Sunday, January 19, 2025
ಅಂಕಣ

‘ವಿಶ್ವ ಅಗ್ನಿಹೋತ್ರ ದಿನ’ದ ನಿಮಿತ್ತ ಸನಾತನ ಸಂಸ್ಥೆಯ ಜಾಗೃತಿ ಮೂಡಿಸುವ ಲೇಖನ !- ಕಹಳೆ ನ್ಯೂಸ್

ಅಣ್ವಸ್ತ್ರಗಳು ಹೊರಸೂಸುವ ವಿಕಿರಣಗಳ ಪ್ರಭಾವವನ್ನು ನಾಶಗೊಳಿಸಬಲ್ಲ ಸುಲಭ, ಕಡಿಮೆ ಸಮಯದಲ್ಲಾಗುವ ಯಜ್ಞವಿಧಿ ಎಂದರೆ ‘ಅಗ್ನಿಹೋತ್ರ’ !

ಅಗ್ನಿಹೋತ್ರ ಹೋಮವು ಕೇವಲ ಧಾರ್ಮಿಕ ದೃಷ್ಟಿಯಲ್ಲಿ ಮಾತ್ರವಲ್ಲ, ವೈಜ್ಞಾನಿಕ ದೃಷ್ಟಿಕೋನದಿಂದಲೂ ಸಾಕಷ್ಟು ಮಹತ್ವವನ್ನು ಪಡೆದಿದೆ. ಡಿಸೆಂಬರ್ 2/3 1984ರಲ್ಲಿ ನಡೆದ ಭೋಪಾಲ್ ಅನಿಲ ದುರಂತದಲ್ಲಿ ಸುಮಾರು 10 ಕಿಲೋಮೀಟರ್ ದೂರದಲ್ಲಿ ವಾಸವಾಗಿದ್ದವರು ಮರಣ ಹೊಂದಿದರು. ಆದರೆ 1 ಕಿಲೋಮೀಟರ್ ದೂರದಲ್ಲಿದ್ದ 4 ಬ್ರಾಹ್ಮಣ ಕುಟುಂಬಕ್ಕೆ ಏನು ಆಗಲಿಲ್ಲ. ಇದರಿಂದ ಆಶ್ಚರ್ಯಚಕಿತರಾದ ಸಂಶೋಧಕರು ಅವರ ಮನೆಯನ್ನು ಅಧ್ಯಯನ ಗೊಳಿಸಿದಾಗ ಅವರು ಮನೆಯಲ್ಲಿ ನಿಯಮಿತ 2 ಹೊತ್ತು ಅಗ್ನಿಹೋತ್ರ ಹೋಮವನ್ನು ಮಾಡುತ್ತಿದ್ದರು ಎಂದು ತಿಳಿಯಿತು. ನಂತರ ಸಂಶೋಧಕರು ಈ ಹೋಮವನ್ನು ರೋಗಿಗಳ ಮೇಲೆ ಪ್ರಯೋಗಿಸಿದರು. ಇದರಿಂದ ರೋಗಿಗಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಗುಣಮುಖರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಗ್ನಿಹೋತ್ರದ ಸ್ವರೂಪ ಮತ್ತು ಪ್ರಕ್ರಿಯೆ
ಈ ಲೇಖನದಲ್ಲಿ ನಾವು ಅಗ್ನಿಹೋತ್ರದ ಸ್ವರೂಪ ಮತ್ತು ಪ್ರಕ್ರಿಯೆ, ಹವನಪಾತ್ರೆ, ಹವನದ್ರವ್ಯ ಈ ವಿಷಯದಲ್ಲಿ ಮಾಹಿತಿ ನೋಡಲಿದ್ದೇವೆ. ಸೂರ್ಯನು ಶಕ್ತಿಯನ್ನು ಕೊಡುತ್ತಾನೆ ಮತ್ತು ಶಕ್ತಿಯನ್ನು ತೆಗೆದುಕೊಳ್ಳುತ್ತಾನೆ. ಇದರಿಂದ ಪ್ರದೂಷಣೆಯನ್ನು ನಾಶಗೊಳಿಸಲು ಯಾವ ಸ್ಥಿತಿಯು ಆವಶ್ಯಕ ಮತ್ತು ಪೂರಕವಾಗಿರುತ್ತದೆಯೋ, ಅದು ತಾನಾಗಿಯೇ ನಿರ್ಮಾಣವಾಗುತ್ತದೆ. ಇದರಿಂದ ಪೃಥ್ವಿಗೆ ಶಾಂತಸ್ಥಿತಿ ಪ್ರಾಪ್ತವಾಗುತ್ತದೆ. ಅಗ್ನಿಹೋತ್ರವು ಉತ್ಪಾದಕ ಯಂತ್ರವಾಗಿದೆ (ಜನರೇಟರ್) ಮತ್ತು ಅದರಲ್ಲಿನ ಅಗ್ನಿ ಜ್ವಾಲೆಯು ಹವೆಯಂತ್ರವಾಗಿದೆ (ಟರ್ಬೈನ್). ಅಗ್ನಿಯ ಮಾಧ್ಯಮದಿಂದ ಆಕಳ ಬೆರಣಿ, ಆಕಳ ತುಪ್ಪ ಮತ್ತು ಅಕ್ಷತೆಯ ಅಕ್ಕಿ ಈ ಘಟಕಗಳು ಪರಸ್ಪರ ಸಂಯೋಗಗೊAಡು ಎಂತಹ ಅಪೂರ್ವ ಶಕ್ತಿಯು ನಿರ್ಮಾಣವಾಗುತ್ತದೆ ಎಂದರೆ ಅದು ಸುತ್ತಮುತ್ತಲಿನ ವಸ್ತುಗಳ ಮೇಲೆ ಅಪ್ಪಳಿಸುತ್ತದೆ, ಅವುಗಳ ಸುತ್ತಲೂ ಹರಡುತ್ತದೆ, ಅವುಗಳಲ್ಲಿನ ವಿಘಾತಕ ಶಕ್ತಿಯನ್ನು ನಿಷ್ಕ್ರಿಯಗೊಳಿಸುತ್ತದೆ. ಇದರಿಂದ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಆಮೇಲೆ ಆ ವಾತಾವರಣದಲ್ಲಿನ ಸಾವಯವ (ಜೈವಿಕ) ದ್ರವ್ಯಗಳಿಗೆ ಬದುಕಲು, ವೃದ್ಧಿಯಾಗಲು ಮತ್ತು ವಿಸ್ತಾರವಾಗಲು ಪೂರಕ ಇಂಧನಗಳ ಪೂರೈಕೆಯನ್ನು ಮಾಡಲಾಗುತ್ತದೆ. ಈ ರೀತಿಯಲ್ಲಿ ಅಗ್ನಿಹೋತ್ರ ಪ್ರಕ್ರಿಯೆಯು ವಾಯುಮಂಡಲದ ಹಾನಿಯನ್ನು ಪರೋಕ್ಷವಾಗಿ ತುಂಬಿಸುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

1. ಹವನ ಪಾತ್ರೆ
ಅಗ್ನಿಹೋತ್ರವನ್ನು ಮಾಡಲು ವಿಶಿಷ್ಟ ಆಕಾರದ ತಾಮ್ರದ ಪಿರಮಿಡ್ ಪಾತ್ರೆಯು ಆವಶ್ಯಕವಾಗಿದೆ. ತಾಮ್ರದ ಧಾತುವಿನಲ್ಲಿ ವಾಹಕ ಗುಣವಿದೆ. ಬೆಳಗ್ಗಿನ ಅಗ್ನಿಹೋತ್ರದ ಸಮಯದಲ್ಲಿ ಎಲ್ಲ ರೀತಿಯ ಇಂಧನಗಳು ಉದಾ. ವಿದ್ಯುತ್, ಹಾಗೆಯೇ ಈಥರ್ ದ್ರವ್ಯ ಇತ್ಯಾದಿಗಳು ತಾಮ್ರದ ಪಾತ್ರೆಯ ಕಡೆಗೆ ಆಕರ್ಷಿತವಾಗುತ್ತವೆ. ಸೂರ್ಯಾಸ್ತದ ಸಮಯದಲ್ಲಿ ಈ ಇಂಧನಗಳು ಪಿರಮಿಡ್ ಆಕಾರದಿಂದಾಗಿ ಪಾತ್ರೆಯಿಂದ ಮತ್ತೊಮ್ಮೆ ವೇಗದಿಂದ ಹೊರಹಾಕಲ್ಪಡುತ್ತವೆ.’ ‘ತಾಮ್ರದ ಪಾತ್ರೆಯಲ್ಲಿ ಮಾಡಿದ ಹವನದಿಂದ ಕಡಿಮೆ ಕಾಲಾವಧಿಯಲ್ಲಿ ಹೆಚ್ಚು ತೇಜವು ಹೊರಗೆ ಹೋಗುತ್ತದೆ. ಹಾಗಾಗಿ ಹವನವನ್ನು ಮಾಡಲು ತಾಮ್ರದ ಪಾತ್ರೆಯನ್ನು ಉಪಯೋಗಿಸುತ್ತಾರೆ.

2. ಹವನದ್ರವ್ಯಗಳು
‘ಹವನ ಮಾಡುವಾಗ ಆಕಳ (ಹಸುವಿನ) ಬೆರಣಿ, ಆಕಳ ತುಪ್ಪ ಮತ್ತು ಅಖಂಡ ಅಕ್ಕಿ (ಅಕ್ಷತೆ)ಯನ್ನು ಉಪಯೋಗಿಸಿದರೆ, ಈ ಘಟಕಗಳು ಆಯಾ ತತ್ತ್ವದ ಸ್ತರದಲ್ಲಿ ಅಗ್ನಿಯ ಸಂಯೋಗದಿAದ ಸೂಕ್ಷ್ಮವಾಯುವನ್ನು ನಿರ್ಮಿಸುತ್ತವೆ.’

3. ಅಗ್ನಿಹೋತ್ರದ ಕೃತಿ
ಅ. ಅಗ್ನಿಹೋತ್ರಕ್ಕಾಗಿ ಅಗ್ನಿಯನ್ನು ಪ್ರಜ್ವಲಿಸುವುದು : ‘ಹವನಪಾತ್ರೆಯಲ್ಲಿ ಎಲ್ಲಕ್ಕಿಂತ ಕೆಳಗೆ ಸಣ್ಣ ಆಕಾರದ ಒಂದು ಬೆರಣಿಯ ಚಪ್ಪಟೆ ತುಂಡನ್ನು ಇಡಬೇಕು. ಅದರ ಮೇಲೆ ತುಪ್ಪವನ್ನು ಹಚ್ಚಿದ ಬೆರಣಿಗಳ ತುಂಡುಗಳನ್ನು (ಬೆರಣಿಯ ನೇರ ಮತ್ತು ಅಡ್ಡ ತುಂಡುಗಳ 2-3 ಪದರು) ಇಡಬೇಕು. ಎರಡು ಬೆರಣಿಗಳ ನಡುವೆ ಗಾಳಿ ಓಡಾಡುವ ಹಾಗೆ ಟೊಳ್ಳುಗಳಿರಬೇಕು. ನಂತರ ಬೆರಣಿಯ ಒಂದು ತುಂಡಿಗೆ ಆಕಳ ತುಪ್ಪವನ್ನು ಹಚ್ಚಿ ಪ್ರಜ್ವಲಿಸಬೇಕು ಮತ್ತು ಆ ತುಂಡನ್ನು ಹವನಪಾತ್ರೆಯಲ್ಲಿಡಬೇಕು. ಸ್ವಲ್ಪ ಸಮಯದಲ್ಲಿ ಬೆರಣಿಗಳ ಎಲ್ಲ ತುಂಡುಗಳು ಪ್ರಜ್ವಲಿಸುವವು. ಅಗ್ನಿಯನ್ನು ಪ್ರಜ್ವಲಿಸಲು ಗಾಳಿ ಹಾಕಲು ಕೈಬೀಸಣಿಗೆಯನ್ನು ಉಪಯೋಗಿಸಬೇಕು; ಬಾಯಿಯಿಂದ ಊದಿ ಅಗ್ನಿಯನ್ನು ಪ್ರಜ್ವಲಿಸಬಾರದು. ಅಗ್ನಿಯನ್ನು ಧೂಮರಹಿತವಾಗಿ ಪ್ರಜ್ವಲಿಸಬೇಕು.’

ಆ. ಪಠಿಸಬೇಕಾದ ಮಂತ್ರ

ಅ. ‘ಸೂರ್ಯೋದಯದ ಸಮಯದಲ್ಲಿ ಹೇಳುವ ಮಂತ್ರ

1. ಸೂರ್ಯಾಯ ಸ್ವಾಹಾ ಸೂರ್ಯಾಯ ಇದಮ್ ನ ಮಮ

2. ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಮ್ ನ ಮಮ

ಆ. ಸೂರ್ಯಾಸ್ತದ ಸಮಯದಲ್ಲಿ ಹೇಳುವ ಮಂತ್ರ

1. ಅಗ್ನಯೇ ಸ್ವಾಹಾ ಅಗ್ನಯೇ ಇದಮ್ ನ ಮಮ

2. ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಮ್ ನ ಮಮ’

