಂಜ, ಕಣಿಯೂರು ದೈವಗಳ ಭಂಡಾರ ಮನೆಯ ಶಿಲಾನ್ಯಾಸ ಮತ್ತು ವಾರ್ಷಿಕ ನೇಮೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಫೆ. 12ರಿಂದ ಪ್ರಾರಂಭವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಫೆ. 17ರಂದು ದೈವಗಳ ಭಂಡಾರದ ಮನೆಯ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕರಿಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಕ್ಷೇತ್ರದ ಶ್ರೀ ಶ್ರೀ ಶ್ರೀ ಸದ್ಗುರು ಮುಕ್ತಾನಂದ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ.

ಫೆ. 18ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಜೆ 7ರಿಂದ ದೈವಗಳ ನೇಮೋತ್ಸವ ನಡೆಯಲಿದೆ. ಫೆ. 22ರ ಸಂಜೆ 4-30ರಿಂದ ದೊಂಪಾಡಿ ಪದ್ಮುಂಜ ಮಹಾಮ್ಮಾಯಿ (ಅಮ್ಮನವರ) ಭೈರವ ಗುಳಿಗ ದೈವಗಳ ಕ್ಷೇತ್ರದಲ್ಲಿ ಸಾಮೂಹಿಕ ಮಾರಿ ಪೂಜೆ ಹಾಗೂ ಫೆ. 23 ರಂದು ಕುರಿ ತಂಬಿಲ ಸೇವೆ ನಡೆಯಲಿದೆ.