Wednesday, January 22, 2025
ರಾಜ್ಯಸುದ್ದಿ

8000 ಮೌಲ್ಯದ ಮೊಬೈಲ್ 1800 ರೂಪಾಯಿಗೆ ; ಮೊಬೈಲ್ ಬುಕ್ ಮಾಡಿದವನಿಗೆ ಬಂದಿದ್ದು ಸೋನ್ ಪಪ್ಪಡಿ ಪಾಕೆಟ್ – ಕಹಳೆ ನ್ಯೂಸ್

ಚಿಕ್ಕಬಳ್ಳಾಪುರ: ಆನ್‍ಲೈನ್ ಮೂಲಕ ಮೊಬೈಲ್ ಬುಕ್ ಮಾಡಿದ ಗ್ರಾಹಕನಿಗೆ ಸೋನ್ ಪಪ್ಪಡಿ ಪಾಕೆಟ್ ಪಾರ್ಸೆಲ್ ಬಂದಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಕಾಂಡಿಮೆಂಟ್ಸ್ ಮಾಲೀಕನಾಗಿರುವ ಮಂಜುನಾಥ್ ಅವರಿಗೆ ದೂರವಾಣಿ ಕರೆಯೊಂದು ಬಂದಿದೆ. ಆನ್‍ಲೈನ್ ನಂಬರಿನಿಂದ ಕರೆ ಮಾಡಿರುವ ಯುವತಿ ಲಕ್ಕಿ ಡಿಪ್‍ನಲ್ಲಿ ನಿಮ್ಮ ಮೊಬೈಲ್ ನಂಬರ್‍ಗೆ ಲಾಟರಿ ಹೊಡೆದಿದೆ. 8000 ಮೌಲ್ಯದ ಮೊಬೈಲ್ 1800ಗೆ ಕೊಡುತ್ತೇವೆ ಎಂದು ಹೇಳಿದ್ದಾರೆ. ನಿಜ ಅಂತ ನಂಬಿದ ಮಂಜುನಾಥ್ ಮೊಬೈಲ್ ಅರ್ಡರ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ಅಂಚೆ ಕಚೇರಿ ಮೂಲಕ ಪಾರ್ಸೆಲ್ ಬಂದಿದೆ. 1800 ರೂಪಾಯಿ ಕೊಟ್ಟು ಪಾರ್ಸೆಲ್ ಪಡೆದು ಓಪನ್ ಮಾಡಿದಾಗ ಅದರಲ್ಲಿ ಸೋನ್ ಪಪ್ಪಡಿ ಪಾಕೆಟ್ ಇದೆ. ಜೊತೆಗೆ ಎರಡು ಚೈನ್‍ಗಳಿವೆ. ಪಾರ್ಸೆಲ್ ಮೇಲೆ ಅಕ್ಷತಾ ಮಾರ್ಕೆಟಿಂಗ್ ಕಂಪನಿ ಅಂತ ಪ್ರಿಂಟ್ ಮಾಡಲಾಗಿದೆ. ಅದೇ ಯುವತಿಗೆ ಕರೆ ಮಾಡಿ ಮೊಬೈಲ್ ಬದಲು ಸೋನ್ ಪಪ್ಪಡಿ ಕಳಿಸಿರುವ ದೋಖಾ ಕಂಪನಿ ವಿರುದ್ಧ ದೂರು ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಚ್ಚರಿಕೆ ನಂತರ ದುಡ್ಡು ವಾಪಾಸ್ ಮಾಡುವ ಭರವಸೆ ನೀಡಿದ್ದಾಳೆ. ಆದರೆ ಇದೇ ರೀತಿ ಪ್ರತಿನಿತ್ಯ ಗ್ರಾಹಕರಿಗೆ ಕರೆ ಮಾಡಿ ಮೋಸ ಮಾಡುವ ಜಾಲವೇ ಇದ್ದು ಗ್ರಾಹಕರು ಯುವತಿಯರ ನಯವಂವಚನೆಯ ಮಾತಿಗಳಿಗೆ ಮರುಳಾಗಬೇಡಿ ಮೋಸ ಹೋಗದಿರಿ.