ಬೆಳ್ತಂಗಡಿ: ಹಿಂದೂ ಯುವತಿಯೊಂದಿಗೆ ಅನ್ಯ ಕೋಮಿನ ಯುವಕನ ಮದುವೆ ; ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ – ಕಹಳೆ ನ್ಯೂಸ್
ಬೆಳ್ತಂಗಡಿ: ನಡ ಗ್ರಾಮದ ಕುತ್ರೊಟ್ಟುವಿನ ದೇವಾಲಯದಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕ ವಿವಾಹವು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಸತ್ಯನಾರಾಯಣ ದೇವಸ್ಥಾನದಲ್ಲಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಅರೆಹೊಳೆಯ ಸಫ್ವಾನ್ ಎಂಬಾತ ಅದೇ ಗ್ರಾಮದ ಹಿಂದೂ ಯುವತಿಯೊಂದಿಗೆ ವಿವಾಹವಾಗಿದ್ದು, ದೇವಾಲಯದಲ್ಲಿ ಸಾಮರಸ್ಯ ಕದಡಿದ ಬಗ್ಗೆ ತೀವ್ರ ಆಕ್ರೋಶವು ವ್ಯಕ್ತಪಡಿಸಿದ ಹಿಂದೂ ಸಂಘಟನೆಗಳು ಈ ಬಗ್ಗೆ ಕಿಡಿಕಾರಿದ್ದು, ನಗರ ಠಾಣೆಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಪ್ರಕರಣವನ್ನು ದಾಖಲಿಸಿದೆ.
ಸದ್ಯ ರಾಜ್ಯದೆಲ್ಲೆಡೆ ಹಿಜಾಬ್ ವಿಚಾರವಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಈ ಸಂದರ್ಭದಲ್ಲಿ ಇಂತಹ ಕೃತ್ಯವೂ ನಡೆದಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆದು ಸಾಮಾಜಿಕ ಸ್ವಾಸ್ಥ್ಯ ಕೆಡಿಸಲು ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಘಟನೆಯು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಘಟನೆಯ ತಾಲ್ಲೂಕು ಸಂಚಾಲಕ ಮನೋಜ್ ಕುಂಜರ್ಪ, ತಾಲ್ಲೂಕು ಕಾರ್ಯದರ್ಶಿ ಸಂದೀಪ್ ಶೆಟ್ಟಿ, ಸಾಮಾಜಿಕ ಜಾಲತಾಣ ಪ್ರಮುಖ್ ಪ್ರಜ್ವಲ್ ಗೌಡ ಕೆ. ವಿ. , ಪ್ರಮೋದ್ ಶೆಟ್ಟಿ ಪಾಣಿಯಾಲು, ಗಣೇಶ್ ಶೆಟ್ಟಿ ಮತ್ತು ಜಗದೀಶ್ ಶೆಟ್ಟಿ ನಿಡ್ಲೆ ಉಪಸ್ಥಿತರಿದ್ದರು.