Friday, April 11, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನ, ಕಲ್ಲೆಟ್ಟ : ಫೆ. 24ರಂದು ನಡೆದ 108 ತೆಂಗಿನಕಾಯಿ ಶ್ರೀ ಮಹಾಗಣಪತಿ ಹೋಮ, ಶ್ರೀ ಐಕ್ಯಮತ್ಯ ಸೂಕ್ತ ಹವನ, ಜಪ, – ಕಹಳೆ ನ್ಯೂಸ್

ಬಂಟ್ವಾಳ: ಬರಿಮಾರು ಗ್ರಾಮದ ಶ್ರೀ ಕಾನಲ್ತಾಯ ಮಹಾಕಾಳಿ ಕಲ್ಲೆಟ್ಟಿ ದೈವಸ್ಥಾನದಲ್ಲಿ ನಡೆದ ಅಷ್ಟಮಂಗಲ ಸ್ವರ್ಣಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಊರ-ಪರವೂರ ಸಮಸ್ತ ಭಕ್ತಾದಿಗಳ ಆಪತ್ತು ನಿವೃತ್ತಿ, ವಿಘ್ನ ನಿವಾರಣೆ, ಕಾರ್ಯ ಜಯ, ಮೃತ್ಯುಂಜಯ, ಐಕ್ಯಮತ್ಯ ಹಾಗೂ ಸಾನ್ನಿಧ್ಯಗಳ ಅನುಗ್ರಹ ಮತ್ತು ಇನ್ನಿತರ ಸಮಸ್ತ ದೋಷಗಳಿಗೆ ಪ್ರಾಯಶ್ಚಿತ್ತ ಪರಿಹಾರಗಳನ್ನು ಬ್ರಹ್ಮಶ್ರೀ ನೀಲೇಶ್ವರ ಕೆ. ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಸಿ, ಪ್ರಸಾದ ಪಡೆಯುವುದೆಂದು ತೀರ್ಮಾರ್ನಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅದರಂತೆ ಫೆ. 24ರಂದು ಬೆಳಗ್ಗೆ 8.00ರಿಂದ ಶ್ರೀ ಕಾನಲ್ಲಾಯ ಮಹಾಕಾಳಿ ಕಲ್ಲೆಟ್ಟಿ ದೈವಸ್ಥಾನದಲ್ಲಿ 108 ತೆಂಗಿನಕಾಯಿ ಶ್ರೀ ಮಹಾಗಣಪತಿ ಹೋಮ, ಶ್ರೀ ಐಕ್ಯಮತ್ಯ ಸೂಕ್ತ ಹವನ, ಜಪ, ಮೃತ್ಯುಂಜಯ ಶಾಂತಿ ಹವನ, ದ್ವಾದಶ ಮೂರ್ತಿ ಆರಾಧನೆ, ದ್ರವ್ಯ ದಂಡ ಪ್ರಾಯಶ್ಚಿತ ಸಮರ್ಪಣೆ, ಕೂಟ ಪ್ರಾರ್ಥನೆ ಇತ್ಯಾದಿ ಕಾರ್ಯಕ್ರಮಗಳು ನಡೆಯಿತು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