Monday, January 20, 2025
ಅಂತಾರಾಷ್ಟ್ರೀಯಸುದ್ದಿ

” ಪುಟಿನ್ ನಮ್ಮ ಚಿಕ್ಕಪ್ಪ, ಯುದ್ಧ ನಡೆಯಲ್ಲ ” ಭಾರತದ ರಾಯಭಾರ ಕಚೇರಿ ಫೆ. 15 ರಂದೇ ವಿದ್ಯಾರ್ಥಿಗಳಿಗೆ ನೀಡಿದ್ದ ಸೂಚನೆಯನ್ನು ಲೇವಡಿ ಮಾಡಿದ್ದ ವಿದ್ಯಾರ್ಥಿಗಳು ವೀಡಿಯೋ ಭಾರೀ ವೈರಲ್ – ಕಹಳೆ ನ್ಯೂಸ್

ಬೆಂಗಳೂರು: ಉಕ್ರೇನ್‍ನಿಂದ ವಿದ್ಯಾರ್ಥಿಗಳು ಭಾರತದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಪುಟಿನ್ ನಮ್ಮ ಚಿಕ್ಕಪ್ಪ ಇದ್ದಂತೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುವುದಿಲ್ಲ. ಮಾಧ್ಯಮಗಳು ಟಿಆರ್‌ಪಿಗಾಗಿ ಯುದ್ಧದ ವರದಿ ಮಾಡುತ್ತಿವೆ ಎಂದು ಹೇಳಿ ವ್ಯಂಗ್ಯಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಷ್ಯಾ ದಾಳಿ ಮಾಡುವ ಸಾಧ್ಯತೆ ಹೆಚ್ಚಿದ್ದ ಕಾರಣ ಉಕ್ರೇನ್‍ನಲ್ಲಿರುವ ಭಾರತದ ರಾಯಭಾರ ಕಚೇರಿ ಫೆ. 15 ರಂದೇ ದೇಶವನ್ನು ತೊರೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿತ್ತು. ಆದರೆ ವಿದ್ಯಾರ್ಥಿಗಳು ಈ ಸೂಚನೆಯನ್ನು ಧಿಕ್ಕರಿಸಿ ಇಲ್ಲಿ ಏನು ನಡೆಯುವುದಿಲ್ಲ. ನಾವೆಲ್ಲ ನೃತ್ಯ, ಹಾಡನ್ನು ಹಾಡಿ ಎಂಜಾಯ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. 2 ವಾರದ ಹಿಂದೆ ಈ ವಿಡಿಯೋ ಅಪ್ಲೋಡ್ ಆಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ವಿಡಿಯೋದಲ್ಲಿ ಏನಿದೆ?
ಭಾರತೀಯ ಮೂಲದ ವೈದ್ಯಕೀಯ ವಿಧ್ಯಾರ್ಥಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾನೆ. ವೀಡಿಯೋದಲ್ಲಿ ವಿದ್ಯಾರ್ಥಿಯು ಉಕ್ರೇನ್‍ನವೊಂದು ಪ್ರತಿಷ್ಠಿತ ವೈದ್ಯಕೀಯ ಕಾಲೇಜಿಗೆ ತೆರಳಿದ್ದಾನೆ. ಅಲ್ಲಿಯ ಕೆಲ ಭಾರತೀಯ ವಿದ್ಯಾರ್ಥಿಗಳೊಂದಿಗೆ ಚಿಕ್ ಚಾಟ್ ಮಾಡಿದ ಅವನು, ಉಕ್ರೇನ್‍ನಲ್ಲಿ ನಮಗೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಫೆಬ್ರವರಿ 16ರಿಂದ ನಮಗೆ ಯಾವುದೇ ಸಮಸ್ಯೆ ಆಗಿಲ್ಲ. ನಾವೆಲ್ಲರೂ ಅಂದು ತರಗತಿಗೆ ತೆರಳಿ ಪಾಠ ಕೇಳಿ, ಆರಾಮವಾಗಿ ಮನೆಗೆ ತೆರಳಿ ವಿಶ್ರಾಂತಿ ಪಡೆದಿದ್ದೇವೆ ಸಮಯ ಹೋಗಿದ್ದೇ ಗೊತ್ತಾಗಿಲ್ಲ ಎಂದಿದ್ದಾಳೆ.

