ಜಿಹಾದಿಗಳಿಂದ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ತನ್ನ ಒಂದು ತಿಂಗಳ ವೇತನ ನೀಡಿ ಮಾದರಿಯಾದ ಕರಾವಳಿಯ ಶಾಸಕ ಡಾ. ಭರತ್ ಶೆಟ್ಟಿ – ಕಹಳೆ ನ್ಯೂಸ್
ಪುತ್ತೂರು,ಫೆ.22 : ಶಿವಮೊಗ್ಗದಲ್ಲಿ ನಿನ್ನೆ ಹತ್ಯೆಗೀಡಾದ ಹಿಂದೂ ಪರ ಹೋರಾಟಗಾರ, ಬಜರಂಗದಳ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ಹಣಕಾಸಿನ ನೆರವಿನ ಅವಶ್ಯಕತೆ ಇದೆ ಎಂಬ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ. ಈ ಸಂದರ್ಭದಲ್ಲಿ ಬಿಜೆಪಿ ಶಾಸಕರೊಬ್ಬರು ತಮ್ಮ ತಿಂಗಳ ವೇತನವನ್ನು ನೀಡಿದ್ದಾರೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ತಮ್ಮ ಒಂದು ತಿಂಗಳ ವೇತನದ ಜೊತೆಗೆ ಆಲೋವೆಸ್ಸನ್ನು ನೀಡುತ್ತೇನೆ ಎಂದು ತಮ್ಮ ಫೇಸ್‌ಬುಕ್ ಹಾಗೂ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಕಹಳೆ ನ್ಯೂಸ್ ಸಂಪಾದಕರ ಜೊತೆ ಮಾತನಾಡಿದ ಶಾಸಕರು ನಾನು ಹಿಂದೂ ಸಂಘಟನೆಯ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಪರಿಶ್ರಮದ ಫಲವಾಗಿ ಶಾಸಕನಾಗಿದ್ದೇನೆ. ಕಾರ್ಯಕರ್ತರ ಹಾಗೂ ಹಿಂದೂ ಸಮಾಜದ ಋಣವನ್ನು ತೀರಿಸುವ ಇಚ್ಛೆಯಂತೆ ತಿಂಗಳ ವೇತನವನ್ನು ನೊಂದ ಹರ್ಷ ಕುಟುಂಬಕ್ಕೆ ನೀಡಿದ್ದೇನೆ. ಇದು ನನ್ನ ವಯ್ಯಕ್ತಿಕ ಇಚ್ಛೆಯಿಂದ ಮನಸ್ಸಿಗೆ ತೋಚಿ ಮಾಡಿದ್ದೇನೆ. ದೇಶ ದ್ರೋಹಿಗಳಿಗೆ ಹಣವನ್ನು ನೀಡಿ ಪೋಷಿಸುವವರು ಇರುವಾಗ ದೇಶ ಭಕ್ತ, ಧರ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿ ವಿದ್ರೋಹಿಗಳ ಕತ್ತಿ ಏಟಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವುದು ಆತ್ಮತೃಪ್ತಿಯ ಕೆಲಸವಾಗಿದ್ದು ಅದನ್ನು ಮಾಡಿದ್ದೇನೆ. ಎಂದು ಶಾಸಕರು ” ಕಹಳೆ ನ್ಯೂಸ್”ಗೆ ತಿಳಿಸಿದ್ದಾರೆ.
ಶಾಸಕ ಡಾ. ಭರತ್ ಶೆಟ್ಟಿ ಫೇಸ್‌ಬುಕ್ ಪೋಸ್ಟ್ :
” ಮತಾಂಧರ ದುಷ್ಕೃತ್ಯಕ್ಕೆ ಇಂದು ನಾವು ನಮ್ಮ ಯುವ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಈ ಸಂದರ್ಭದಲ್ಲಿ ನಾವು ಮಾಡಬಹುದಾದ ಕನಿಷ್ಠವೆಂದರೆ ಅವರ ಕುಟುಂಬವನ್ನು ಬೆಂಬಲಿಸುವುದು.
ನನ್ನ 1 ತಿಂಗಳ ಸಂಬಳ ಮತ್ತು allowancesಅನ್ನು ಹರ್ಷ ಅವರ ಕುಟುಂಬಕ್ಕೆ ನೀಡುತ್ತಿದ್ದೇನೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬದ ಬೆಂಬಲಕ್ಕೆ ನಿಲ್ಲೋಣ. ನೊಂದ ಕುಟುಂಬಕ್ಕೆ ಆಸರೆಯಾಗೋಣ. ” ಎಂದು ಪೋಸ್ಟ್ ಹಾಕಿದ್ದಾರೆ.