Sunday, January 19, 2025
ರಾಮನಗರರಾಷ್ಟ್ರೀಯಸುದ್ದಿ

ಬುಲ್ಡೋಜರ್ ಎದುರು ನಡೆಯದ ಆಟ; ಅಬ್ಬರಿಸಲು ಹೋಗಿ ಮಕಾಡೆ ಮಲಗಿದ ಓವೈಸಿ..! – ಕಹಳೆ ನ್ಯೂಸ್

ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷ 4 ರಾಜ್ಯಗಳಲ್ಲಿ ಜಯಭೇರಿ ಭಾರಿಸಿದೆ. ಅದರಲ್ಲೂ ಉತ್ತರಪ್ರದೇಶದಲ್ಲಿ 403 ಸ್ಥಾನಗಳಲ್ಲಿ 271 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಅಧಿಕಾರ ಪಡೆಯುವ ಮೂಲಕ ಇತಿಹಾಸ ರಚಿಸಿದೆ. ಇನ್ನು ಚುನಾವಣೆಯಲ್ಲಿ ಸಂಸದ ಅಸಾದುದ್ದಿನ್​ ಓವೈಸಿ ಅವರ ಎಐಎಂಐಎಂ ಪಕ್ಷ ಒಂದೂ ಸ್ಥಾನ ಪಡೆಯದೇ ಸೊನ್ನೆ ಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಮುಸ್ಲಿಮರು ಹೆಚ್ಚಾಗಿರುವ ಉತ್ತರಪ್ರದೇಶದ ಹಲವು ಕ್ಷೇತ್ರಗಳೂ ಸೇರಿದಂತೆ ಅಸಾದುದ್ದೀನ್​ ಓವೈಸಿ ಪಕ್ಷ 100 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಅಷ್ಟೂ ಸ್ಥಾನಗಳಲ್ಲಿ ಎಲ್ಲಾ ಅಭ್ಯರ್ಥಿಗಳು ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಮುಂದೆ ಕಾಂಗ್ರೆಸ್​ನಂತಹ ರಾಷ್ಟ್ರೀಯ ಪಕ್ಷವೇ ದೂಳಿಪಟವಾಗಿದೆ. ಉತ್ತರಪ್ರದೇಶದ 403 ಸ್ಥಾನಗಳ ಪೈಕಿ ಬಿಜೆಪಿ 271, ಸಮಾಜವಾದಿ ಪಕ್ಷ 127, ಕಾಂಗ್ರೆಸ್​ 2, ಬಿಎಸ್​ಪಿ 1 ಇತರೆ 2 ಸ್ಥಾನಗಳನ್ನು ಪಡೆದುಕೊಂಡಿವೆ.

ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, AIMIM ಪಕ್ಷ ಯುಪಿಯಲ್ಲಿ ಇದುವರೆಗೆ ಶೇಕಡಾ 0.43 ಮತಗಳನ್ನು ಪಡೆದಿದೆ. ಯುಪಿ ವಿಧಾನಸಭಾ ಚುನಾವಣೆಯಲ್ಲಿ AIMIM ಒಟ್ಟು 100 ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿಕೊಂಡಿತ್ತು. ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ಓವೈಸಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಯುಪಿಯ ಮುಸ್ಲಿಮರು ಸೇರಿದಂತೆ ಸಾಮಾನ್ಯ ಮತದಾರರು ಅವರನ್ನು ತೀವ್ರವಾಗಿ ತಿರಸ್ಕರಿಸಿದ್ದಾರೆ ಎಂಬುದು ಗುರುವಾರ ಹೊರಬಿದ್ದ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ.