Wednesday, January 22, 2025
ಅಂತಾರಾಷ್ಟ್ರೀಯಸುದ್ದಿ

ರಷ್ಯಾ –ಉಕ್ರೇನ್ ಯುದ್ಧ : ಇನ್ನೆರಡು ದೇಶಕ್ಕೆ ವಾರ್ನಿಂಗ್ ಕೊಟ್ಟ ರಷ್ಯಾ..! – ಕಹಳೆ ನ್ಯೂಸ್

ಉಕ್ರೇನ್ : ಇಡೀ ಉಕ್ರೇನ್ ಅನ್ನು ಆಕ್ರಮಿಸಿಕೊಳ್ಳುವತ್ತ ಮುನ್ನುಗುತ್ತಿರುವ ರಷ್ಯಾ ಪಡೆಗಳು ವಸತಿ ಸಮುಚ್ಛಯಗಳ ಮೇಲೂ ಕ್ಷಿಪಣಿ ದಾಳಿ ನಡೆಸಿದ್ದು, ಸಾವು-ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ.

ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ವಸತಿ ಸಮುಚ್ಛಾಯಗಳ ಮೇಲೆ ರಷ್ಯಾ 2 ರಾಕೆಟ್ ದಾಳಿ ನಡೆಸಿದ್ದು, ಕಟ್ಟಡ ದ್ವಂಸಗೊAಡಿದೆ. ಜುಲ್ಯಾನಿ ವಿಮಾನ ನಿಲ್ದಾಣ ಸಮೀಪದ ಪ್ರದೇಶದಲ್ಲಿ ಒಂದು ಕ್ಷಿಪಣ ಸ್ಫೋಟಗೊಂಡರೆ, ಇನ್ನೊಂದು ಕ್ಷಿಪಣಿ ಸೆವಾಸ್ಟೊಪೋಲ್ ಚೌಕದ ಸಮೀಪದ ಪ್ರದೇಶವನ್ನು ಧ್ವಂಸ ಮಾಡಿದೆ. ನ್ಯಾಟೋ ಸೇರಲು ಮುಂದಾಗಿದ್ದ ಉಕ್ರೇನ್ ಈಗ ಏಕಾಂಗಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಬೆನ್ನಲ್ಲೇ ಫಿನ್ಲ್ಯಾಂಡ್ ಮತ್ತು ಸ್ವೀಡನ್ ದೇಶಗಳಿಗೆ ವಾರ್ನಿಂಗ್ ನೀಡಿರುವ ರಷ್ಯಾ, ನ್ಯಾಟೋಗೆ ಸೇರಿದರೆ ಗಂಭೀರ ಪರಿಣಾಮವನ್ನು ಎದುರಿಸುತ್ತೀರಿ. ಅಗತ್ಯವಾದರೆ ನಿಮ್ಮ ವಿರುದ್ಧವೂ ಯುದ್ಧ ಮಾಡುತ್ತೇವೆ ಎಂದು ಫಿನ್ಲ್ಯಾಂಡ್ ಮತ್ತು ಸ್ವೀಡನ್ ಗೆ ವಾರ್ನಿಂಗ್ ಕೊಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಏಕಾಂಗಿಯಾಗಿರುವ ಉಕ್ರೇನ್‌ಗೆ ಸಹಾಯ ಹಸ್ತ ಚಾಚುವುದಾಗಿ ಹೇಳಿದ್ದ ನ್ಯಾಟೋ ದೇಶಗಳು ಕೈಕೊಟ್ಟಿದ್ದು, ಇದರಿಂದ ಏಕಾಂಗಿಯಾದ ಉಕ್ರೇನ್ ರಷ್ಯಾದ ದಾಳಿಗೆ ತತ್ತರಿಸಿದೆ.