ಜಿಹಾದಿಗಳಿಂದ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ತನ್ನ ಒಂದು ತಿಂಗಳ ನಗರಸಭೆಯ ವೇತನ ನೀಡಿ ಮಾದರಿಯಾದ ಪುತ್ತೂರು ನಗರಸಭಾ ಸದಸ್ಯ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ ಜಗನ್ನಿವಾಸ್ ರಾವ್ – ಕಹಳೆ ನ್ಯೂಸ್
ಪುತ್ತೂರು,ಫೆ.21: ಶಿವಮೊಗ್ಗದಲ್ಲಿ ನಿನ್ನೆ ಹತ್ಯೆಗೀಡಾದ ಹಿಂದೂ ಪರ ಹೋರಾಟಗಾರ, ಬಜರಂಗದಳ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ಹಣಕಾಸಿನ ನೆರವಿನ ಅವಶ್ಯಕತೆ ಇದೆ ಎಂಬ ಸಾಮಾಜಿಕ ಜಾಲಾತಾಣದ ಮೆಸೇಜ್ ಕಂಡು ಪುತ್ತೂರಿನ ರಾಜಕೀಯ ಮುಖಂಡರೊಬ್ಬರು ತಮ್ಮ ತಿಂಗಳ ವೇತನವನ್ನು ನೀಡಿದ್ದಾರೆ.
ಪುತ್ತೂರು ನಗರಮಂಡಲ ಬಿಜೆಪಿ ಅಧ್ಯಕ್ಷ, ಪುತ್ತೂರು ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ್ ರಾವ್ ಅವರು ತಮ್ಮ ನಗರಸಭಾ ಸದಸ್ಯತನ ವೇತನವನ್ನು ಹರ್ಷ ಅವರ ತಾಯಿ ಶ್ರೀಮತಿ ಪದ್ಮ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ಜಗನ್ನಿವಾಸ್ ರಾವ್ ಅವರನ್ನು ಮಾತನಾಡಿಸಿದಾಗ ”ಸಂಘ ಪರಿವಾರದ ಕೃಪೆಯಿಂದ ಪಕ್ಷದ ಜವಾಬ್ದಾರಿ ಪಡೆದಿದ್ದು ಅದರ ಋಣವನ್ನು ತೀರಿಸುವ ಇಚ್ಛೆಯಂತೆ ತಿಂಗಳ ವೇತನವನ್ನು ನೊಂದ ಹರ್ಷ ಕುಟುಂಬಕ್ಕೆ ನೀಡಿದ್ದೇನೆ. ಇದು ನನ್ನ ವಯ್ಯಕ್ತಿಕ ಇಚ್ಛೆಯಿಂದ ಮನಸ್ಸಿಗೆ ತೋಚಿ ಮಾಡಿದ್ದೇನೆ. ದೇಶ ದ್ರೋಹಿಗಳಿಗೆ ಹಣವನ್ನು ನೀಡಿ ಪೋಷಿಸುವವರು ಇರುವಾಗ ದೇಶ ಭಕ್ತ, ಧರ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿ ವಿದ್ರೋಹಿಗಳ ಕತ್ತಿ ಏಟಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವುದು ಆತ್ಮತೃಪ್ತಿಯ ಕೆಲಸವಾಗಿದ್ದು ಅದನ್ನು ಮಾಡಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಕಂಡು ಅದರಿಂದ ಪ್ರೇರೇಪಣೆ ಪಡೆದು ಈ ಕಾರ್ಯ ಮಾಡಿದ್ದೇನೆ ಹೊರತು ಪ್ರಚಾರಕ್ಕಾಗಿ ಮಾಡಿರುವುದಲ್ಲ” ಎಂದು ಜಗನ್ನಿವಾಸ್ ರಾವ್ “ಕಹಳೆ ನ್ಯೂಸ್”ಗೆ ತಿಳಿಸಿದ್ದಾರೆ.