ಇ. ಹವನದ್ರವ್ಯಗಳನ್ನು ಅಗ್ನಿಯಲ್ಲಿ ಹಾಕುವುದು :
‘ಎರಡು ಚಿಟಿಕೆ ಅಕ್ಕಿಯನ್ನು ಅಂಗೈಯಲ್ಲಿ ಅಥವಾ ಒಂದು ತಾಮ್ರದ ತಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಅದರ ಮೇಲೆ ಕೆಲವು ಹನಿ ಆಕಳ ತುಪ್ಪವನ್ನು ಹಾಕಬೇಕು. ಸೂರ್ಯೋದಯಕ್ಕೆ (ಹಾಗೆಯೇ ಸೂರ್ಯಾಸ್ತದ) ಸರಿಯಾದ ಸಮಯದಲ್ಲಿ ಮೊದಲನೆಯ ಮಂತ್ರವನ್ನು ಒಂದು ಬಾರಿ ಹೇಳಬೇಕು ಮತ್ತು ‘ಸ್ವಾಹಾ’ ಶಬ್ದವನ್ನು ಹೇಳಿದ ನಂತರ ಬಲಗೈಯ ಮಧ್ಯಮಾ (ಮಧ್ಯದ ಬೆರಳು), ಅನಾಮಿಕಾ (ಉಂಗುರ ಬೆರಳು) ಮತ್ತು ಹೆಬ್ಬೆರಳಿನ ಚಿಟಿಕೆಯಲ್ಲಿ ಮೇಲಿನ ಅಕ್ಕಿ-ತುಪ್ಪದ ಮಿಶ್ರಣವನ್ನು ತೆಗೆದುಕೊಂಡು ಅಗ್ನಿಯಲ್ಲಿ ಹಾಕಬೇಕು. (ಬೆರಳುಗಳ ಚಿಟಿಕೆಯಲ್ಲಿ ಹಿಡಿಸುವಷ್ಟು ಅಕ್ಕಿ ಸಾಕಾಗುತ್ತದೆ.) ಆಮೇಲೆ ಎರಡನೇ ಒಂದು ಬಾರಿ ಮಂತ್ರವನ್ನು ಹೇಳಬೇಕು ಮತ್ತು ‘ಸ್ವಾಹಾ’ ಶಬ್ದವನ್ನು ಹೇಳಿದ ನಂತರ ಬಲಗೈಯಿಂದ ಮೇಲಿನ ಅಕ್ಕಿ-ತುಪ್ಪದ ಮಿಶ್ರಣವನ್ನು ಅಗ್ನಿಯಲ್ಲಿ ಹಾಕಬೇಕು.’ (ಆಧಾರ : ಸನಾತನ ನಿರ್ಮಿತ ಗ್ರಂಥ ಅಗ್ನಿಹೋತ್ರ – ಅಣುಯುದ್ಧದ ಭೀಕರ ಪರಿಣಾಮಗಳಿಂದ ರಕ್ಷಣೆಯಾಗಲು ಉಪಾಯ !)

ಸಂಕಟಕಾಲದಲ್ಲಿ ನಾಗರಿಕರ ರಕ್ಷಣೆಯ ಮೂಲ ಮಂತ್ರವಾಗಿರುವ ಸನಾತನದ ಗ್ರಂಥ ಅಗ್ನಿಹೋತ್ರ, ಇದರಲ್ಲಿ ಓದಿ :
ಅಗ್ನಿಹೋತ್ರ ಇದು ದೇವರು ಮತ್ತು ನಿಸರ್ಗ ಇವುಗಳ ಋಣದಿಂದ ಮುಕ್ತವಾಗುವ ಮಾರ್ಗ, ಹೇಗೆ ?
ಅಗ್ನಿಹೋತ್ರವು ಅಣುಯುದ್ಧದಿಂದಾಗುವ ಪ್ರದೂಷಣೆಯಿಂದ ಹೇಗೆ ರಕ್ಷಿಸುತ್ತದೆ ?
ಅಗ್ನಿಹೋತ್ರದಿಂದ ಆಗುವ ಸೂಕ್ಷ್ಮದಲ್ಲಿನ ಪರಿಣಾಮ !

ಸಂಗ್ರಹ :
ಶ್ರೀ. ವಿನೋದ ಕಾಮತ
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
ಸAಪರ್ಕ : 9342599299