ರಷ್ಯಾವು ಉಕ್ರೇನ್‍ನಿಂದ ಟ್ಯಾಂಕರ್‌ಗಳನ್ನು ಹಿಂಪಡೆದ ವಿಚಾರವಾಗಿ ಮಾತನಾಡಿದ ಅವಳು, ಹಾಗೇನಿಲ್ಲ ಮಾಧ್ಯಮಗಳಿಗೆ ಮಾಡೋಕೆ ಬೇರೆನು ಕೆಲಸವಿಲ್ಲ. ಇಂತಹ ಕೆಲ ವಿಚಾರಗಳು ಸಿಕ್ಕರೆ ಟಿಆರ್‌ಪಿಗೋಸ್ಕರ್ ಏನೇನಾದರೂ ಮಾಡತ್ತಾರೆ. ಅವರಿಗೆ ಮಾಡೋಕೆ ಬೇರೆ ಯಾವ ಸುದ್ದಿಯಿಲ್ಲ. ಅದಕ್ಕೆ ಏನೇನೂ ಸುಳ್ಳು ಸುದ್ದಿ ಹಬ್ಬಿಸುತ್ತಾರೆ ಎಂದಳು. ಇದೇ ವೇಳೆ ವೀಡಿಯೋದಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಮಾತನಾಡಿ, ಎನು ಆಗಿಲ್ಲ ಆದರೆ ಮನೆಯಲ್ಲಿ ಪೋಷಕರು ಸ್ವಲ್ಪ ಭಯಪಡುತ್ತಿದ್ದಾರೆ ಎಂದಳು.

ಮತ್ತೊಬ್ಬ ವಿದ್ಯಾರ್ಥಿ ಮಾತನಾಡಿ, ಉಕ್ರೇನ್‍ನಲ್ಲಿ ಯಾವುದೇ ಯುದ್ಧವೇ ಆಗಿಲ್ಲ. ರಷ್ಯಾದವರು ಉಕ್ರೇನ್ ಮೇಲೆ ದಾಳಿ ನಡೆಸುತ್ತಾರೆಂದು ಕಾಯುತ್ತಾ ಕುಳಿತ್ತಿದ್ದೆವು. ನನಗೆ ಯುದ್ಧ ನೋಡುವ ಆಸೆ ತುಂಬಾ ಇತ್ತು. ರಷ್ಯಾದ ಪುಟಿನ್‍ಗೆ ನಾನು ಕರೆ ಮಾಡಿ ಯುದ್ಧ ಬೇಡ ಎಂದು ಹೇಳಿದ್ದೇನೆ. ಪುಟಿನ್ ನಮ್ಮ ಚಿಕ್ಕಪ್ಪ ಇದ್ದಂತೆ ಎಂದು ವ್ಯಂಗ್ಯವಾಡಿದ್ದಾನೆ.

ಮತ್ತೊಬ್ಬ ವಿದ್ಯಾರ್ಥಿ ಮಾತನಾಡಿ, ಯುದ್ಧ ಏನೋ ನಡಿಯುತ್ತಿದೆ ನಡೆಯಲಿ ಬಿಡಿ. ಮುಖ್ಯವಾಗಿ ಹೇಳುವದಾದರೆ ಇಡೀ ದೇಶವೇ ಇಷ್ಟೊಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದೆ ಆದರೆ ನಮ್ಮ ವಿಶ್ವವಿದ್ಯಾಲಯದಿಂದ ಯಾರಿಗೆ ಡ್ಯಾನ್ಸ್ ಹಾಗೂ ಹಾಡಲು ಬರುತ್ತೆ ಹೇಳಿ ಎಂದು ಕೆಲವು ಸೂಚನೆಗಳು ಬರುತ್ತಿದ್ದವು ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ವೀಡಿಯೋದ ಕೊನೆಯಲ್ಲಿ ಇಲ್ಲಿ ನಮಗೆ ಇಲ್ಲದ ಸಮಸ್ಯೆ ನಿಮಗ್ಯಾಕೆ ಎಂದು ಪ್ರಶ್ನಿಸಿ ಅಹಂಕಾರ ಮೆರೆದಿದ್ದಾರೆ.‌