Thursday, April 3, 2025
ಹೆಚ್ಚಿನ ಸುದ್ದಿ

ಮಗುವಿನ ಚಿಕಿತ್ಸೆಗೆ ಧನಸಹಾಯ ನೀಡಿ ಮಾನವೀಯತೆ ಮೆರೆದ ಭಾರತೀಯ ಕ್ರಿಕೆಟಿಗ ಕೆ.ಎಲ್.ರಾಹುಲ್ – ಕಹಳೆ ನ್ಯೂಸ್

ಮುಂಬೈ: ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ಕ್ರಿಕೆಟ್ ಆಟಗಾರ ಕೆ.ಎಲ್.ರಾಹುಲ್ ಧನ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಐದನೇ ತರಗತಿ ವಿದ್ಯಾರ್ಥಿಯಾಗಿರುವ ವರದ್ ನಲ್ವಾಡೆ(11) ಅಪರೂಪದ ಬಿಎಂಟಿ ರೋಗದಿಂದ ಬಳಲುತ್ತಿದ್ದು, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಕ್ಕೆ ಚಿಕಿತ್ಸಾ ವೆಚ್ಚ ಭರಿಸುವುದು ಅಸಾಧ್ಯವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂಬೈ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವರದ್ ನಲ್ವಾಡೆ ಚಿಕಿತ್ಸೆಗಾಗಿ ವಿಮಾ ಏಜೆಂಟ್ ಆಗಿರುವ ವರದ್ ತಂದೆ ಸಚಿನ್ ಮತ್ತು ತಾಯಿ ಸ್ವಪ್ನಾ ದಾನಿಗಳಲ್ಲಿ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ರಾಹುಲ್ 31 ಲಕ್ಷ ರೂಪಾಯಿ ನೆರವು ನೀಡಿ ಮಗುವಿನ ಪ್ರಾಣ ಉಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