ಬಡಗ ಬೆಳ್ಳೂರು ಗ್ರಾಮದ ಕಿರಾಳೆಯಲ್ಲಿ 1.35 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ರಾಜೇಶ್ ನಾಯ್ಕ್ – ಕಹಳೆ ನ್ಯೂಸ್
ಬಂಟ್ವಾಳ: ಬಡಗ ಬೆಳ್ಳೂರು ಗ್ರಾಮದ ಕಿರಾಳೆಯಲ್ಲಿ 1.35 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು ನದಿಗಳ ಜೊತೆಗೆ ಕಿರುಹೊಳೆಗಳಲ್ಲಿ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು ಶೀಘ್ರದಲ್ಲಿ ಕ್ಷೇತ್ರದ 16 ಅಣೆಕಟ್ಟುಗಳು ಅನುಷ್ಠಾನಗೊಳ್ಳಲಿದೆ. ಇದರ ಜೊತೆಗೆ 135 ಕೋಟಿ ರೂ ವೆಚ್ಚದಲ್ಲಿ ಜಕ್ರಿಬೆಟ್ಟುವಿನಲ್ಲಿ ನೇತ್ರಾವತಿ ನದಿಗೆ ಬೃಹತ್ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣ ಗೊಳ್ಳಲಿದೆ ಎಂದರು.
ನೀರು ಶೇಖರಣೆ
ಬಂಟ್ವಾಳ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಭಾಗದ ಬಹುದಿನಗಳ ಬೇಡಿಕೆ ಈಡೇರಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ತಿಗೊಂಡು ಇಲ್ಲಿನ ಕೃಷಿಕರಿಗೆ ಉಪಯೋಗಕ್ಕೆ ಸಿಗುತ್ತದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಜಿ.ಪಂ. ಸದಸ್ಯ ರವೀಂದ್ರ ಕಂಬಳಿ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬಡಗಬೆಳ್ಳೂರು ಗ್ರಾ.ಪಂ.ಅಧ್ಯಕ್ಷ ಪ್ರಕಾಶ್ ಆಳ್ವ, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ರಘವೀರ್ ಆಚಾರ್ಯ, ಉಮೇಶ್ ಪರಿಮೊಗರು, ಚಂದ್ರಹಾಸ್ ಪೂಜಾರಿ, ಚೈತ್ರಾ, ವಿಜಯ ಪೂಜಾರಿ, ಗೀತಾ ದ.ಕ.ಜಿಲ್ಲಾ ಹಾಲು ಉತ್ಪಾದಕರ ಸಂಘದ ನಿರ್ದೇಶಕಿ ಸವಿತಾ ಶೆಟ್ಟಿ, ಎಲ್.ಡಿ.ಬ್ಯಾಂಕ್ ನಿರ್ದೇಶಕ ಸುದರ್ಶ ಬಜ, ಬಿಜೆಪಿ ಉಪಾಧ್ಯಕ್ಷ ರೊನಾಲ್ಡೊ ಡಿಸೋಜ, ಪ್ರಮುಖರಾದ ನಂದರಾಮ ರೈ, ಕಿರಾಲೆಗುತ್ತು ಸಚೀಂದ್ರನಾಥ್ ಭಂಡಾರಿ, ನರೇಶ್ ಶೆಟ್ಟಿ ಪರಿಮೊಗರು, ತಿಮ್ಮಪ್ಪ ರೈ ನಡ್ಯೋಡಿ, ಮೋಹನ್ ಮೆಲಾಂಟ ನಡ್ಯೋಡಿಗುತ್ತು, ಗಣೇಶ್ ರೈ ಮಾಣಿ, ಆಶ್ವಥ್ ರಾವ್, ಬಾಳಿಕೆ ಪ್ರಕಾಶ್ ಬೆಳ್ಳೂರು, ಮೋಹನ್ ದಾಸ್ ಕೊಟ್ಟಾರಿ, ದಿನೇಶ್ ಭಟ್ಟಾಜೆ, ಸಂಜೀವ ಶೆಟ್ಟಿ, ಸುಂದರ ಶೆಟ್ಟಿ ತಂಕಿತ್ತಲು, ಶ್ರೀನಿವಾಸ ಅಂಬೊಡೆಮಾರ್, ಬೂಬ ಸಪಲ್ಯ, ಜನಾರ್ದನ, ದಿನೇಶ್ ಕೊಳತ್ತಮಜಲು, ಪ್ರಸನ್ನ ಬೆಳ್ಳೂರು, ಮನೋಹರ ಕೊಪ್ಪಳ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಶಿವಪ್ರಸನ್ನ, ಗುತ್ತಿಗೆದಾರ ಜೆ.ಎನ್ ಶೆಟ್ಟಿ ಗಟಪ್ರಭಾ ಉಪಸ್ಥಿತರಿದ್ದರು.