Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

ಜಿಪಿಎಲ್‍ನಲ್ಲಿ ಹೆಲಿಕಾಪ್ಟರ್ ಜಾಲಿ ರೈಡ್ : ಸಹ್ಯಾದ್ರಿ ಕ್ರೀಡಾಂಗಣ ಕೊಡಿಯಾಲ್ ಸ್ಪೋಟ್ರ್ಸ್ ಅಸೋಸಿಯೇಶನ್ ಫುಜ್ಲಾನಾ ಜಿಪಿಎಲ್ ಉತ್ಸವ –ಕಹಳೆ ನ್ಯೂಸ್

ಮಂಗಳೂರು: ನೇತ್ರಾವತಿ ನದಿ ತೀರದ ಸಹ್ಯಾದ್ರಿ ಕ್ರೀಡಾಂಗಣ ಕೊಡಿಯಾಲ್ ಸ್ಪೋಟ್ರ್ಸ್ ಅಸೋಸಿಯೇಶನ್ ಆಯೋಜಿಸುವ ಫುಜ್ಲಾನಾ ಜಿಪಿಎಲ್ ಉತ್ಸವಕ್ಕೆ-2022ಕ್ಕೆ ಸಿದ್ಧಗೊಂಡಿದ್ದು, ಈ ಬಾರಿಯ ಟೂರ್ನಿಯಲ್ಲಿ ‘ಹೆಲಿ ಟೂರಿಸಂ’ ವಿಶೇಷ ಆಕರ್ಷಣೆಯಾಗಿದೆ.

ಫೆ. 25ರಿಂದ 27ರವರೆಗೆ ಈ ಟೂರ್ನಿ ನಡೆಯಲಿದ್ದು, ಕರ್ನಾಟಕ, ಮಹಾರಾಷ್ಟ್ರ, ಕೇರಳ, ತೆಲಂಗಾಣದ ಸೇರಿ ಕರಾವಳಿ ಕರ್ನಾಟಕವನ್ನು ಒಳಗೊಂಡ 16 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಪಿಎಲ್ ಉತ್ಸವದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಒಂದು ಭಾಗವಾದರೆ, ಇಡೀ ಉತ್ಸವ ವೈವಿಧ್ಯತೆ ಮೂಲಕ ಗಮನ ಸೆಳೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಲಿ ಟೂರಿಸಂ ವೈಶಿಷ್ಟ್ಯತೆ: ಶುಕ್ರವಾರದಿಂದ ಭಾನುವಾರದವರೆಗೆ ಹೆಲಿ ಟೂರಿಸಂ ಅವಕಾಶವನ್ನು ನೀಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿರುವ ಎಟಿಸಿ (ಏರ್‍ಟ್ರಾಫಿಕ್ ಕಂಟ್ರೋಲ್) ನಿಯಂತ್ರಣದಲ್ಲಿ ಈ ಹೆಲಿಕಾಪ್ಟರ್ ಪ್ರಯಾಣಿಸಲಿದ್ದು, ಒಬ್ಬರಿಗೆ 10ನಿಮಿಷಕ್ಕೆ 4 ಸಾವಿರ ರೂ. ದರ ವಿಧಿಸಲಾಗಿದೆ. ಏಕಕಾಲಕ್ಕೆ 6ಮಂದಿಗೆ ಸಂಚರಿಸಬಹುದಾಗಿದೆ. ಅಡ್ಯಾರ್ ಸಹ್ಯಾದ್ರಿ ಕ್ಯಾಂಪಸ್‍ನಿಂದ ಹೊರಟ ಈ ಹೆಲಿಕಾಪ್ಟರ್ ಉಳ್ಳಾಲ ಸೇತುವೆ, ಧಕ್ಕೆ, ಬೆಂಗರೆ, ಮಂಗಳೂರು ನಗರದಾದ್ಯಂತ ಸುತ್ತಾಡಿ ಮತ್ತೆ ಸಹ್ಯಾದ್ರಿ ಕ್ಯಾಂಪಸ್‍ನಲ್ಲೇ ಭೂಸ್ಪರ್ಶ ಆಗಲಿದೆ. ಸಾರ್ವಜನಿಕರ ಸ್ಪಂದನೆಯನ್ನು ಗಮನಿಸಿ ಸೋಮವಾರದವರೆಗೆ ಮುಂದುವರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನುತ್ತಾರೆ ಫುಜ್ಲಾನಾ ಜಿಪಿಎಲ್ ಟೂರ್ನಿಯ ಮುಖ್ಯಸ್ಥರಾದ ನರೇಶ್ ಶೆಣೈ.

