ಜಪ್ಪಿನಮೊಗರು ವಾರ್ಡಿನಲ್ಲಿ 60 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್
ಮಂಗಳೂರು : ಮಹಾನಗರ ಪಾಲಿಕೆಯ ಜಪ್ಪಿನಮೊಗರು ವಾರ್ಡಿನಲ್ಲಿ 60 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಯಿಂದ ವೈದ್ಯನಾಥ ದ್ವಾರ ಸಂಪರ್ಕಿಸುವ ಸೇತುವೆಯ ಅಭಿವೃದ್ಧಿಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಿಂದ 60 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಹಿಂದೆ ಇಲ್ಲಿನ ನಾಗರಿಕರಿಗೆ ನೀಡಿದ ಭರವಸೆಯಂತೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಯಿಂದ ಜಪ್ಪಿನಮೊಗರು ಹೋಗುವ ಪ್ರಮುಖ ಜಂಕ್ಷನ್ ನಲ್ಲಿ ಈಗಿರುವ ಸೇತುವೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲಾಗುವುದು. ಸೇತುವೆಯ ಅಭಿವೃದ್ಧಿಯಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ದಟ್ಟಣೆ ಕೂಡ ಕಡಿಮೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಭಾಸ್ಕರ್, ಮುಖಂಡರಾದ ಚಿತ್ತರಂಜನ್ ಬೋಳಾರ್, ಸಂದೇಶ್ ಶೆಟ್ಟಿ, ರಾಮ್ ಪ್ರಸಾದ್ ಶೆಟ್ಟಿ, ದೀಪಕ್, ನವೀನ್ ಕೊಟ್ಟಾರಿ, ಪುಷ್ಪರಾಜ್, ಸುಜಾತಾ ಕೊಟ್ಟಾರಿ, ಲೋಹಿತ್ ಶೆಟ್ಟಿ, ಜಗದೀಶ್ ಶೆಟ್ಟಿ, ಗಣೇಶ್ ಶೆಟ್ಟಿ, ಭಾಸ್ಕರ್ ಶೆಟ್ಟಿ, ಸಂತೋಷ್, ಬಾಲಕೃಷ್ಣ ಶೆಟ್ಟಿ, ನಾಗರಾಜ್ ಪೂಜಾರಿ, ರಾಜೇಶ್ ಸಾಲ್ಯಾನ್, ಗೀತಾ, ಶಕುಂತಲಾ, ಶಿಯಾಮ್ ಪ್ರಸಾದ್ ಕಡೆಕಾರ್, ಹರೀಶ್ ಕಡೆಕಾರ್, ಆಶಾ, ಲಕ್ಷ್ಮಿ ನಾರಾಯಣ, ಮಂಜಪ್ಪ ಗೌಡ, ಭಾಸ್ಕರ್, ಶರ್ಮಿಳಾ, ವನಿತಾ, ಉಷಾ, ಮೀನಾಕ್ಷಿ, ರವಿ ಆಚಾರಿ, ರಾಜೇಂದ್ರ, ಕೀರ್ತಿರಾಜ್, ಶಿವಕುಮಾರ್, ಗಣೇಶ್, ನಾಗೇಶ್, ಪ್ರವೀಣ್ ಕುಮಾರ್, ಉದಯ್, ಹರೀಶ್ ವಲ್ಲಿ, ಉದಯ ಡಿಸೋಜ, ಸಿಪ್ರಿಮ್ ಸ್ಟೀವನ್,ಸೋನು, ಉಮೇಶ್ ಅಧಿಕಾರಿ, ಮಧು, ಪ್ರವೀಣ್ ಕುಮಾರ್, ಆಲ್ಬರ್ಟ್ ಡಿಸೋಜ, ನಿಶಾನ್ ಪೂಜಾರಿ, ಅಶೋಕ್, ಜಯಪ್ರಕಾಶ್, ರಾಜೇಶ್, ಅಬ್ಬಾ ಡಿಸೋಜ, ಅಧಿಕಾರಿಗಳಾದ ಆರತಿ, ರೂಪಾ, ಸ್ಥಳೀಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.