Recent Posts

Sunday, January 19, 2025
ಸುದ್ದಿ

ವರ್ಷ ೨೦೧೯ ರ ಚುನಾವಣೆಯಲ್ಲಿ ‘ಜೋ ಹಿಂದೂ ರಾಷ್ಟ್ರ ಕಾ ಕಾರ್ಯ ಕರೇಗಾ, ವಹಿ ದೇಶ ಪೆ ರಾಜ ಕರೇಗಾ’ ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ರಾಮನಾಥಿ (ಗೋವಾ) – ೨೦೧೯ ರ ಚುನಾವಣೆಯು ಸಮೀಪಿಸುತ್ತಿದೆ. ಈ ಸಮಯದಲ್ಲಿ ಹಿಂದುತ್ವವಾದಿಗಳ ನಿಲುವು ಏನಿರುವುದು, ಮತ್ತೊಮ್ಮೆ ಭಾಜಪದ ಕೈಗೆ ಅಧಿಕಾರವನ್ನು ಕೊಡುತ್ತೀರಾ ಎಂಬಂತಹ ಪ್ರಶ್ನೆಯನ್ನು ಕೇಳಲಾಗುತ್ತಿದೆ; ಆದರೆ ಚುನಾವಣೆಯಿಂದ ಪ್ರಜಾಪ್ರಭುತ್ವದ ಕೇವಲ ಒಂದು ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಯಾಗಬಹುದು, ಉಳಿದ ಎಲ್ಲ ವ್ಯವಸ್ಥೆಗಳು ‘ಸೆಕ್ಯುಲರ್’ವಾಗಿಯೇ ಉಳಿಯುತ್ತದೆ. ಅದರ ಪರಿಣಾಮದಿಂದ ದೇಶದಲ್ಲಿ ಇಂದಿಗೂ ಹಿಂದೂ ಬಹುಸಂಖ್ಯಾತರನ್ನು ದುರ್ಲಕ್ಷಿಸಿ ಒಂದುಗಂಟು ಇರುವ ಅಲ್ಪಸಂಖ್ಯಾತರ ತುಷ್ಟೀಕರಣದ ಆಧಾರದಲ್ಲಿ ರಾಜಕೀಯ ನಡೆಯುತ್ತಿದೆ, ಆದ್ದರಿಂದ ಯಾವುದೇ ಸರಕಾರಕ್ಕೆ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡದೇ ಬೇರೆ ಪರ್ಯಾಯವಿಲ್ಲ.

ಅದಕ್ಕಾಗಿ ಬಹುಸಂಖ್ಯಾತ ಹಿಂದೂಗಳು ಇಂದಿನಿಂದಲೇ ಸಂಘಟಿತರಾಗಿ ಹಿಂದೂಗಳ ಒತ್ತಡ, ನಿಯಂತ್ರಣದ ರಾಜಕೀಯವನ್ನು ಮಾಡುವ ಆವಶ್ಯಕತೆ ಇದೆ. ೨೦೧೪ ರ ಚುನಾವಣೆಯ ಸಮಯದಲ್ಲಿ ನೀಡಿದಂತಹ ಆಶ್ವಾಸನೆಯ ಬಗ್ಗೆ ಹಿಂದೂಗಳನ್ನು ಊಹಿಸಿದ್ದ ಭಾಜಪ ಸರಕಾರ ಅದನ್ನು ಮರೆತಿದೆ; ಆದ್ದರಿಂದ ಹಿಂದುತ್ವವಾದಿಗಳು ಇಂದಿನಿಂದಲೇ ನಮ್ಮ ಬೇಡಿಕೆಯನ್ನು ನಿಶ್ಚಿತಗೊಳಿಸಿ ಅದನ್ನು ರಾಜಕಾರಣಿಗಳ ಮುಂದೆ ಇಡಬೇಕಾಗಿದೆ. ಅವರು ಅದನ್ನು ಎಂದಿನ ತನಕ ಪೂರ್ಣಗೊಳಿಸುವರು, ಎಂಬುದು ಕೇಳಬೇಕು. ಇಂದು ಅಭಿವೃದ್ಧಿಯ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ; ಆದರೆ ಅಭಿವೃದ್ಧಿಯು ಹಿಂದುತ್ವಕ್ಕೆ ಪರ್ಯಾಯವಲ್ಲ, ನಮಗೆ ‘ಹಿಂದುತ್ವ ಸಹಿತ ಅಭಿವೃದ್ಧಿ’ ಅಪೇಕ್ಷಿತವಿದೆ. ಇಂದು ಹಿಂದುತ್ವವಾದಿಗಳ ಅಧಿಕಾರವಿದ್ದರೂ ಅಯೋಧ್ಯೆಯಲ್ಲಿ ಭಗವಾನ ಶ್ರೀರಾಮನ ದೇವಸ್ಥಾನ, ಕಾಶ್ಮೀರದಲ್ಲಿ ಹಿಂದೂಗಳಿಗೆ ಪುನರ್ವಸತಿ ಕನಸಾಗಿಯೇ ಉಳಿದಿದ್ದು ನಿಜವಾದ ಅಭಿವೃದ್ಧಿ ಅಧಿಕಾರವನ್ನು ಭೋಗಿಸುವವರದ್ದಾಗುತ್ತಿದೆ. ಅದಕ್ಕಾಗಿಯೇ ಈಗ ಹಿಂದುತ್ವವಾದಿ ಪಕ್ಷವು ತಮ್ಮ ಹಿಂದೂ ರಾಷ್ಟ್ರದ ಸಂದರ್ಭದಲ್ಲಿಯ ನಿಲುವನ್ನು ಸ್ಪಷ್ಟಪಡಿಸುವ ಅವಶ್ಯಕತೆ ಇದೆ. ಹಿಂದೂಗಳ ನಿಜವಾದ ಹಿತರಕ್ಷಣೆಯು ಹಿಂದೂ ರಾಷ್ಟ್ರ ಸ್ಥಾಪಿಸಿದ ಮೇಲೆ ಆಗುವುದು. ಆದ್ದರಿಂದ ಮುಂದಿನ ಬರಲಿರುವ ಚುನಾವಣೆಯಲ್ಲಿ ‘ಜೋ ಹಿಂದೂ ರಾಷ್ಟ್ರ ಕಾ ಕಾರ್ಯ ಕರೇಗಾ, ವಹಿ ದೇಶ ಪೆ ರಾಜ ಕರೇಗಾ’ (ಯಾರು ಹಿಂದೂ ರಾಷ್ಟ್ರದ ಕಾರ್ಯ ಮಾಡುವರೋ, ಅವರೇ ದೇಶದ ಮೇಲೆ ರಾಜ್ಯವಾಳುವರು’), ಇದು ಹಿಂದುತ್ವವಾದಿಗಳ ಬೇಡಿಕೆ ಇರುವುದು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಹೇಳಿದರು. ಇವರು ರಾಮನಾಥಿ, ಗೋವಾದಲ್ಲಿಯ ಶ್ರೀ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಸಪ್ತಮ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿಯ ಮೂರನೇ ದಿನದ ಭಾಗದಲ್ಲಿ ’೨೦೧೯ ರಲ್ಲಿ ಆಗಲಿರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಿಂದುತ್ವನಿಷ್ಠರ ನಿಲುವು’ ಈ ವಿಷಯದಲ್ಲಿ ಮಾತನಾಡುತ್ತಿದ್ದರು.
ಈ ಸಮಯದಲ್ಲಿ ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ ನ ಅಧ್ಯಕ್ಷರಾದ ನ್ಯಾಯವಾದಿ ಹರಿ ಶಂಕರ ಜೈನ್, ನೇಪಾಳದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಪವಿತ್ರ ಖಡಕಾ ಮುಂತಾದವವರು ಉಪಸ್ಥಿತರಿದ್ದರು. ಇಂದು ಕಾರ್ಯಕ್ರಮದ ಆರಂಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಡಾ. ಮಾಧವ ಭಟ್ಟರಾಯಿ ಇವರನ್ನು, ಅದೇ ರೀತಿ ಝಾರಖಂಡನಲ್ಲಿಯ ಸಮಿತಿಯ ಪೂ. ಪ್ರದೀಪ ಖೇಮಕಾ ಇವರು ನ್ಯಾಯವಾದಿ ಹರಿ ಶಂಕರ ಜೈನ್ ಇವರನ್ನು ವಿಶೇಷವಾಗಿ ಸನ್ಮಾನ ಮಾಡಲಾಯಿತು. ಈ ಸಮಯದಲ್ಲಿ ಉಪಸ್ಥಿತ ಗಣ್ಯರ ಹಸ್ತದಿಂದ ಆಂಗ್ಲ ಭಾಷೆಯ ಸನಾತನದ ‘ಸ್ವಭಾವದೋಷ (ಷಡ್ರಿಪು) ನಿರ್ಮೂಲನೆಯ ಮಹತ್ವ ಹಾಗೂ ಗುಣ ಸಂವರ್ಧನೆ ಪ್ರಕ್ರಿಯೆ’ ಈ ಗ್ರಂಥವನ್ನು ಪ್ರಕಾಶಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ನೇಪಾಳ ಸಹಿತ ಭಾರತದಲ್ಲಿಯೂ ‘ಹಿಂದೂ ರಾಷ್ಟ್ರ’ದ ಸ್ಥಾಪನೆಯಾಗಲು ಕೊನೆಯ ಉಸಿರಿರುವವರೆಗೂ ಹೋರಾಡುವೆವು !

ಜಾಹೀರಾತು
ಜಾಹೀರಾತು
ಜಾಹೀರಾತು

– ಡಾ. ಮಾಧವ ಭಟ್ಟರಾಯಿ, ಅಧ್ಯಕ್ಷರು, ರಾಷ್ಟ್ರೀಯ ಧರ್ಮಸಭಾ ನೇಪಾಳ, ಕಾಠ್ಮಾಂಡು, ನೇಪಾಳ

ಭಾರತದಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಹಾಗೂ ‘ಯುರೋಪಿಯನ್ ಯುನಿಯನ್’ನ ಒತ್ತಡದಿಂದ ೨೦೧೬ ರಲ್ಲಿ ರಾಜತಂತ್ರವನ್ನು ವಿಸರ್ಜಿಸಿ ‘ಜಾತ್ಯತೀತ’ ಸಂವಿಧಾನವನ್ನು ಜಾರಿಗೆ ತಂದರು. ನೇಪಾಳದ ಸಂಸತ್ತಿನಲ್ಲಿ ಇಂದು ೨/೩ ಕ್ಕೂ ಹೆಚ್ಚು ಪ್ರತಿನಿಧಿಗಳು ಕಮ್ಯುನಿಸ್ಟ್ ಹಾಗೂ ಮಾವೋವಾದಿಗಳಾಗಿದ್ದಾರೆ. ನೇಪಾಳದಲ್ಲಿ ಕೇವಲ ಶೇ. ೧ ರಷ್ಟು ಕ್ರೈಸ್ತ ಧರ್ಮೀಯರಿದ್ದು ಅವರೇ ಪೂರ್ಣ ನೇಪಾಳದಲ್ಲಿ ರಾಜ್ಯವನ್ನಾಳುತ್ತಿದ್ದಾರೆ. ಇಂದು ಕ್ರೈಸ್ತರು ಶಿಕ್ಷಣ, ಆರೋಗ್ಯ ಮತ್ತು ಇತರ ಸೇವೆಗಳ ಮಾಧ್ಯಮದಿಂದ ನೇಪಾಳದಲ್ಲಿ ಪಾಶ್ಚಾತ್ಯ ವಿಕೃತಿಯ ಪ್ರಭಾವವನ್ನು ಆರಂಭಿಸಿದ್ದಾರೆ. ಈ ಪರಿಸ್ಥಿತಿಯಲ್ಲಿಯೂ ನಾವು ನೇಪಾಳದ ಜೊತೆ ಭಾರತವನ್ನೂ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕೊನೆಯ ಉಸಿರು ಇರುವವರೆಗೂ ಹೋರಾಡುವೆವು, ಎಂದು ಕಾಠ್ಮಾಂಡು(ನೇಪಾಳ) ಇಲ್ಲಿಯ ‘ರಾಷ್ಟ್ರೀಯ ಧರ್ಮಸಭಾ ನೇಪಾಳ’ದ ಅಧ್ಯಕ್ಷ ಹಾಗೂ ಸೇಪಾಳದ ರಾಜಗುರು ಡಾ. ಮಾಧವ ಭಟ್ಟರಾಯಿ ಇವರು ‘ನೇಪಾಳದ ಸದ್ಯದ ಸ್ಥಿತಿ, ಸಂಘಟಿತರಾದ ವಿವಿಧ ಹಿಂದೂ ಮತ್ತು ನೇಪಾಳವನ್ನು ‘ಹಿಂದೂ ರಾಷ್ಟ್ರ’ ಮಾಡಲು ಪ್ರಯತ್ನ’ ಈ ವಿಷಯದ ಬಗ್ಗೆ ಹೇಳಿದರು.

ರಾಮಂದಿರ ನಿರ್ಮಾಣ ಮಾಡಲು ವಿರೋಧಿಸುವುದೆಂದರೆ ರಾಷ್ಟ್ರಕ್ಕೆ ವಿರೋಧಿಸಿದಂತೆ ! – ನ್ಯಾಯವಾದಿ ಹರಿ ಶಂಕರ ಜೈನ್, ಅಧ್ಯಕ್ಷರು, ಹಿಂದೂ ಫ್ರಂಟ್ ಫಾರ್ ಜಸ್ಟೀಸ್

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪೂಜೆ ಮಾಡುವುದು, ಇದು ಸಂವಿಧಾನಿಕವಾಗಿದ್ದು ಅದನ್ನು ಸಂವಿಧಾನವು ಒಪ್ಪಿದೆ. ಆದ್ದರಿಂದ ರಾಮಮಂದಿರವನ್ನು ಕಟ್ಟುವುದು ರಾಷ್ಟ್ರದ ಕರ್ತವ್ಯವೇ ಆಗಿದೆ. ರಾಮಮಂದಿರ ನಿರ್ಮಾಣ ಮಾಡಲು ವಿರೋಧಿಸುವುದೆಂದರೆ ರಾಷ್ಟ್ರಕ್ಕೆ ವಿರೋಧಿಸಿದಂತೆ ಆಗುತ್ತದೆ. ರಾಮಮಂದಿರವನ್ನು ಕಟ್ಟಲು ದೇಶದಲ್ಲಿ ಜನಾಭಿಪ್ರಾಯವನ್ನು ನಿರ್ಮಿಸುವುದು ಅವಶ್ಯಕವಿದೆ. ರಾಮಮಂದಿರ ನಿರ್ಮಾಣ ಆಗುತ್ತಿದ್ದಂತೆ ಹಿಂದೂ ರಾಷ್ಟ್ರ ಸ್ಥಾಪನೆಯ ಅಡಚಣೆ ದೂರವಾಗುವುದು ಮತ್ತು ಎರಡೂ ಒಟ್ಟಿಗೆ ಸ್ಥಾಪನೆಯಾಗುವುದು, ಎಂದು ನ್ಯಾಯವಾದಿ ಹರಿ ಶಂಕರ ಜೈನ್ ಇವರು ಹೇಳಿದರು.
ಅಧಿವೇಶನದ ಎರಡನೇ ದಿನದ ಸಾಯಂಕಾಲ ಸಮಯದಲ್ಲಿ ಹಿಂದೂ ಸಮಾಜದ ರಕ್ಷಣೆಯ ಸವಾಲುಗಳು, ಸದ್ಯದ ಪ್ರಜಾಪ್ರಭುತ್ವದಲ್ಲಿ ಹಬ್ಬಿದ ಪಿಡುಗುಗಳನ್ನು ತಡೆಯಲು ಮಾಡಬೇಕಾದ ಪ್ರಯತ್ನ ಇತ್ಯಾದಿ ವಿಷಯದ ಬಗ್ಗೆ ಉಪಸ್ಥಿತ ಗಣ್ಯರು ಹಿಂದುತ್ವನಿಷ್ಠರನ್ನು ಸಂಬೋಧಿಸಿದರು.