 

120ಕ್ಕೂ ಅಧಿಕ ಮಂದಿ ಬುಕ್ಕಿಂಗ್: ಹೆಲಿ ಟೂರಿಸಂಗೆ ಈಗಾಗಲೇ 120ಮಂದಿ ಬುಕ್ಕಿಂಗ್ ಮಾಡಿದ್ದು, ಅವರಿಗೆ ಸಮಯ ನಿಗದಿಪಡಿಸುವ ಅವಧಿಯಲ್ಲಿ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 10ಗಂಟೆಯಿಂದ ಸಂಜೆ 6.00ಗಂಟೆಯವರೆಗೆ ಈ ಹೆಲಿಕಾಪ್ಟರ್ ನಗರ ಸಂಚಾರ ನಡೆಸಲಿದೆ.
ಬೋಟಿಂಗ್, ಕಿಡ್‍ರೆನ್: ಹೆಲಿ ಟೂರಿಸಂ ಮಾತ್ರವಲ್ಲದೆ ನೇತ್ರಾವತಿಯಲ್ಲಿ ಬೋಟಿಂಗ್ ವ್ಯವಸ್ಥೆ, ಮಕ್ಕಳಿಗೆ ಆಟವಾಡಲು ಕಿಡ್‍ರೆನ್ ನಿರ್ಮಿಸಲಾಗಿದೆ. ಗೂಡುದೀಪ ಸ್ಪರ್ಧೆ, ಕಸದಿಂದ ರಸ, ಆಭರಣಗಳ ತಯಾರಿ, ಮೆಹಂದಿ, ಕ್ಲೇ ಮಾಡೆಲಿಂಗ್, ಹೂ ಅಲಂಕಾರ, ಕೇಶ ವಿನ್ಯಾಸ, ಡ್ರಾಯಿಂಗ್, ಕೊಲಾಜ್, ಜಿಎಸ್‍ಬಿ ಟ್ಯಾಲೆಂಟ್, ಅಡುಗೆ ಪೊಸ್ಟರ್ ತಯಾರಿಕೆ, ಫ್ಯಾನ್ಸಿ ಡ್ರೆಸ್, ಟಗ್ ಆಫ್ ವಾರ್, ರಂಗೋಲಿ, ಮ್ಯೂಸಿಕ್ ವರ್ಕ್ ಶಾಪ್, ಹೌಸಿ ಹೌಸಿ ಸಹಿತ ಇನ್ನು ಹಲವು ಬಗೆಯ ಸ್ಪರ್ಧೆ ಆಯೋಜಿಸಲಾಗಿದೆ.

ಜಿಪಿಎಲ್‍ನ ಆಕರ್ಷಣೆಗಳು
1 ಖಾದ್ಯಗಳನ್ನು ಉಣಬಡಿಸಲು ವಿಶಾಲವಾದ ಫುಡ್ ಕೋರ್ಟ್ ವ್ಯವಸ್ಥೆ ಮಾಡಲಾಗಿದ್ದು, 100ಕ್ಕೂ ಅಧಿಕ ಬಗೆಯ ತಿಂಡಿ-ತಿನಸುಗಳು, ಐಸ್ ಕ್ರೀಂಗಳು, ಹಣ್ಣುಹಂಪಲುಗಳ ಸಹಿತ ಮೊಕ್‍ಟೇಲ್ ರುಚಿ ಸವಿಯಬಹುದಾಗಿದೆ.
2 ಇನ್ನು ಕಲಾತ್ಮಕ ಮನಸ್ಸಿನ ಮಹಿಳೆಯರಿಗೆ ಮತ್ತು ಚಿಣ್ಣರಿಗಾಗಿ ಮತ್ತು ಪುರುಷರಿಗಾಗಿ ನಾನಾ ಸ್ಪರ್ಧೆಗಳು, ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
3 ಗೋವಾ ಮತ್ತು ಕೊಚ್ಚಿ ಸಮುದ್ರ ತೀರಗಳಲ್ಲಿ ಮಾತ್ರ ಕಂಡು ಬರುವ ಫ್ಲೆ ಬೋರ್ಡ ಅನ್ನು ಈ ಬಾರಿ ಪರಿಚಯಿಸಲಾಗಿದೆ.
4 ತಜ್ಞರಿಂದ ಸಂವಾದ, ಶಾಪಿಂಗ್ ಮೇಳಾ, ಜಲಕ್ರೀಡೆ, ವೆವಾಹಿಕ (ಜ್ಯೋತಿಷ್ಯ ಸಹಿತ) ಸಂಬಂಧ, ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಕಲೆ, ಸಂಸ್ಕøತಿ ಪ್ರದರ್ಶನ ಕಾರ್ಯಕ್ರಮಗಳು.
5 ಜಿಎಸ್‍ಬಿ ಸಮುದಾಯದಲ್ಲಿ ಗೃಹ ಉತ್ಪನ್ನಗಳನ್ನು ತಯಾರಿಸಿ ಬದುಕು ಕಟ್ಟಿಕೊಂಡಿರುವ ಕಿರುವ್ಯಾಪಾರಿಗಳಿಗಾಗಿ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ.