Wednesday, January 22, 2025
ಬೆಂಗಳೂರುರಾಜ್ಯಸಿನಿಮಾಸುದ್ದಿ

ದಕ್ಷಿಣ ಭಾರತದ ಕ್ಯೂಟ್ ನಟಿ ಪ್ರಣಿತಾ ಸುಭಾಷ್ ಗೆ UAEನಿಂದ ಗೋಲ್ಡನ್ ವೀಸಾ..! ; ಕನ್ನಡಿಗರಿಗೆ ಹೆಮ್ಮೆಯ ವಿಷಯ – ಕಹಳೆ ನ್ಯೂಸ್

ಬೆಂಗಳೂರು: ದಕ್ಷಿಣ ಭಾರತದ ಕ್ಯೂಟ್ ನಟಿ ಪ್ರಣಿತಾ ಸುಭಾಷ್ UAEನಿಂದ ಗೋಲ್ಡನ್ ವೀಸಾ ಸ್ವೀಕರಿಸಿದ್ದಾರೆ.

ಬಹುಭಾಷಾ ನಟಿಯಾಗಿರುವ ಪ್ರಣಿತಾ ಟ್ಟಿಟ್ಟರ್ ನಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಿಂದ ಗೋಲ್ಡನ್ ವೀಸಾ ಸ್ವೀಕರಿಸುತ್ತಿರುವುದು ಗೌರವದ ವಿಷಯವಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಯುಎಇ ಗೋಲ್ಡನ್ ವೀಸಾದಿಂದ ಅರಬ್ ನಲ್ಲಿ ಬೇರೆ ರಾಷ್ಟ್ರದ ಪ್ರಜೆಗಳು ಜೀವನ ನಡೆಸುವ, ಕೆಲಸ ಮಾಡುವ ಮತ್ತು ಓದುವ ಅವಕಾಶಗಳು ಇರುತ್ತೆ. ಆ ಗೌರವವನ್ನು ಕನ್ನಡದ ನಟಿ ಪ್ರಣಿತಾ ಪಡೆದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ದಕ್ಷಿಣ ಭಾರತದ ಖ್ಯಾತ ನಟಿಯಾಗಿರುವ ಪ್ರಣಿತಾ 2010 ರಂದು ‘ಪೊರ್ಕಿ’ ಕನ್ನಡ ಸಿನಿಮಾದ ಮೂಲಕ ಬಣ್ಣದ ಜಗತ್ತಿಗೆ ಪಾದರ್ಪಣೆ ಮಾಡಿದರು. ನಂತರ ಹಲವು ಕನ್ನಡ ಸ್ಟಾರ್ ನಟರ ಜೊತೆ ನಟಿಸಿದ ಈ ತಾರೆ ಟಾಲಿವುಡ್, ಕಾಲಿವುಡ್ ನಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅಲ್ಲದೆ ದಕ್ಷಿಣ ಭಾರತದ ಬಹುತೇಕ ಸ್ಟಾರ್ ನಟರ ಜೊತೆ ಇವರು ನಟಿಸಿದ್ದಾರೆ. ಪ್ರಸ್ತುತ ಸಮಾಜಸೇವೆ ಎಂದು ಈ ನಟಿ ಬ್ಯುಸಿಯಾಗಿದ್ದಾರೆ. ಕೊರೊನಾ ಸಮಯದಲ್ಲಿಯೂ ಪ್ರಣಿತಾ ಜನರಿಗೆ ಸಹಾಯ ಮಾಡಿದ್ದಾರೆ.