Saturday, November 23, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

‘Transpose-ಇಂಗ್ಲಿಷ್ ಕವನ ಸಂಕಲನ ಬಿಡುಗಡೆ’ : ಸಾಹಿತ್ಯದ ಫಲಿತಾಂಶವೂ ಪ್ರತಿಫಲಿಸುತ್ತದೆ: ಡಾ. ಶ್ರೀಪತಿ ಕಲ್ಲೂರಾಯ – ಕಹಳೆ ನ್ಯೂಸ್

ಪುತ್ತೂರು: ಓದು-ಬರಹ, ಅನುವಾದ ಹಾಗೂ ಅರ್ಥೈಸಿಕೊಳ್ಳುವಿಕೆ ಶಿಕ್ಷಣದಲ್ಲಿ ಪ್ರಮುಖವನ್ನು ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ಜ್ಞಾನವನ್ನು ವೃದ್ಧಿಸಲು ಉಪಯೋಗಿಸಬೇಕು. ತನ್ಮೂಲಕ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಕಾಲೇಜಿನ ಆಂಗ್ಲ ವಿಭಾಗ ಆಶ್ರಯದಲ್ಲಿ ಲಿಟರರಿ ಕ್ಲಬ್ ಹಾಗೂ ಐಕ್ಯೂಎಸಿ ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಿದ Transpose-ಇಂಗ್ಲಿಷ್ ಕವನ ಸಂಕಲನ ಬಿಡುಗಡೆ’ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿಭೆ ಪ್ರತಿಯೊಬ್ಬರಲ್ಲೂ ಅಡಗಿರುತ್ತದೆ. ಇದನ್ನು ಹೊರತರುವ ಕೆಲಸ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರು ಮಾಡುತ್ತಾರೆ. ಓದುವುದು, ಬರೆಯುವುದು ಹಾಗೂ ಕೇಳುವುದು ಒಂದು ಕಲೆ. ವಿದ್ಯಾರ್ಥಿಗಳು ಇವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಪರಿಪೂರ್ಣರಾಗುತ್ತಾರೆ ಎಂದು ಅನುವಾದದ ಮಹತ್ವವನ್ನು ತಿಳಿಸಿ, ಪುಸ್ತಕ ರಚನಾಕಾರರಿಗೆ ಹಾಗೂ ಅನುವಾದ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಹೊಸಮನೆ ಮಾತನಾಡಿ, ವ್ಯಕ್ತಿತ್ವವನ್ನು ವ್ಯಕ್ತಪಡಿಸುವ ಕಲೆಯೇ ಭಾಷೆ. ನಾವು ನೋಡುವ ಪ್ರತಿಯೊಂದು ವಸ್ತುವಿಗೂ ಬರವಣಿಗೆಯ ಮೂಲಕ ಪ್ರತಿಕ್ರಿಯೆಯನ್ನು ನೀಡಲು ಕಲಿಯಬೇಕು. ಅನುವಾದವು ಒಂದು ಶೈಕ್ಷಣಿಕ ಚಟುವಟಿಕೆಯಾಗಿದ್ದು ಭಾಷಾ ಬಳಕೆಯ ವಿಧಾನ ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಂತೆಯೇ ಅನುವಾದ ಮಾಡಲು ವಿಷಯದ ಹಿನ್ನೆಲೆಯನ್ನು ಅರಿತಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ.ಎಸ್. ಮಾತನಾಡಿ, ಒಂದು ಭಾಷೆಯ ಸೌಂದರ್ಯ ಹಾಗೂ ಇನ್ನೊಂದು ಭಾಷೆಯ ಸೌಂದರ್ಯಕ್ಕೆ ವ್ಯತ್ಯಾಸವಿದೆ. ಎರಡೂ ಭಾಷೆಯ ಮೇಲೆ ಸಂಪೂರ್ಣ ಹಿಡಿತವಿದ್ದರೆ ಮಾತ್ರ ಅರ್ಥಪೂರ್ಣ ಅನುವಾದ ಸಾಧ್ಯ ಎಂದು ನುಡಿದರು. ‘ಸಕ್ಕರೆ ಚೀಲ’ ಕವನಸಂಕಲನದ ರಚನಕಾರ್ತಿ ಅಭಿಲಾಶ ದೋಟ ಹಾಗೂ Transpose ಕವನ ಸಂಕಲನದ ಅನುವಾದಕಾರರಾದ ಸ್ಫೂರ್ತಿ ಮತ್ತು ಹರ್ಷಿತ ತಮ್ಮ ಅನುಭವಗಳನ್ನು ಹಂಚಿಕೊAಡರು.

ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಿ ಶ್ರೀಧರ್ ನಾೈಕ್ , ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಕೃಷ್ಣಗಣರಾಜ ಭಟ್ ಹಾಗೂ ಉಪನ್ಯಾಸಕಿ ಡಾ. ಸ್ಮಿತಾ ಪಿ ಜಿ ಮತ್ತು ಆಂಗ್ಲ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ತೃತೀಯ ಬಿ.ಎ ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ಕೆ ಪ್ರಾರ್ಥಿಸಿ, ವಾಗ್ದೇವಿ ಸ್ವಾಗತಿಸಿದರು. ಪ್ರಥಮ ಬಿ.ಎ ವಿದ್ಯಾರ್ಥಿನಿ ಚೈತ್ರ ಭಟ್ ವಂದಿಸಿ, ತೃತೀಯ ಬಿ.ಎ ವಿದ್ಯಾರ್ಥಿನಿ ಧನ್ಯ ಕಾರ್ಯಕ್ರಮ ನಿರೂಪಿಸಿದರು.