Wednesday, January 22, 2025
ದಕ್ಷಿಣ ಕನ್ನಡಬೆಳ್ತಂಗಡಿರಾಜಕೀಯರಾಜ್ಯಸುದ್ದಿ

ನಮ್ಮ ಕಾರ್ಯಕರ್ತನ ಮನೆಯಲ್ಲಿ ಕತ್ತಲು ಆವರಿಸಲು ನಾವು ಬಿಡುವವರಲ್ಲ – ಒಂದು ಲಕ್ಷ ರೂಪಾಯಿ ನೀಡಿ ಪ್ರಚಾರ ಬೇಡ, ಇದರಿಂದ ಪ್ರೇರಣೆಗೊಂಡು ಇನ್ನಷ್ಟು ಕೈಗಳು ಜೊತೆಗೂಡಲಿ ಎಂದ ಶಾಸಕ ಹರೀಶ್ ಪೂಂಜ – ಕಹಳೆ ನ್ಯೂಸ್

ಪುತ್ತೂರು,ಫೆ.22 : ಶಿವಮೊಗ್ಗದಲ್ಲಿ ನಿನ್ನೆ ಹತ್ಯೆಗೀಡಾದ ಹಿಂದೂ ಪರ ಹೋರಾಟಗಾರ, ಬಜರಂಗದಳ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ಹಣಕಾಸಿನ ನೆರವಿನ ಅವಶ್ಯಕತೆ ಇದೆ ಎಂಬ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ‌ ಹರೀಶ್ ಪೂಂಜ ಒಂದು ಲಕ್ಷ ರೂಪಾಯಿ ನೀಡಿದ್ದಾರೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಒಂದು ಲಕ್ಷ ರೂಪಾಯಿ ನೀಡೊ ಪ್ರಚಾರ ಬೇಡ ಪ್ರೇರಣೆ ಸಿಗಲಿ ಎಂದು ತಮ್ಮ ಫೇಸ್‌ಬುಕ್‌ ಹಾಗೂ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಕಹಳೆ ನ್ಯೂಸ್ ಸಂಪಾದಕರ‌ ಜೊತೆ ಮಾತನಾಡಿದ ಶಾಸಕರು ನಾನು ಹಿಂದೂ ಸಂಘಟನೆಯ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಪರಿಶ್ರಮದ ಫಲವಾಗಿ ಶಾಸಕನಾಗಿದ್ದೇನೆ. ಕಾರ್ಯಕರ್ತರ ಹಾಗೂ ಹಿಂದೂ ಸಮಾಜದ ಋಣವನ್ನು ತೀರಿಸುವ ನನ್ನ ಕರ್ತವ್ಯ ಈ ದೃಷ್ಟಿಯಿಂದ ನನ್ನ ಕಿಂಚಿತ್ತು ಒಂದು ಲಕ್ಷ ರೂಪಾಯಿ ನೊಂದ ಹರ್ಷ ಕುಟುಂಬಕ್ಕೆ ನೀಡಿದ್ದೇನೆ. ದೇಶ ದ್ರೋಹಿಗಳಿಗೆ ಹಣವನ್ನು ನೀಡಿ ಪೋಷಿಸುವವರು ಇರುವಾಗ ದೇಶ ಭಕ್ತ, ಧರ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿ ವಿದ್ರೋಹಿಗಳ ಕತ್ತಿ ಏಟಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವುದು ಆತ್ಮತೃಪ್ತಿಯ ಕೆಲಸವಾಗಿದ್ದು ಅದನ್ನು ಮಾಡಿದ್ದೇನೆ. ಎಂದು ಶಾಸಕರು ” ಕಹಳೆ ನ್ಯೂಸ್”ಗೆ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕ ಹರೀಶ್ ಪೂಂಜ ಫೇಸ್‌ಬುಕ್‌ ಪೋಸ್ಟ್ :

” ನಮ್ಮ ಕಾರ್ಯಕರ್ತನ ಮನೆಯಲ್ಲಿ ಕತ್ತಲು ಆವರಿಸಲು ನಾವು ಬಿಡುವವರಲ್ಲ…

ನನ್ನ ಸಾಮಾಜಿಕ ಬದ್ಧತೆಯಾಗಿ ಈ ಮಣ್ಣಿನ ಸಂಸ್ಕಾರ ಸಂಸ್ಕೃತಿಯ ಉಳಿವಿಗೆ ಬಲಿದಾನ ಮಾಡಿದ ವೀರನಿಗೆ ನನ್ನ ಕಿಂಚಿತ್ ಕಾಣಿಕೆಯಾಗಿ ಒಂದು ಲಕ್ಷವನ್ನು ನೀಡುತ್ತಿದ್ದೇನೆ.

ಪ್ರಚಾರ ಬೇಡ, ಇದರಿಂದ ಪ್ರೇರಣೆಗೊಂಡು ಇನ್ನಷ್ಟು ಕೈಗಳು ಜೊತೆಗೂಡಲಿ. ” ಎಂದು‌ ಪೋಸ್ಟ್ ಹಾಕಿದ್ದಾರೆ.