Wednesday, January 22, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ : ಅತ್ತ ಕಾಲೇಜಿಗೂ ಹೋಗದೆ, ಇತ್ತ ಮನೆಗೂ ಬಾರದೆ ನಾಪತ್ತೆಯಾದ ವಿದ್ಯಾರ್ಥಿ – ಕಹಳೆ ನ್ಯೂಸ್

ಬೆಳಾಲು: ಮಡಂತ್ಯಾರ್ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ್ ಎಂಬವರು ಫೆ.21 ರಂದು ಕಾಲೇಜಿಗೆಂದು ಹೋದವರು, ಅತ್ತ ಕಾಲೇಜಿಗೂ ಹೋಗದೆ, ಇತ್ತ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ.

ಬೆಳಾಲು ನಿವಾಸಿ ಜೆರಾಲ್ಡ್ ಡಿ’ಸೋಜಾ ಮತ್ತು ಪ್ರಮೀಳಾ ದಂಪತಿಗಳ ಪುತ್ರರಾಗಿರುವ ಪ್ರಥಮ್, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಫೆ.21 ರಂದು ಮನೆಯಿಂದ ಕಾಲೇಜಿಗೆಂದು ತೆರಳಿದವರು, ತರಗತಿಗೂ ಹಾಜರಾಗದೆ, ಮರಳಿ ಮನೆಗೂ ಬಾರದೆ ನಾಪತ್ತೆಯಾಗಿದ್ದು, ತಮ್ಮ ಮಗನನ್ನು ಪತ್ತೆ ಮಾಡಿಕೊಡುವಂತೆ ವಿದ್ಯಾರ್ಥಿಯ ಹೆತ್ತವರು ಧರ್ಮಸ್ಥಳ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿದ್ಯಾರ್ಥಿಯ ಸುಳಿವು ಪತ್ತೆಯಾದಲ್ಲಿ ಮೊಬೈಲ್ ಸಂಖ್ಯೆ: 9535085602 ಸಂಪರ್ಕಿಸುವಂತೆ ಕೋರಲಾಗಿದೆ.