Recent Posts

Sunday, January 19, 2025
ಸಿನಿಮಾ

ಸಿನಿ ಕಹಳೆ : ಕೋಸ್ಟಲ್‌ವುಡ್‌ನ‌ಲ್ಲಿ ಸಖತ್‌ ಕ್ಯುರಿಯಾಸಿಟಿ ಮೂಡಿಸಿದ “ಅಮ್ಮೆರ್‌ ಪೊಲೀಸ್‌ ” ಜೂನ್‌ 22ಕ್ಕೆ ರಿಲೀಸ್‌!

ಕೋಸ್ಟಲ್‌ವುಡ್‌ನ‌ಲ್ಲಿ ಸಖತ್‌ ಕ್ಯುರಿಯಾಸಿಟಿ ಮೂಡಿಸಿದ ಸಿನೆಮಾ ಅಮ್ಮೆರ್‌ ಪೊಲೀಸ್‌ ಯಾವಾಗ ರಿಲೀಸ್‌ ಎಂಬ ಕುತೂಹಲ ಸಹಜವಾಗಿ ಮೂಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವಾಗಲೋ ಶೂಟಿಂಗ್‌ ಮುಗಿಸಿದ ಸಿನೆಮಾ ಇಷ್ಟು ತಡ ಯಾಕೆ ರಿಲೀಸ್‌ಗೆ ಎಂದು ಕೇಳುವಂತಾಗಿತ್ತು. ಕೊನೆಗೂ ಇದೀಗ ಡೇಟ್‌ ಅನೌನ್ಸ್‌ ಮಾಡಿದ ಚಿತ್ರ ನಿರ್ದೇಶಕ ಸೂರಜ್‌ ಶೆಟ್ಟಿ ಜೂ.22ಕ್ಕೆ ತೆರೆಗೆ ಬರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಚಿತ್ರದಲ್ಲಿರುವ ಏಕಮೇವ ಹಾಡು ಈಗ ಕೋಸ್ಟಲ್‌ನಲ್ಲಿ ಸಾಕಷ್ಟು ವೈರಲ್‌ ಆಗಿದೆ. ‘ನರಮಾನ್ಯನ ಮೋನೆ’ ಎಂಬ ವಿಭಿನ್ನ ಆಲಾಪನೆಯೊಂದಿಗೆ ಮೂಡಿಬಂದ ಹಾಡು ಸಾಕಷ್ಟು ಸುದ್ದಿಗೆ ಬಂದಿದೆ. ಇದರ ಸಂಗೀತ ಹಾಗೂ ಹಾಡನ್ನು ಸಂದೀಪ್‌ ಆರ್‌. ಬಳ್ಳಾಲ್‌ ಅವರೇ ಹಾಡಿದ್ದಾರೆ. ಗಾಯಕ ವಿಜಯ್‌ ಪ್ರಕಾಶ್‌ ಅವರಿಂದ ಹಾಡಿಸಬೇಕಾಗಿದ್ದ ಈ ಹಾಡನ್ನು ಸಂದೀಪ್‌ ಹಾಡಿದ್ದಾರೆ. ಈ ಮೂಲಕ ಅವರು ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಎಂಟ್ರಿ ಪಡೆದಂತಾಗಿದೆ. ಅರ್ಜುನ್‌ ಲೂಯಿಸ್‌ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು