Thursday, January 23, 2025
ಬೆಂಗಳೂರುಸಿನಿಮಾಸುದ್ದಿ

ನಟನಾ ಕ್ಷೇತ್ರಕ್ಕೆ ನಟಿ ಮೇಘನಾ ರಾಜ್ ರೀ ಎಂಟ್ರಿ..! : – ಕಹಳೆ ನ್ಯೂಸ್

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಮೇಘನಾ ರಾಜ್ ಇದೀಗ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದು ಸಿನಿಪ್ರಿಯರು, ಅದರಲ್ಲೂ ಮೇಘನಾ ಅಭಿಮಾನಿಗಳು ಸಖತ್ ಖುಷಿಯಲ್ಲಿದ್ದಾರೆ.

ಬಹುಭಾಷಾ ತಾರೆ ಎನಿಸಿಕೊಂಡಿರುವ ಮೇಘನಾ ರಾಜ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಹೌದು, ಹಲವಾರು ಕಾರಣಗಳಿಂದ ನಟನಾ ಕ್ಣೇತ್ರದಿಂದ ದೂರವಿದ್ದ ಮೇಘನಾ ರಾಜ್ ಇದೀಗ ತಮ್ಮ ಸ್ನೇಹಿತ ಪನ್ನಗ ನಿರ್ದೇಶನದ ಇನ್ನೂ ಹೆಸರಿಡಬೇಕಾಗಿರುವ ಸಿನಿಮಾದಲ್ಲಿ ನಟಿಸುವ ಮೂಲಕ ನಟನೆಗೆ ಕಂ ಬ್ಯಾಕ್ ಮಾಡಿದ್ದಾರೆ. ಅಲ್ಲದೆ ಮಗದೊಂದು ಸಿನಿಮಾದಲ್ಲಿ ನಟಿಸುತ್ತಿವುದಾಗಿ ಕೂಡ ಮೇಘನಾ ರಾಜ್ ಅವರು ಹಂಚಿಕೊ0ಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

“ನನ್ನ ಮುಂದಿನ ಸಿನಿಮಾ ‘ಶಬ್ದ’ವನ್ನು ಅನೌನ್ಸ್ ಮಾಡುತ್ತಿದ್ದೇನೆ. ಇರುವುದೆಲ್ಲವ ಬಿಟ್ಟು ಸಿನಿಮಾ ತಂಡದೊ0ದಿಗೆ ಮತ್ತೆ ಸೇರಿಕೊಳ್ಳುತ್ತಿರುವುದು ಖುಷಿ ತಂದಿದೆ. ಇರುವುದೆಲ್ಲವ ಬಿಟ್ಟು ಸಿನಿಮಾಕ್ಕಾಗಿ ನನಗೆ ರಾಜ್ಯ ಪ್ರಶಸ್ತಿ ಕೂಡ ದೊರಕಿತ್ತು. ಚಿತ್ರತಂಡದ ಬಗ್ಗೆ ನನಗೆ ತುಂಬಾ ಗೌರವ ಇದೆ. ಈ ಟೀಮ್ ಜತೆಗೆ ಎರಡನೇ ಬಾರಿ ಕೆಲಸ ಮಾಡುವ ಸುವರ್ಣಾವಕಾಶ ಸಿಕ್ಕಿರುವುದು ಪುಣ್ಯವೇ ಸರಿ” ಎಂದು ಮೇಘನಾ ರಾಜ್ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಕಲರ್ಸ್ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿರುವ ಮೇಘನಾ ರಾಜ್ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ನೀಡಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಉಂಟುಮಾಡಿದೆ.