Sunday, November 24, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಕಾಲೇಜಿನ ನಾರಾಯಣ ಕುಂಬ್ರರವರ ಮುಡಿಗೇರಿದ ಸಾಹಿತ್ಯ ಸಿಂಧು ಪ್ರಶಸ್ತಿ –ಕಹಳೆ ನ್ಯೂಸ್

ವಿವೇಕಾನಂದ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದಲ್ಲಿ ಲ್ಯಾಬ್ ಸಹಾಯಕರಾಗಿರುವ ನಾರಾಯಣ ಕುಂಬ್ರರವರಿಗೆ ಸಾಹಿತ್ಯ ಸಿಂಧು ಪ್ರಶಸ್ತಿ ಭಿಸಿದೆ. ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ವತಿಯಿಂದ ಸಾಹಿತಿ, ಜ್ಯೋತಿಷಿ, ಸಂಘಟಕ, ಗಾಯಕ, ನಟ, ನಿರ್ದೇಶಕರು ಆದ ಎಚ್. ಭೀಮ ರಾವ್ ವಾಷ್ಟರ್ ರವರ 46 ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಚಂದನ ಕವಿ ಕಾವ್ಯ ಸಮ್ಮೇಳನ -2022 ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ದಿನಾಂಕ -20-2-2022ರಂದು ನಡೆಯಿತು.

ರಾಜ್ಯಮಟ್ಟದ ಚಂದನ ಕವಿಗೋಷ್ಠಿ, ಮೂರು ಕೃತಿಗಳ ಬಿಡುಗಡೆ, ಚಂದನ ಸೌರಭ ಪ್ರಶಸ್ತಿ, ಚಂದನ ಕವಿ ಕಾವ್ಯ ಗೋಷ್ಠಿ, ಸಾಧಕರಿಗೆ 2022 ನೇ ಸಾಲಿನ ವಿವಿಧ ಪ್ರಶಸ್ತಿಗಳ ಪ್ರಧಾನ ಸಮಾರಂಭದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದಲ್ಲಿ ಲ್ಯಾಬ್ ಸಹಾಯಕರು ಆಗಿರುವ ಶ್ರೀ ನಾರಾಯಣ ಕುಂಬ್ರ ರವರಿಗೆ ಕೆಲವಾರು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಸಾಹಿತ್ಯ ಸಿಂಧು ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳು ಆದ ಶ್ರೀ ನಾರಾಯಣ ರೈ ಕುಕ್ಕುವಳ್ಳಿಯವರು ನೀಡಿ ಗೌರವಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೋಹನ್ ನಂಗಾರು ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಚಂದನ ಸಾಹಿತ್ಯ ವೇದಿಕೆಯ ಸ್ಥಾಪಕಾಧ್ಯಕ್ಷರು ಶ್ರೀ ಎಚ್. ಭೀಮರಾವ್ ವಾಷ್ಟರ್, ಡಾ. ಹಾಜಿ ಅಬೂಬಕ್ಕರ್ ಆರ್ಲಪದವು, ಎಂ. ಬಿ. ಸಂತೋಷ್ ಮೈಸೂರು ಸಾಹಿತಿಗಳು ಮತ್ತು ಕವಿ, ಶ್ರೀ. ವೈಲೇಶ್. ಪಿ. ಎಸ್. ಕೊಡಗು ಉಪಸ್ಥಿತರಿದ್ದರು.