Sunday, January 19, 2025
ಸುದ್ದಿ

ಐಸಿಸ್ ಭಯೋತ್ಪದಕರನ್ನು ಬಂಧಿಸಿ ಭಾರತದಿಂದ ಗಡೀಪಾರು ಮಾಡಿ – ಹಸಂತ್ತಡ್ಕ

ಪುತ್ತೂರು : ಮಂಗಳೂರಿನ ಸೌತ್ ಕೆನರಾ ಸಲಫಿ ಸಂಘಟನೆಯ ಮುಖಂಡ ಇಸ್ಮಾಯಿಲ್ ಶಾಫಿ ಎಂಬುವರ ಬ್ಯಾರಿ ಭಾಷೆಯಲ್ಲಿದ್ದ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆ, ವಿವಾದ ಸೃಷ್ಟಿಸಿದೆ. ಆಡಿಯೋದಲ್ಲಿ ಮಂಗಳೂರಿನ ಯುವಕರ ಗುಂಪೊಂದು ಸಿದ್ಧಾಂತವೊಂದರಿಂದ ಪ್ರಭಾವಿತರಾಗಿ ಈ ರೀತಿ ಸಂಘಟನೆ ಮಾಡುತ್ತಿದ್ದಾರೆ. ಐಸಿಸ್‌ ಮಾದರಿಯ ಕಪ್ಪು ಮತ್ತು ಕಂದು ಬಣ್ಣದ ಗೌನ್‌ ಹಾಕುತ್ತಿರುವ ಈ ಯುವಕರಲ್ಲಿ ಎಂಜಿನಿಯರ್‌ ಓದಿದ ಯುವಕರೂ ಇದ್ದಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ.
ಸಲಫೀ ದಮ್ಮಾಜ್ ಎಂಬ ತೀವ್ರವಾದಿ ಸಿದ್ಧಾಂತದಿಂದ ಪ್ರಭಾವಿತರಾಗಿ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸುತ್ತ ಮುತ್ತ ಕಾರ್ಯಾಚರಣೆ ನಡೆಸುತ್ತಿರುವ ಯುವಕರ ಗುಂಪೊಂದು ವಿದ್ಯಾರ್ಥಿಗಳ ಬ್ರೈನ್‌’ವಾಶ್ ಮಾಡುತ್ತಿದೆ. ಐಸಿಸ್ ಮಾದರಿಯಲ್ಲೇ ವಸ್ತ್ರ ಧರಿಸುವ ಇವರು ಕಪ್ಪು ಅಥವಾ ಕಂದು ಬಣ್ಣದ ಪೈಜಾಮಾ ಧರಿಸುತ್ತಾರೆ. ತಲೆಗೆ ಮುಂಡಾಸು ಅಥವಾ ಟೊಪ್ಪಿ ತೊಡುತ್ತಾರೆ. ಬಿ.ಸಿ.ರೋಡ್, ಕಲ್ಲಡ್ಕ, ಮಾರಿಪಳ್ಳ, ಉಳ್ಳಾಲದಲ್ಲಿ ಇಂಥ ಯುವಕರ ಗುಂಪು ಇದೆ ಎಂದು ಆಡಿಯೋದಲ್ಲಿ ಇಸ್ಮಾಯಿಲ್ ಹೇಳಿದ್ದಾರೆ.
ಐಸಿಸ್‌ ಮಾದರಿಯಲ್ಲೇ ಯುವಕರ ಸಂಘಟನೆಯೊಂದು ಕಾರ್ಯಾಚರಿಸುತ್ತಿರುವ ಬಗೆಗಿನ ಆಪಾದಿತ ವಿಡಿಯೋ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆ ಗಮನಕ್ಕೂ ಬಂದಿದ್ದು, ಅದರ ಆಡಿಯೋ ಈಗಾಗಲೇ ವೈರಲ್ ಆಗಿದೆ. ಅಲ್ಲದೇ ಗಮನಿಸಬೇಕಾದ ಅಂಶ ವೆಂದರೆ ಈ ಎಲ್ಲಾ ಅಕ್ರಮಗಳು ನಡೆಯುತ್ತಿರುವುದು ಸಚಿವ ರಮಾನಾಥ ರೈ ಮತ್ತು ಯು.ಟಿ. ಕಾದರ್ ಕ್ಷೇತ್ರಗಳಲ್ಲಿ. ಸವಚಿರ ಸ್ವಕ್ಷೇತ್ರದಲ್ಲಿ ಇಂತಹ ಭಯೋತ್ಪದಕ ಚಟುವಟಿಕೆಗಳು ನಡೆಯುತ್ತಿದ್ದರೂ ಸುಮ್ಮನ್ನಿರುತ್ತಾರೆ ಸಚಿವರು ಎಂದರೆ ಪರೋಕ್ಷವಾಗಿ ಸಚಿವರ ಕುಮ್ಮಕ್ಕು ಇವರಿಗೆ ಇರಬಹುದೇ ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿರುವ ವಿಷಯ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ಕುರಿತು ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಭಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತ್ತಡ್ಕ ಇದು ಕೇವಲ ಇಂದು ನಿನ್ನೆಯ ಸಮಸ್ಯೆಯಲ್ಲ ಭಾರತವನ್ನು ಇಸ್ಲಾಮಿಕರಣಗೊಳಿಸುವುದೇ ಮುಸ್ಲಿಂ ಮೂಲಭೂತವಾದಿಗಳ ಉದ್ದೇಶ ಇವತ್ತು ಅದು ಜನರಿಗೆ ಗೊತ್ತಾಗುತ್ತಿದೆ. ಇಲ್ಲಿನ ಪಿ.ಎಫ್. ಐ. , ಎಸ್.ಡಿ.ಪಿ.ಐ. ಗಳು ಐಸಿಸ್ ಗೇನು ಕಡಿಮೆ ಇಲ್ಲ. ಬಂಟ್ವಾಳ, ಉಳ್ಳಾಲ ಮೊದಲಾದ ಕಡೆಗಳಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆ ಹಿಂದೆ ಇದೇ ಯುವಕ ಕೈವಾಡ ವಿದೆ. ತಕ್ಷಣ ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಿ ತಪ್ಪಿತಸ್ಥರನ್ನು ಭಾರತದಿಂದ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು