Thursday, January 23, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬೆಳ್ತಂಗಡಿಯಲ್ಲಿ ದಲಿತ ವ್ಯಕ್ತಿಯ ಕೊಲೆ : “ಆರೋಪಿಗೂ ಬಜರಂಗದಳಕ್ಕೂ ಸಂಬಂಧವಿಲ್ಲ” : ವಿ.ಹಿಂ.ಪ. ಸ್ಪಷ್ಟನೆ – ಕಹಳೆ ನ್ಯೂಸ್

ಬೆಳ್ತಂಗಡಿ : ಕ್ಷುಲ್ಲಕ ಕಾರಣಕ್ಕೆ ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿತ್ತು. ಪರಿಣಾಮ ಹಲ್ಲೆಗೊಳಗಾದ ದಲಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ದಲಿತ ವ್ಯಕ್ತಿ ದಿನೇಶ್ ಗೆ ಥಳಿಸಿದ ವ್ಯಕ್ತಿ ಭಜರಂಗದಳದ ಕೃಷ್ಣ.ಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗಿದೆ. ಆದರೆ ಆರೋಪಿ ಕೃಷ್ಣ. ಡಿ ಎಂಬವನಿಗೂ ಬಜರಂಗದಳಕ್ಕೂ ಯಾವುದೇ ಸಂಬಂಧವಿಲ್ಲ, ಈ ಘಟನೆಯು ಅವರಿಬ್ಬರ ವಯಕ್ತಿಕ ವಿಷಯದಿಂದ ನಡೆದಿದ್ದು, ಇದಕ್ಕೂ ಸಂಘಟನೆಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಪುತ್ತೂರು ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಡಾ. ಕೆ. ಪ್ರಸನ್ನ ಹೇಳಿದ್ದಾರೆ. ದಲಿತ ವ್ಯಕ್ತಿ ದಿನೇಶ್ ಕೊಲೆಯನ್ನ ವಿ.ಹಿಂ.ಪ ಖಂಡಿಸುತ್ತದೆ ಎಂದಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು