Sunday, January 19, 2025
ಕ್ರೀಡೆದಕ್ಷಿಣ ಕನ್ನಡಸುದ್ದಿ

ಮಾ. 5ರಂದು ಬತ್ತೇರಿ ಫ್ರೆಂಡ್ಸ್ (ರಿ), ಬೋಳೂರು ವತಿಯಿಂದ ಜಿಲ್ಲಾ ಮಟ್ಟದ ಪುರುಷರ ಪ್ರೊ. ಕಬಡ್ಡಿ ಪಂದ್ಯಾಟ – ಕಹಳೆ ನ್ಯೂಸ್

ಮಂಗಳೂರು : ಮಾ. 5ರಂದು ಬತ್ತೇರಿ ಫ್ರೆಂಡ್ಸ್ (ರಿ), ಬೋಳೂರು, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ) ಹಾಗೂ ಮಂಗಳೂರು ತಾಲೂಕು (ಸಿಟಿ) ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ) ಇದರ ಸಹಯೋಗದೊಂದಿಗೆ ಮಂಗಳೂರಿನ ಸುಲ್ತಾನ್ ಬತ್ತೇರಿ ಬೀಚ್ ಮೈದಾನದಲ್ಲಿ ಜಿಲ್ಲಾ ಮಟ್ಟದ ಪುರುಷರ ಪ್ರೊ. ಕಬಡ್ಡಿ ಟೂರ್ನಮೆಂಟ್ ಹೊನಲು ಬೆಳಕಿನ ಪಂದ್ಯಾಟ ನಡೆಯಲಿದೆ.

ಸಮಾರಂಭ ಕಾರ್ಯಕ್ರಮವನ್ನು ಮಂಗಳೂರು ದಕ್ಷಿಣ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರ ಉದ್ಘಾಟಿಸಲಿದ್ದು, ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೋಳೂರು ಮೊಗವೀರ ಮಹಾಸಭಾ (ರಿ) ನ ಅಧ್ಯಕ್ಷರಾದ ರಾಜಶೇಖರ್ ಕರ್ಕೇರ, ಉರ್ವ ಮಾರಿಯಮ್ಮ ದೇವಸ್ಥಾನದ ಆಡಳಿತ ಮೋಕ್ತೇಸರರಾದ ದೇವಾನಂದ ಗುಜರನ್ ಮತ್ತಿತ್ತರರು ಭಾಗವಹಿಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸಮಾರೋಪ ಕಾರ್ಯಕ್ರಮದಲ್ಲಿ ಕಾಂಚನ್ ಮೋಟಾರ್ಸ್ ಮಾಲಕರಾದ ಪ್ರಸಾದ್ ರಾಜ್ ಕಾಂಚನ್, ಕಾಪು, ಉಡುಪಿ ಶಾಸಕರಾದ ಲಾಲಾಜಿ ಮೆಂಡನ್, ಮಾಜಿ ಸಚಿವರು ಪ್ರಮೋದ್ ಮದ್ವರಾಜ್, ಇನ್ನಿತ್ತರರು ಭಾಗಿಯಾಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು