Saturday, November 23, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ “ಪರೀಕ್ಷಾ ಹಬ್ಬದ ತಯಾರಿ” ಎಂಬ ವಿನೂತನ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಪರೀಕ್ಷಾ ಹಬ್ಬದ ತಯಾರಿ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿವೇಕಾನಂದ ಕಾಲೇಜಿನ ಉಪನ್ಯಾಸಕರಾದ ಹರೀಶ್ ಭಟ್ ಮಾತನಾಡುತ್ತಾ ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಸ್ತು ಪಾಲನೆ ನಮ್ಮ ಪ್ರತಿಭೆಯ ಪ್ರಥಮ ವಿಷಯ. ಶಿಸ್ತು ನಿಯತ್ತು ನಮ್ಮ ಮುಂದಿನ ಜೀವನದ ಸಫಲತೆಗೆ ಪ್ರಮುಖ ಕಾರಣವಾಗಿದೆ. ಶಿಸ್ತುಬದ್ಧವಾದ ಜೀವನ ಉತ್ತಮ ಸಾಧನೆಗೆ ನಾಂದಿಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುದ್ದಿವಾಹಿನಿಯ CEO ಆದ ಸೃಜನ್ ಉರಂಬೈಲು ಇವರು ಮಾತನಾಡುತ್ತಾ ಸಾಧನೆಗೆ ಯಾವುದೇ ಜಾತಿ ಭೇದವಿಲ್ಲ ಯಾರಲ್ಲಿ ಪ್ರತಿಭೆ ಇದೆಯೋ ಅವರ ಜೀವನದಲ್ಲಿ ಸಾಧಕರು ಆಗುತ್ತಾರೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸ್ಥೆಯ ಸಂಚಾಲಕರಾದ ಗೋಕುಲ್‍ನಾಥ್ ಪಿ.ವಿ ಅವರು ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಯ ಕುರಿತು ವಿಶೇಷ ಸೂಚನೆಯನ್ನು ನೀಡುತ್ತಾ ಸಂಸ್ಥೆಯ ಸಾಧನೆಯ ಬಗ್ಗೆ ತಿಳಿಯಪಡಿಸಿದರು. ಸಂಸ್ಥೆಯ ಪ್ರಾಂಶುಪಾಲರು ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಪಡೆಯುವ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಪ್ರಗತಿ ಸಂಸ್ಥೆಯಲ್ಲಿ 2021-22 ನೇ ಸಾಲಿನ ಹಲವು ಕಾಲೇಜು ಹಾಗೂ ಶಾಲೆಗಳ ವಿದ್ಯಾರ್ಥಿಗಳು ಟ್ಯೂಷನ್ ಪಡೆಯುತ್ತಿದ್ದು ಎಲ್ಲಾ ವಿದ್ಯಾರ್ಥಿಗಳ ಛಾಯಾಚಿತ್ರವನ್ನು ತೆಗೆದು ಅವರ ಮುಂದಿನ ವ್ಯಾಸಂಗಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸುದ್ದಿವಾಹಿನಿಯ ಸಿಂಚನ ಉರಂಬೈಲು, ಛಾಯಾಗ್ರಾಹಕ ಅಶೋಕ್ ಕುಂಬ್ಳೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಿತಿಕಾ ಹಾಗೂ ತಂಡದವರ ಪ್ರಾರ್ಥನೆಯ ಮೂಲಕ ಆರಂಬಿಸಿದರು. ಉಪನ್ಯಾಸಕಿ ಕುಮಾರಿ ರಕ್ಷಾ ಸ್ವಾಗತಿಸಿ, ಕುಮಾರಿ ಸುಮಿತ್ರಾರವರು ವಂದಿಸಿದರು. ಶ್ರೀಮತಿ ಪ್ರಮೀಳಾ ಎನ್.ಡಿ ಕಾರ್ಯಕ್ರಮ ನಿರೂಪಿಸಿದರು.