Sunday, January 19, 2025
ಬೆಂಗಳೂರುಸಿನಿಮಾಸುದ್ದಿ

ಸೆಲ್ಫಿಗೆ ಬೇಡಿಕೆ ಇಟ್ಟ ಅಭಿಮಾನಿ ಮೇಲೆ ಹಲ್ಲೆ ಆರೋಪ : ನಟ ಧನ್ವೀರ್ ವಿರುದ್ಧ ಎಫ್ ಐ ಆರ್ ದಾಖಲು – ಕಹಳೆ ನ್ಯೂಸ್

ಬೆಂಗಳೂರು: ಸೆಲ್ಫಿಗೆ ಬೇಡಿಕೆ ಇಟ್ಟ ಅಭಿಮಾನಿಗೆ ನಟ ಧನ್ವೀರ್ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಎಸ್. ಸಿ .ರಸ್ತೆಯಲ್ಲಿನ ಅನುಪಮಾ ಥಿಯೇಟರ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಟನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಬೈ ಟೂ ಲವ್ ಸಿನಿಮಾ ರಿಲೀಸ್ ಸಂಬಂಧ ಧನ್ವೀರ್ ಅನುಪಮಾ ಥಿಯೇಟರ್‍ಗೆ ತೆರಳಿದ್ದ ವೇಳೆ ಅಭಿಮಾನಿ ಚಂದ್ರಶೇಖರ್ ಎಂಬವರು ಧನ್ವೀರ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಬೇಡಿಕೆ ಇಟ್ಟಿದ್ದಾರೆ. ಆದರೆ ಧನ್ವೀರ್ ಇದನ್ನು ನಿರಾಕರಿಸಿದ್ದಾರೆನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದ ಬೇಸರಗೊಂಡ ಚಂದ್ರಶೇಖರ್ ಅಸಮಾಧಾನ ಹೊರ ಹಾಕಿದ್ದು, ಈ ವೇಳೆ ಧನ್ವೀರ್ ಹಾಗೂ ಅವರ ಜೊತೆಗಿದ್ದ ಬೌನ್ಸರ್ ಗಳು ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂದಿದ್ದು, “ಕೇವಲ 2 ಪ್ಲಾಪ್ ಸಿನಿಮಾಗಳನ್ನು ಮಾಡಿಯೇ ಅಭಿಮಾನಿಗಳ ಮೇಲೆ ಈ ರೀತಿ ಎಗರಾಡುತ್ತಿದ್ದಾರೆ. ಇನ್ನೇನಾದರೂ ಹಿಟ್ ಸಿನಿಮಾ ನೀಡಿದ್ದರೆ, ಈತ ನೆಲದಲ್ಲಿ ನಿಲ್ಲುತ್ತಿರಲಿಲ್ಲ” ಎಂದು ನೆಟ್ಟಿಗರು ಧನ್ವೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.