Tuesday, January 21, 2025
ಉಡುಪಿಸುದ್ದಿ

ಉಡುಪಿ: ಕೆಎಸ್‍ಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ : ತಂದೆ- ಮಗಳು ಮೃತ್ಯು – ಕಹಳೆ ನ್ಯೂಸ್

ಉಡುಪಿ : ಕೆಎಸ್‍ಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಎಎಸ್‍ಐ ಯಾಗಿರುವ ತಂದೆ ಹಾಗೂ ಅವರ ಮಗಳು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಸಂತೆಕಟ್ಟೆಯಲ್ಲಿ ನಡೆದಿದೆ.

ಕರಾವಳಿ ಕಾವಲು ಪಡೆಯ ಎಎಸ್‍ಐ ಗಣೇಶ್ ಪೈ ( 58 ವರ್ಷ)ಯವರು ಹುಬ್ಬಳ್ಳಿಯಿಂದ ಬಂದಿದ್ದ ಮಗಳು ಗಾಯತ್ರಿ ಪೈ (27 ವರ್ಷ)ನ್ನು ಮನೆಗೆ ಕರೆದುಕೊಂಡು ಹೋಗುವ ಸಲುವಾಗಿ ತಮ್ಮ ಬೈಕಿನಲ್ಲಿ ಸಂತೆಕಟ್ಟೆ ಬಸ್ ನಿಲ್ಡಾಣಕ್ಕೆ ಬಂದಿದ್ದು, ಮಗಳನ್ನು ಬೈಕಿನಲ್ಲಿ ಕೂರಿಸಿಕೊಂಡು ರಸ್ತೆ ದಾಟುತ್ತಿದ್ದ ವೇಳೆ ಕೇರಳದಿಂದ ಕೊಲ್ಲೂರಿಗೆ ಸಾಗುತ್ತಿದ್ದ ಕೆಎಸ್‍ಆರ್ ಟಿಸಿ  ಬಸ್ ಢಿಕ್ಕಿ ಹೊಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯಲ್ಲಿ ಗಣೇಶ್ ಪೈ ಹಾಗೂ ಗಾಯತ್ರಿ ಪೈ ಸ್ಥಳದಲ್ಲಿಯೇ ಸಾವನ್ನಪಿದ್ದು, ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಎಎಸ್‍ಐಯಾಗಿರುವ ಗಣೇಶ್ ಪೈ ಅವರು ಕರಾವಳಿ ಕಾವಲು ಪಡೆಯಲ್ಲಿ ಕಳೆದ ಹಲವು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿಯಿಂದ ಕುಂದಾಪುರ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈ ಕುರಿತು ಸಾರ್ವಜನಿಕರು ಸಾಕಷ್ಟು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಟೋಲ್ ರಸ್ತೆಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತಿದ್ದು, ಸಂತೆಕಟ್ಟೆಯಲ್ಲಿ ಅವೈಜ್ಞಾನಿಕವಾಗಿ ಡಿವೈಡರ್ ನೀಡಿರುವುದೇ ಅಪಘಾತಕ್ಕೆ ಕಾರಣವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.