Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

63 ಮಂದಿಗೆ ಅಂಗವೈಕಲ್ಯ ಹೊಂದಿದವರಿಗೆ ಸಾಧನಾ ಸಲಕರಣಗಳನ್ನು ವಿತರಿಸಿದ ಶಾಸಕ ರಾಜೇಶ್ ನಾಯ್ಕ್ – ಕಹಳೆ ನ್ಯೂಸ್

ಬಂಟ್ವಾಳ: ಸರ್ಕಾರದ ಅನಿರ್ಬಂಧಿತ ಅನುದಾನದಡಿ ಅಂಗವೈಕಲ್ಯ ಹೊಂದಿದವರಿಗೆ ನೆರವು ನೀಡುವ ಉದ್ದೇಶದಿಂದ ಒಟ್ಟು 63 ಮಂದಿಗೆ ಸಾಧನಾ ಸಲಕರಣಗಳನ್ನು ಬಂಟ್ವಾಳ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಿತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮಾತನಾಡಿದ ಶಾಸಕರು, ವಿಕಲಚೇತನರು ಸ್ವಾವಲಂಬಿಗಳಾಗಿ ಬದುಕಲು ಈ ಸಲಕರಣೆಗಳು ಉಪಯುಕ್ತವಾಗಲಿದ್ದು, ಸರ್ಕಾರ ಅವರನ್ನು ಸಶಕ್ತರನ್ನಾಗಿಸಲು ನೆರವು ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಮೆನೇಜರ್ ಶಾಂಭವಿ, ವಿಕಲಚೇತನ ಕಲ್ಯಾಣಾಧಿಕಾರಿ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

ಒಟ್ಟು 46 ಮಂದಿಗೆ ಹೊಲಿಗೆಯಂತ್ರ, 10 ಮಂದಿಗೆ ವಾಟರ್ ಬೆಡ್, 7 ಮಂದಿಗೆ ಶ್ರವಣಸಾಧನಗಳನ್ನು ವಿತರಿಸಲಾಯಿತು.