Wednesday, January 22, 2025
ಬೆಂಗಳೂರುರಾಜಕೀಯರಾಜ್ಯಸುದ್ದಿ

ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲ ಎಲ್ಲಾ ಕಡೆ ಹಿಜಾಬ್ ಬ್ಯಾನ್ ಮಾಡಿ ; ವಿಶ್ವಸಂತೋಷ ಭಾರತೀ ಶ್ರೀ – ಕಹಳೆ ನ್ಯೂಸ್

ಶಿವಮೊಗ್ಗ: ಇಲ್ಲಿನ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆಗೆ ಹಿಜಾಬ್ ವಿವಾದ ಸಹಾ ಒಂದು ಕಾರಣ. ಕೇವಲ ಶಾಲಾ ಕಾಲೇಜಿಗಳಲ್ಲಿ ಮಾತ್ರವಲ್ಲದೆ ಬಹುತೇಕ ಕಡೆ ಹಿಜಾಬ್ ನಿಷೇಧ ಮಾಡಬೇಕು ಎಂದು ತೀರ್ಥಹಳ್ಳಿ ಬೆಜ್ಜವಳ್ಳಿ ಮಠದ ಡಾ. ವಿಶ್ವಸಂತೋಷ ಭಾರತೀ ಶ್ರೀ ಗುರೂಜಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಮೊಗ್ಗದ ಹರ್ಷ ಮನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆಯಲ್ಲಿ ನಕಲು ಮಾಡಲು ಹಿಜಾಬ್ ಬಳಕೆಯಾಗುತ್ತದೆ. ಬ್ಯಾಂಕ್ ದರೋಡೆಗೂ ಬಳಕೆಯಾಗುತ್ತದೆ. ಹಿಜಾಬ್ ಧರಿಸಿ ಆಭರಣದಂಗಡಿಗಳಲ್ಲಿ ಕಳ್ಳತನ ಮಾಡುವ ಸಾಧ್ಯತೆ ಇದೆ. ಈಗಾಗಿ ಕೇವಲ ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲ ಎಲ್ಲಾ ಕಡೆ ಹಿಜಾಬ್ ಬ್ಯಾನ್ ಮಾಡಿ ಎಂದು ಒತ್ತಾಯಿಸಿದರು.

ಹಿಜಾಬ್ ಹಾಕಿ ಬರುವ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿ, ಇದರಿಂದ ಇತರರು ಬುದ್ದಿ ಕಲಿಯುತ್ತಾರೆ ಎಂದು ಸಂತೋಷ್ ಗುರೂಜಿ ಹೇಳಿದರು.

ಎನ್ ಕೌಂಟರ್ ಮಾಡಿ: ಹರ್ಷ ಕೊಲೆ ಆರೋಪಿಗಳಿಗೆ ಬೇರೆ ಶಿಕ್ಷೆ ಬೇಡ, ಎನ್ ಕೌಂಟರ್ ಮಾಡಿ‌. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಗೆ ಸಾಧ್ಯವಾಗುವುದು ಇವರಿಗೆ ಯಾಕೆ ಆಗುವುದಿಲ್ಲ? ಇಲ್ಲಿನ ಗುಂಡು ಅಪರಾಧಿಗಳ ಒಳಗೆ ಹೋಗುವುದಿಲ್ಲವೇ ಎಂದು ಸಂತೋಷ್ ಗುರೂಜಿ ಪ್ರಶ್ನಿಸಿದರು.

ಜೈಲಿನಲ್ಲಿ ಬಿರಿಯಾನಿ: ಕೊಲೆ ಮಾಡಿದವರಿಗೆ ಜೈಲಿನಲ್ಲಿ ಬಿರಿಯಾನಿ, ಟಿವಿ ವ್ಯವಸ್ಥೆ ಮಾಡಲಾಗುತ್ತದೆ. ಈ ಹಿಂದೆಯೂ ಶಿವಮೊಗ್ಗದಲ್ಲಿ ಹಲವು ಕೊಲೆ ನಡೆದಿದೆ. ಜೈಲಿಗೆ ಹೋದವರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ಸ್ವಲ್ಪ ದಿನದಲ್ಲೇ ಜಾಮೀನಿನ ಮೇಲೆ ಹೊರ ಬರುತ್ತಾರೆ. ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿರುವವರೇ ಟಾರ್ಗೆಟ್ ಮಾಡಿ ಕೊಲೆ ಮಾಡಲಾಗುತ್ತಿದೆ ಎಂದು ಸಂತೋಷ್ ಗುರೂಜಿ ಗಂಭೀರ ಆರೋಪ ಮಾಡಿದರು.