ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ – ಕಹಳೆ ನ್ಯೂಸ್
ಪುತ್ತೂರು: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲದ ಆಯೋಜನೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕ್ಯಾನ್ಸರ್ ಕುರಿತು ಮಾಹಿತಿ ಹಾಗೂ ಸ್ಕ್ರೀನಿಂಗ್ ಕಾರ್ಯಕ್ರಮವನ್ನು ಪ್ರಗತಿ ಪ್ಯಾರಮೆಡಿಕಲ್ ಕಾಲೇಜಿನ ಹಾಲಿನಲ್ಲಿ ಶ್ರೀಮತಿ ಶರಾವತಿ ರವಿನಾರಾಯಣ ಇವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.
ವಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಪುತ್ತೂರು ನಗರ ಮಂಡಲ ಅಧ್ಯಕ್ಷರಾದ ಶ್ರೀಯುತ ಪಿ.ಜಿ. ಜಗನ್ನಿವಾಸ ರಾವ್ ಪುಷ್ಪಾರ್ಚನೆಗೈದು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಶಾಸಕರಾದ ಶ್ರೀಯುತ ಸಂಜೀವ ಮಠಂದೂರುರವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು. ಶ್ರೀಮತಿ ಚೆನ್ನು ಅಮ್ಮ (113 ವ)ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ, ಸುಮಾರು 75 ವರ್ಷದಿಂದ ಸೋಂಕು ರೋಗಕ್ಕೆ ಔಷಧಿ ನೀಡುತ್ತಾ, ಬಾಣಂತಿಯರ ಆರೈಕೆ ಮಾಡುತ್ತಿದ್ದ ಇವರನ್ನು ಹಾಗೂ ಸುಮಾರು 15 ವರ್ಷದಿಂದ ವಾತ ಸಂಬಂಧಿತ ಕಾಯಿಲೆಗಳಿಗೆ ಎಣ್ಣೆ ಹಚ್ಚುವ ಕಾರ್ಯವನ್ನು ಮಾಡುತ್ತಾ, ಸಮಾಜಕ್ಕೆ ನಿರಂತರ ತಮ್ಮ ಸೇವೆಯನ್ನು ನೀಡಿರುವ ಶ್ರೀಮತಿ ಶೋಭಾ (53 ವ) ಈರ್ವರು ಮಾತೃ ಶಕ್ತಿಯನ್ನು ನಗರ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಗುರುತಿಸಿ ಗೌರವಿಸಲಾಯಿತು.
ಡಾಕ್ಟರ್ ಸ್ಮಿತಾ ರಾವ್ (ಕ್ಯಾನ್ಸರ್ ರೋಗ ತಜ್ಞೆ) ಕ್ಯಾನ್ಸರ್ ಮುಂಜಾಗೃತ ಕ್ರಮ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ನಂತರ ಮಹಿಳೆಯರಿಗೆ ಸ್ಕ್ರೀನಿಂಗ್ ತಪಾಸಣೆ ನಡೆಸಿದರು. ಡಾಕ್ಟರ್ ಶ್ರೀಲತಾ ಸಾಮಾನ್ಯ ತಪಾಸಣೆ ನಡೆಸಿದರು. ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಬಿಪಿ ಮತ್ತು ಮಧುಮೇಹ ತಪಾಸಣೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಭೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಮ. ಮೋ. ಪ್ರಭಾರಿಯಾಗಿರುವ ಶ್ರೀಮತಿ ಜಯಂತಿ ನಾಯಕ್, ಮ. ಮೋ. ಜಿಲ್ಲಾಪ್ರಭಾರಿ ಗೀತಾ ರಾಮಣ್ಣ ಗೌಡ, ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರೀತ , ವಿದ್ಯಾರ್ಥಿನಿಯರ ನಾಯಕಿಯಾದ ಸುಮಲತಾ , ನ.ಮಂ. ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಶೆಟ್ಟಿ, ಮ.ಮೋ.ಜಿಲ್ಲಾ ಕೋಶಾಧಿಕಾರಿ ಪ್ರೇಮಲತಾ ರಾವ್, ಮ. ಮೋ.ಜಿಲ್ಲಾ ಉಪಾಧ್ಯಕ್ಷರಾದ ಪ್ರಭಾ ಆಚಾರ್ಯ, ಮಹಾ ಶಕ್ತಿಕೇಂದ್ರ ಪ್ರಮುಖರಾದ ಜ್ಯೋತಿ ನಾಯಕ್, ಶಶಿಕಲಾ, ನಗರಸಭಾ ಸದಸ್ಯರು, ಸಾರ್ವಜನಿಕರು ಮ.ಮೋ. ದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಜಯಶ್ರೀ ನಾಯಕ್ ಸ್ವಾಗತಿಸಿ, ಶ್ರೀಮತಿ ಪ್ರಭಾವತಿ ನಿರೂಪಿಸಿ ವಂದಿಸಿದರು.