Recent Posts

Monday, January 20, 2025
ಬೆಂಗಳೂರುಸಿನಿಮಾಸುದ್ದಿ

‘ ಅಂಜನ್ ‘ ಚಲನ‌ಚಿತ್ರದ ಮೂಲಕ ಬೆಳ್ಳಿತೆರೆಗೆ ಕರಾವಳಿ ಬೆಡಗಿ ಜೋಷಿತಾ ಅಲೋಲ ; ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಶಾಸಕ ರವಿ ಸುಬ್ರಮಣ್ಯಂ – ಕಹಳೆ ನ್ಯೂಸ್

ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ತಂಡವೊಂದು ‘ಅಂಜನ್’ ಎನ್ನುವ ಸಿನಿಮಾ ಮುಖಾಂತರ ಸುದ್ದಿಯಲ್ಲಿದೆ. ಬಿಡುಗಡೆಯ ಆಸುಪಾಸಿನಲ್ಲಿರುವ ಈ ಚಿತ್ರದ ಟ್ರೇಲರ್  ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್‌ ಅನ್ನು ಶಾಸಕ ರವಿ ಸುಬ್ರಮಣ್ಯಂ ಬಿಡುಗಡೆ ಮಾಡಿರೋದು ವಿಶೇಷ. ಚಿತ್ರದ ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು ಸಿನಿಮಾ ತಂಡಕ್ಕೆ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟ್ರೇಲರ್ ಮೂಲಕ ಮಾಧ್ಯಮಗಳೆದುರು ಬಂದ ಚಿತ್ರತಂಡ ಸಿನಿಮಾ ಬಗ್ಗೆ ತಮ್ಮ ಪರಿಶ್ರಮದ ಬಗ್ಗೆ ಅನಿಸಿಕೆ ಹಂಚಿಕೊಂಡಿದೆ. ಚಿತ್ರದಲ್ಲಿ ಅಂಜನ್ ನಾಯಕ ನಟನಾಗಿ ಬಣ್ಣಹಚ್ಚಿದ್ದಾರೆ. ನಾಯಕ ನಟನಾಗಿ ಇದು ಇವರ ಮೊದಲ ಸಿನಿಮಾ. ಜಿಮ್ ತರಬೇತಿದಾರನಾಗಿದ್ದ ಅಂಜನ್ ಈ ಸಿನಿಮಾ ಮೂಲಕ ತಮ್ಮ ಕನಸಿನ ಹಾದಿ ಹಿಡಿದಿದ್ದಾರೆ. ಅಣ್ಣ, ತಂಗಿ ಸೆಂಟಿಮೆಂಟ್ ಜೊತೆಗೆ ಆಕ್ಷನ್ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಅಂಜನ್ ಎರಡು ಶೇಡ್‌ನಲ್ಲಿ ಮಿಂಚಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಜನ್ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಸಾರಥ್ಯ ವಹಿಸಿಕೊಂಡಿರೋದು ಆರ್. ಸಾಗರ್. ಮಾಸ್, ಸೆಂಟಿಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಥ್ರಿಲ್ ನೀಡುವ ಐದು ಆಕ್ಷನ್ ಸೀನ್‌ಗಳು, ಮನಸೆಳೆಯುವ ನಾಲ್ಕು ಹಾಡುಗಳಿವೆ. ಚಿತ್ರವನ್ನು ಬೆಂಗಳೂರು, ಶಿವಮೊಗ್ಗ, ಶಂಕರಘಟ್ಟ, ಹೊನ್ನಾವರ ಮುಂತಾದ ಕಡೆಗಳಲ್ಲಿ ಸೆರೆ ಹಿಡಿಯಲಾಗಿದೆ. ಪ್ರದೀಪ್ ಸೋನ್ಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಚಿತ್ರದಲ್ಲಿ ನೆಗೆಟಿವ್ ರೋಲ್‌ನಲ್ಲಿ ಕೂಡ ಬಣ್ಣ ಹಚ್ಚಿ ಮಿಂಚಿದ್ದಾರೆ. ಅಂಜನ್ ಜೋಡಿಯಾಗಿ ಜೋಷಿತಾ ಅಲೋಲ ತೆರೆ ಹಂಚಿಕೊಂಡಿದ್ದು, ಗೋಪಿ ಕಲಾಕಾರ್ ಸಂಗೀತ, ಗುರುದತ್ ಮುಸೂರಿ ಕ್ಯಾಮೆರಾ ವರ್ಕ್, ಕೋಟೆರಾಜು ಸಾಹಸ ಚಿತ್ರಕ್ಕಿದೆ.