Sunday, January 19, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ- ಕಹಳೆ ನ್ಯೂಸ್

ಬೆಳ್ತಂಗಡಿ: ಪುರಾಣ ಪ್ರಸಿದ್ಧ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ 7ನೇ ದಿನ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವದ ವರ್ಧಂತಿ ಯ ಪ್ರಯುಕ್ತ ಫೆ.18 ರಂದು ಬೆಳಿಗ್ಗೆ ಗಣಹೋಮ, ಶತರುದ್ರಾಭಿಷೇಕ , ಮಧ್ಯಾಹ್ನ ಪ್ರಸನ್ನ ಪೂಜೆ, ಅನ್ನಸಂತರ್ಪಣೆ , ರಾತ್ರಿ ಶ್ರೀ ದೇವರ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಚಂದ್ರಮAಡಲೋತ್ಸವ , ಅಶ್ವಥಕಟ್ಟೆ ಪೂಜೆ, ರಂಗಪೂಜೆ ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು .

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆಲ್ಲಗುತ್ತು ಸಬ್ರಬೈಲು ಕೆ. ಜಯವರ್ಮರಾಜ ಬಳ್ಳಾಲ್ ಹಾಗೂ ಸಹೋದರ ಸಹೋದರಿಯರು ಕುಟುಂಬಸ್ಥರು ಮತ್ತು ಊರ – ಪರ ಊರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು