Saturday, November 23, 2024
ದಕ್ಷಿಣ ಕನ್ನಡಸುದ್ದಿ

ಕೈಕಾರ: ಪುಂಡಿಕಾಯಿ ರಕ್ತೇಶ್ವರಿ, ಪರಿವಾರ ದೈವಗಳ ದೈವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಬಿಡುಗಡೆ – ಕಹಳೆ ನ್ಯೂಸ್

ಕೈಕಾರ: ಒಳಮೊಗ್ರು ಗ್ರಾಮದ ಕೈಕಾರ ಪುಂಡಿಕಾಯಿ ಕುಟುಂಬಸ್ಥರು ಅರಾಧಿಸಿಕೊಂಡು ಬರುತ್ತಿರುವ ರಕ್ತೇಶ್ವರಿ, ಪರಿವಾರ ದೈವಗಳು, ನಾಗಸಾನಿಧ್ಯದ ಬ್ರಹ್ಮಕಲಶೋತ್ಸವು ಫೆ. 27, 28 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಕಾರ್ಯಕ್ರಮ ಪೂರ್ವಭಾವಿಯಾಗಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಪುಂಡಿಕಾಯಿ ರಕ್ತೇಶ್ವರಿ ದೈವಸ್ಥಾನದ ಅವರಣದಲ್ಲಿ ನಡೆಯಿತು. ಕುಟುಂಬದ ಯಜಮಾನರಾದ ಬಾಬು ಶೆಟ್ಟಿ ಪುಂಡಿಕಾಯಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮದ ಯಶಸ್ವಿಗೆ ಸರ್ವರ ಸಹಕಾರ ನೀಡುವಂತೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕುಟುಂಬಸ್ಥರಾದ ರಾಮಣ್ಣ ರೈ ,ಗಣೇಶ್ ರೈ, ಮಹಾಲಿಂಗ ರೈ , ವಿಶ್ವನಾಥ ರೈ , ಮನೋಜ್ ಶೆಟ್ಟಿ, ನವೀನ್ ರೈ , ರಂಜಿತ್ ರೈ , ಶಾರದ ರೈ , ದಿವಾಕರ ಆಚಾರ್ಯ ಸೇರಿದಂತೆ ಊರಿನ ಸಮಸ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ವಿವರ – ಫೆಬ್ರವರಿ 27 ರಂದು ಸಂಜೆ 6 ಗಂಟೆಗೆ ದೇವತಾ ಪ್ರಾರ್ಥನೆ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜಾಬಲಿ ನಡೆಯಲಿದೆ.

ಫೆಬ್ರುವರಿ 28 ರಂದು ಬೆಳಗ್ಗೆ ಗಣಪತಿ ಹೋಮ, ಸಾನಿಧ್ಯ ಕಲಶಪೂಜೆ, ನಾಗನ ಕಟ್ಟೆ, ರಕ್ತೇಶ್ವರಿ ,ಗುಳಿಗ ದೈವಗಳ ಸಾನಿಧ್ಯ ಕಲಶಾಭಿಷೇಕ, ತಂಬಿಲಸೇವೆ, ಮಹಾಮಂಗಳರಾತಿ, ಅನ್ನ ಸಂತರ್ಪಣೆ, ನಡೆಯಲಿದೆ.
ಮಾರ್ಚ್ 01 ರಂದು ರಕ್ತೇಶ್ವರಿ ಮತ್ತು ಗುಳಿಗ ದೈವದ ನೇಮೋತ್ಸವ ನಡೆಯಲಿದೆ