Wednesday, January 22, 2025
ದಕ್ಷಿಣ ಕನ್ನಡಸುದ್ದಿ

ಕಾಟಿಪಳ್ಳ ಮೂರನೇ ವಾರ್ಡಿನ ಒಂದನೇ ಬ್ಲಾಕ್ ನಿವಾಸಿ ಶ್ರೀಮತಿ ಉಷಾ ಅವರ ಮನೆಗೆ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ವತಿಯಿಂದ ಕುಟೀರ ಜ್ಯೋತಿ ಯೋಜನೆ ಅಡಿಯಲ್ಲಿ ದೊರೆತ ವಿದ್ಯುತ್ ಸಂಪರ್ಕಕ್ಕೆ ಚಾಲನೆ – ಕಹಳೆ ನ್ಯೂಸ್

ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಟಿಪಳ್ಳ ಮೂರನೇ ವಾರ್ಡಿನ ಒಂದನೇ ಬ್ಲಾಕ್ ನಿವಾಸಿ ಶ್ರೀಮತಿ ಉಷಾ ಅವರ ಮನೆಗೆ ಮಂಗಳೂರು ಮಹಾನಗರಪಾಲಿಕೆ ಮತ್ತು ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ವತಿಯಿಂದ ಕುಟೀರ ಜ್ಯೋತಿ ಯೋಜನೆ ಅಡಿಯಲ್ಲಿ ದೊರೆತ ವಿದ್ಯುತ್ ಸಂಪರ್ಕಕ್ಕೆ ಶಾಸಕ ಡಾ. ವೈ. ಭರತ್ ಶೆಟ್ಟಿಯವರು ಸ್ವಿಚ್ ಆನ್ ಮಾಡುವ ಮೂಲಕ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ, ಮಂಡಲ ಸದಸ್ಯರಾಗಿರುವ ಜಯ ಕುಮಾರ್, ಮಹಿಳಾ ಮೋರ್ಚಾದ ಕಾರ್ಯದರ್ಶಿ ಶೈಲಜಾ ಗಣೇಶ್ ಕಟ್ಟೆ, ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷರಾದ ವಾದಿರಾಜ್, ಅಭ್ಯುದಯ ಭಾರತೀಯ ಸೇವಾ ಟ್ರಸ್ಟ್ ನ ವಸಂತರಾವ್, ಎಲೆಕ್ಟ್ರಿಕಲ್ ಕಾಂಟ್ಯಾಕ್ಟರ್ ಹರೀಶ್ ಶೆಟ್ಟಿ, ಬೂತ್ ಅಧ್ಯಕ್ಷರಾದ ಮಾಧವ, ರೇಶ್ಮಾ ಡಿ ಸೋಜಾ, ಗಿರಿಧರ್, ದೇವೆಂದ್ರ, ಲತೇಶ್ ಬೊಳ್ಳಾಜೆ, ಗಣೇಶ್ ಸಾಲಿಯಾನ್ ಗಣೇಶ್‌ಕಟ್ಟೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು