Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಶ್ರೀ ಮಣಿಕಂಠ ಯುವಶಕ್ತಿ ಕುದ್ರಬೆಟ್ಟು ಕಲ್ಲಡ್ಕ ಇದರ ಸಹಕಾರದೊಂದಿಗೆ ಇ- ಶ್ರಂ ಕಾರ್ಡ್ ನೋಂದಾವಣೆ ಕಾರ್ಯಗಾರ- ಕಹಳೆ ನ್ಯೂಸ್

ಕಲ್ಲಡ್ಕ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಶ್ರೀ ಮಣಿಕಂಠ ಯುವಶಕ್ತಿ ಕುದ್ರಬೆಟ್ಟು ಕಲ್ಲಡ್ಕ ಇದರ ಸಹಕಾರದೊಂದಿಗೆ ಇ-ಶ್ರಂ ಕಾರ್ಡ್ ನೋಂದಾವಣೆ ಕಾರ್ಯಗಾರ ಶ್ರೀ ಮಣಿಕಂಠ ಭಜನಾ ಮಂದಿರ ಕುದ್ರಬೆಟ್ಟು ಇಲ್ಲಿ ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಳ್ತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಂದರ ಸಾಲಿಯಾನ್ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕಲ್ಲಡ್ಕ ವಲಯದ ಮೇಲ್ವಿಚಾರಕರಾದ ಸುಗುಣ ಶೆಟ್ಟಿ, ಬಾಳ್ತಿಲ ಒಕ್ಕೂಟದ ಅಧ್ಯಕ್ಷರಾದ ಉಮಾವತಿ ಪುರ್ಲಿ ಪಾಡಿ , ಸೇವಾ ಪ್ರತಿನಿಧಿ ವಿದ್ಯಾ ಬೊಂಡಾಲ ,ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಜಿನ್ನಪ್ಪ ಯೇಳ್ತಿಮಾರ್ , ಶ್ರೀ ಮಣಿಕಂಠ ಯುವಶಕ್ತಿ ಅಧ್ಯಕ್ಷರಾದ ಮಾಧವ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಕೋಶಾಧಿಕಾರಿ ರಮೇಶ್ ಕುದ್ರಬೆಟ್ಟು, ಭೋಜರಾಜ್ ,ರವಿ ಬೈಲು, ನಿತಿನ್ ಕುಮಾರ್, ಸುಂದರ ಪಾಧೇ, ಶೇಖರ ಬೈಲು, ನಿತಿನ್ ಅಮೀನ್ , ಪ್ರಜ್ವಲ್ ಮಿತಬೈಲು, ನವೀನ, ಆಶಾ ಕಾರ್ಯಕರ್ತೆ ಸುಜಾತಾ. ,ಉಷ ಸುರೇಶ್ , ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಗುಲಾಬಿ, ಮೊದಲಾದವರು ಉಪಸ್ಥಿತರಿದ್ದರು . ಅನುಪಮ ಬೋಳಂತೂರು ಯಶ್ಮಿತಾ ಕೊಡಪದವು ಇವರು ಕಾರ್ಡ್ ನೊಂದಣಿ ಸಹಾಯಕರಾಗಿ ಸಹಕರಿಸಿದರು .