ಪುತ್ತೂರು : ಪ್ರಪಂಚದಾದ್ಯ0ತ ವಿಶ್ವ ಮಾತೃಭಾಷಾ ದಿನಾಚರಣೆ ಆಚರಿಸಲಾಗುತ್ತದೆ. ಇದರ ಮೂಲ ಉದ್ದೇಶ ಬಹು ಭಾಷೆ ಮತ್ತು ಬಹು ಸಂಸ್ಕೃತಿಯನ್ನು ಗುರುತಿಸಿ, ಉಳಿಸಿ, ಪ್ರೋತ್ಸಾಹಿಸುವಂತದ್ದು ಎಂದು ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಹೇಳಿದರು.
ವಿವೇಕಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಮತ್ತು ಲಲಿತ ಕಲಾ ಸಂಘದಆಶ್ರಯದಲ್ಲಿ ‘ವಿಶ್ವ ಮಾತೃ ಭಾಷಾ ದಿನ’ದ ಪ್ರಯುಕ್ತ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಾತೃಭಾಷೆ ಎನ್ನುವಂತದ್ದು ಸಂಸ್ಕೃತಿಯ ಒಂದು ಭಾಗ. ಸಂಸ್ಕೃತಿಯನ್ನು ಬೇರೆ ಭಾಷೆಗೆಅನುವಾದ ಮಾಡಲು ಸಾಧ್ಯವಿಲ್ಲ. ಆದರೆ ಇದರ ವಿವರಗಳನ್ನು ಕೊಡಬಹುದು ಅಷ್ಟೇ. ಮಾತೃಭಾಷೆ ಸಂಸ್ಕೃತಿಯ ಪ್ರತಿರೂಪ. ಒಂದೊ0ದು ಪ್ರದೇಶದಲ್ಲೂ ಹಲವಾರು ಮಾತೃಭಾಷೆಗಳಿವೆ ಅವು ಸಂಸ್ಕೃತಿಯನ್ನು ರೂಪಿಸಿ ಗುರುತಿಸುವಲ್ಲಿ ಸಹಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಪಂಚದಾದ್ಯ0ತ ವಿಶ್ವಸಂಸ್ಥೆಯದಾಖಲೆಯ ಪ್ರಕಾರ ಆರು ಸಾವಿರಕ್ಕಿಂತಲೂ ಹೆಚ್ಚಿನ ಭಾಷೆಗಳು ಇವೆ. ಅದರಲ್ಲಿ ೬೩ಕ್ಕು ಹೆಚ್ಚು ಭಾಷೆಗಳು ಅಳಿವಿನಂಚಿನಲ್ಲಿದೆ. ಅವುಗಳನ್ನು ಪ್ರೋತ್ಸಾಹಿಸುವ ಕೆಲಸ ವಿಶ್ವಸಂಸ್ಥೆಯದಾಗಿದ್ದು ಈ ಕಾರ್ಯಕ್ಕಾಗಿ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಸಾಂಸ್ಕೃತಿಕ ಆಯೋಗದ ವತಿಯಿಂದ ಫೆಬ್ರವರಿ ೨೧ರಂದು ವಿಶ್ವ ಮಾತೃ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ತಮ್ಮ ಮಾತೃಭಾಷೆಯ ಅಧಿಕೃತ ಸ್ಥಾನಕ್ಕಾಗಿ ಹೋರಾಡಿದ ವಿದ್ಯಾರ್ಥಿಗಳ ಪ್ರತಿಭಟನೆ ತ್ಯಾಗ-ಬಲಿದಾನಗಳ ಸ್ಮರಣೆಗಾಗಿ ಪ್ರತಿ ವರ್ಷ ಫೆಬ್ರವರಿ 21 ನ್ನು ಮಾತೃ ಭಾಷಾ ದಿನಾಚರಣೆಯ ದಿನವಾಗಿ ಪ್ರಪಂಚದಾದ್ಯ0ತ ಆಚರಿಸಲಾಗುತ್ತದೆ. ಮಾತೃಭಾಷೆಯೂ ಸಾಂಸ್ಕೃತಿಕ ಭಾವನೆಯನ್ನು ಹೆಚ್ಚಿಸುತ್ತದೆ ಎಂದು ಮಾತೃಭಾಷೆ ದಿನಾಚರಣೆಯ ಇತಿಹಾಸ ಮತ್ತು ಮಹತ್ವವನ್ನು ತಿಳಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ಶುಭಾ ಅಡಿಗ ಹಾಗೂ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ಉಪಸ್ಥಿತರಿದ್ದರು. ಕಾಲೇಜಿನ ಲಲಿತಕಲಾ ಸಂಘದ ಸಂಯೋಜಕ ಡಾ. ಶ್ರೀಶಕುಮಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು.