Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿವಾಹಿತ ಮಹಿಳೆಯರ ಜೊತೆ ರಾಧಾಕೃಷ್ಣನ ರಾಸಲೀಲೆ : ಕಾಮುಕ ಅಂದರ್ – ಕಹಳೆ ನ್ಯೂಸ್

ಬಂಟ್ವಾಳ: ಸಂಬAಧಿಕರ ಮಹಿಳೆಯರ ಜೊತೆ ರಾಸಲೀಲೆ ಮಾಡಿದ ಬಳಿಕ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕಾಮುಕನನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಟ್ವಾಳ ಮಂಡಾಡಿ ನಿವಾಸಿ ರಾಧಾಕೃಷ್ಣ ಬಂಧಿತ ಆರೋಪಿ. ಬಂಟ್ವಾಳ ಬಿ.ಕಸ್ಬಾ ಗ್ರಾಮದ ನಿತ್ಯಾನಂದ ನಗರದ ಮಹಿಳೆಯೋರ್ವಳ ನಗ್ನ ಪೋಟೋಗಳನ್ನು ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆಯ ಗಂಡ ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಕರಣ ಬೆನ್ನು ಹತ್ತಿ ಆರೋಪಿಯನ್ನು ಬಂಧಿಸಿದಾಗ ಈತನ ಕಾಮಾದಾಟ ಬಯಲಾಗಿದೆ.
ಮಹಿಳೆಯ ನಗ್ನ ಪೋಟೋ ತೆಗೆದಿದ್ದ ಆರೋಪಿ ರಾಧಾಕೃಷ್ಣ ಕಳೆದ ಕೆಲ ದಿನಗಳಿಂದ 4.48 ಲಕ್ಷ ರೂ ನೀಡುವಂತೆ ಪೀಡಿಸುತ್ತಿದ್ದ , ಹಣ ನೀಡದಿದ್ದರೆ ಅಶ್ಲೀಲ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೆದರಿಸಿದ್ದ, ಅ ಬಳಿಕ ಆರೋಪಿ ಮೊಬೈಲ್ ಸ್ವಿಚ್ ಆಪ್ ಮಾಡಿ ಸುಮ್ಮನಾಗಿದ್ದ.

ಬಳಿಕ ಮಹಿಳೆಯ ಗಂಡನ ಬಳಿ ಪೋಟೋ ತೋರಿಸಿ ಹಣ ನೀಡುವಂತೆ ಹೆದರಿಸಿ ಹೋಗಿ, ಎರಡು ದಿನಗಳ ಬಳಿಕ 17 ಜನ ಸಂಬAಧಿಕರ ಗ್ರೂಪ್ ಮಾಡಿ ಅದರಲ್ಲಿ ಸಂತ್ರಸ್ತ ಮಹಿಳೆಯ ಗಂಡನನ್ನು ಸೇರಿಸಿ ಅಶ್ಲೀಲ ಚಿತ್ರಗಳನ್ನು ಶೇರ್ ಮಾಡಿದ್ದ.
ಈ ಬಗ್ಗೆ ಸಂತ್ರಸ್ತ ಮಹಿಳೆಯ ಗಂಡ ದೂರು ನೀಡಿದ್ದರು.

ಮದುವೆಯಾದ ಮಹಿಳೆಯರು ಅದರಲ್ಲಿ ಸಂಬ0ಧಿಕ ಮಹಿಳೆಯರೇ ಈತನ ಟಾರ್ಗೆಟ್,  ಮಹಿಳೆಯರನ್ನು ಲಾಡ್ಜ್ ಗಳಿಗೆ ಕೊಂಡು ಹೋಗಿ ಮಜಾ ಮಾಡುವುದೇ ಈತನ ಹುಚ್ಚು. ಆರೋಪಿ ರಾಧಾಕೃಷ್ಣ ನ ಜೊತೆ 10 ಕ್ಕೂ ಅಧಿಕ ಸಂಬAಧಿಕ ಮದುವೆಯಾದ ಮಹಿಳೆಯರು ಹಾಗೂ ಇತರ ಆಂಟಿಗಳು ರಾಸಲೀಲೆಯಲ್ಲಿ ತೊಡಗಿಕೊಂಡಿದ್ದಾರೆ.

ಈ ಪ್ರಕರಣದ ಆರೋಪಿ ಪತ್ತೆಗಾಗಿ ಪೋಲೀಸ್ ಅಧೀಕ್ಷಕ ಋಷಿಕೇಷ್ ಸೋನಾವಣೆ, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಕುಮಾರ್ ಚಂದ್ರ ಅವರ ನಿರ್ದೇಶನದಂತೆ, ಬಂಟ್ವಾಳ ಡಿ.ವೈ.ಎಸ್.ಪಿ.ಪ್ರತಾಪ್ ಸಿಂಗ್ ತೋರಾಟ ಅವರ ಮಾರ್ಗದರ್ಶನ ದಲ್ಲಿ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರ ನೇತ್ರತ್ವದ ಲ್ಲಿ ಎಸ್ ಐ.ಅವಿನಾಶ್, ಸಿಬ್ಬಂದಿ ಗಳಾದ ಗಣೇಶ್ ನೆಟ್ಪ್ರ, ಗಣೇಶ್ ಪ್ರಸಾದ್ ನಾಗರಾಜ್, ರಾಘವೇಂದ್ರ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.