Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು: ಭಜನಾ ಮಂದಿರದ ಜಾಗದ ವಿಚಾರ ; ತಂಡಗಳ ಮಧ್ಯೆ ಹಲ್ಲೆ: ನಾಲ್ಕು ಮಂದಿ ಆಸ್ಪತ್ರೆಗೆ ದಾಖಲು- ಕಹಳೆ ನ್ಯೂಸ್

ಪುತ್ತೂರು: ಜಾಗದ ವಿಷಯವಾಗಿ ಇತ್ತಂಡಗಳ ಮಧ್ಯೆ ಹಲ್ಲೆ ನಡೆದ ಘಟನೆ ಆರ್ಯಾಪು ಗ್ರಾಮದ ದೊಡ್ಡಡ್ಕ ಎಂಬಲ್ಲಿ ನಡೆದಿದೆ.

ಭಜನಾ ಮಂಡಳಿ ಜಾಗದ ವಿಷಯವಾಗಿ ಎರಡು ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆಗೈದಿದ್ದು, ಒಂದು ತಂಡ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದರೇ ಮತ್ತೊಂದು ತಂಡ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್ಯಾಪು ಗ್ರಾಮದ ದೊಡ್ಡಡ್ಕ ನಿವಾಸಿ ಸರೋಜಿನಿ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೊಂದು ತಂಡದ ಪೂವಪ್ಪ ನಾಯ್ಕ್ ಮತ್ತು ಅವರ ಪತ್ನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಎರಡು ತಂಡದವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೂವಪ್ಪ ನಾಯ್ಕ್ ರವರು ಮಹಾಲಕ್ಷ್ಮಿ ಭಜನಾ ಮಂದಿರದ ಸದಸ್ಯರಾಗಿದ್ದು, ಭಜನಾ ಮಂದಿರದ ಸುತ್ತ ಹುಲ್ಲು ತೆಗೆದು ಸ್ವಚ್ಛಗೊಳಿಸಲು ತೆರಳಿದ ವೇಳೆ ಹತ್ತಿರದ ಮನೆಯ ನಾಗರಾಜ ಆಚಾರ್ಯ, ನಾರಾಯಣ ಆಚಾರ್ಯ, ಸರೋಜಿನಿ, ನಾಗರಾಜ ಆಚಾರ್ಯ ಅವರ ಪತ್ನಿ ಮತ್ತು ಅತ್ತಿಗೆ ಮಾರಕಾಯುಧಗಳನ್ನು ತಂದು ಪೂವಪ್ಪ ನಾಯ್ಕ್ ಮತ್ತು ಅವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅಷ್ಟೇ ಅಲ್ಲದೇ ಅವರ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

 

ಈ ಬಗ್ಗೆ ನಾಗರಾಜ ಆಚಾರ್ಯ, ನಾರಾಯಣ ಆಚಾರ್ಯ, ಅವರ ತಾಯಿ ಸರೋಜಿನಿ, ನಾಗರಾಜ ಆಚಾರ್ಯ ಹೆಂಡತಿ ಮತ್ತು ಅತ್ತಿಗೆ ವಿರುದ್ಧ ಪೂವಪ್ಪ ನಾಯ್ಕ್ ರವರು ದೂರು ನೀಡಿದ್ದಾರೆ.

 

ಈ ಬಗ್ಗೆ ಸರೋಜಿನಿ ರವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೊಡ್ಡಡ್ಕ ನಿವಾಸಿ ಪೂವಪ್ಪ ನಾಯ್ಕ್, ವೆಂಕಟಕೃಷ್ಣ ಭಟ್,ಸೇಸಪ್ಪ ನಾಯ್ಕ್ ಹಾಗೂ ಅವರ ಸಂಗಡಿಗರ ವಿರುದ್ಧ ದೂರು ನೀಡಿದ್ದಾರೆ.

 

ಆರ್ಯಾಪು ದೊಡ್ಡಡ್ಕದಲ್ಲಿರುವ ಜಾಗವು ಸರೋಜಿನಿ ರವರ ಪೂರ್ವಜರ ಜಾಗವಾಗಿದ್ದು, ಹಿಂದಿನಿಂದ ಇದ್ದ ಭಜನಾ ಮಂದಿರವನ್ನು ಅಲ್ಲಿ ತಂದು ನಿರ್ಮಿಸಿ ಭಜನಾ ಕಾರ್ಯವನ್ನು ನೆರವೇರಿಸುತ್ತಿತ್ತು, ದಿನ ಕಳೆದಂತೆ ಸ್ಥಳೀಯರನ್ನೆಲ್ಲಾ ಕರೆಸಿ ಆ ಜಾಗದಲ್ಲಿ ಭಜನಾ ಕಾರ್ಯವನ್ನು ನೆರವೇರಿಸುತ್ತಿದ್ದರು.

 

ಕ್ರಮೇಣ ಅದನ್ನು ಸ್ಥಳೀಯರು ಸಾರ್ವಜನಿಕ ಮಂದಿರ ಎಂದು ಹೇಳಿ ಕಿರಿಕ್ ಮಾಡಿದ್ದು, ಈ ಬಗ್ಗೆ ಕೇಸು ದಾಖಲಾಗಿ 10 ವರ್ಷಗಳೇ ಕಳೆದಿದ್ದು, ಕೋರ್ಟ್ ನಿಂದ ಆ ಜಾಗದಲ್ಲಿ ಯಾವುದೇ ಕೆಲಸ ಕಾರ್ಯ ನಿರ್ವಹಿಸಿದಂತೆ ತಡೆಯಾಜ್ಞೆ ನೀಡಿದ್ದು, ಈ ನಡುವೆಯೂ ದೊಡ್ಡಡ್ಕ ನಿವಾಸಿ ಪೂವಪ್ಪ ನಾಯ್ಕ್, ವೆಂಕಟಕೃಷ್ಣ ಭಟ್,ಸೇಸಪ್ಪ ನಾಯ್ಕ್ ಹಾಗೂ ಅವರ ಸಂಗಡಿಗರು ಆ ಜಾಗದಲ್ಲಿ ಕೆಲಸ ನಿರ್ವಹಿಸಿದ್ದು, ಈ ಬಗ್ಗೆ ಅವರಲ್ಲಿ ಪ್ರಶ್ನಿಸಲು ತೆರಳಿದ ಸರೋಜಿನಿ, ಮತ್ತು ಅವರ ಸೊಸೆ ಹಾಗೂ ಮತ್ತೋರ್ವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸರೋಜಿನಿ ಆರೋಪಿಸಿದ್ದಾರೆ.