Sunday, November 24, 2024
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ – ಪೂವಳ – ಕೊಂದಳ ಸಂಪರ್ಕ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ನಿರ್ಮಾಣಕ್ಕೆ ಶಿಲಾನ್ಯಾಸ – ಕಹಳೆ ನ್ಯೂಸ್

ಬೆಳ್ತಂಗಡಿ: ಪೂವಳ – ಕೊಂದಳ ವ್ಯಾಪ್ತಿಯ ಜನರ ಬಹು ವರ್ಷಗಳ ಸೇತುವೆ ಬೇಡಿಕೆ ಕೊನೆಗೂ ಮುಕ್ತಿ ದೊರಕಿದೆ . ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾರ್ಗದರ್ಶನದಲ್ಲಿ ಪೂವಳ – ಕೊಂದಳ ಸಂಪರ್ಕಿಸುವ ಸೇತುವೆ ಮರು ನಿರ್ಮಾಣಕ್ಕೆ ಸುಮಾರು ರೂ.1 ಕೋಟಿ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ಶಿಲಾನ್ಯಾಸವನ್ನು ಊರಿನ ಹಿರಿಯರಾದ ಧರ್ನಪ್ಪ ಶೆಟ್ಟಿ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಮಾತನಾಡಿ, ಕಳೆದ 3 ವರ್ಷಗಳಿಂದ ಆರಂಬೋಡಿ ಗ್ರಾಮ ಪಂಚಾಯತಿಗೆ ಶಾಸಕರು ಸುಮಾರು ರೂ.15 ಕೋಟಿಗಿಂತಲೂ ಅಧಿಕ ಅನುದಾನವನ್ನು ನೀಡಿದ್ದಾರೆ. ಶಾಸಕರು ಅನ್ನುವ ಕಲ್ಪನೆಯನ್ನು ಮೀರಿ ಜನಪ್ರತಿನಿಧಿಗಳ ಪರ ಕೆಲಸ ಮಾಡುತ್ತಿದ್ದಾರೆ. ಕೇವಲ ರಸ್ತೆ, ಸೇತುವೆಗೆ‌ ಮಾತ್ರ ಅನುದಾನ ನೀಡದೆ, ಶಿಕ್ಷಣ, ವಿದ್ಯುತ್ ಸಮಸ್ಯೆಗಳ ಸಮಸ್ಯೆಗೂ ಹೆಚ್ಚು ಒತ್ತು ನೀಡಿದ್ದಾರೆ. ರಾಜಕೀಯ ವೈಮನಸ್ಸನ್ನು ಬಿಟ್ಟು, ಕೇವಲ ಅಭಿವೃದ್ಧಿ ಪಥದತ್ತ ಯೋಚಿಸಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಗ್ರಾ.ಪಂ. ಅಧ್ಯಕ್ಷೆ ವಿಜಯ ರಮೇಶ್ ಕುಂಜಾಡಿ, ಸದಸ್ಯರಾದ ಪ್ರಭಾಕರ್ ಹುಲಿಮೇರು, ಸತೀಶ್ ಪಿ. ಮಠ, ಶಕ್ತಿ ಕೇಂದ್ರದ ಅಧ್ಯಕ್ಷೆ ಆಶಾ‌ ಎಸ್.ಶೆಟ್ಟಿ, ರೋಟರಿ ಕ್ಲಬ್‌ ಅಧ್ಯಕ್ಷ ರಾಘವೇಂದ್ರ ಭಟ್, ಗುತ್ತಿಗೆದಾರ ಸುನೀತ್ ಹೆಗ್ಡೆ, ವಕೀಲ ಸುರೇಶ್ ಶೆಟ್ಟಿ, ಯುವ ಉದ್ಯಮಿ ಕಿರಣ್ ಮಂಜಿಲ, ಹಿರಿಯ ಕಾರ್ಯಕರ್ತ ಪಾಂಡುರಂಗ ಶೆಟ್ಟಿಗಾರ್, ರಾಮಾಂಜನೇಯ ಫ್ರೆಂಡ್ಸ್ ಬಳಗ ಹಾಗೂ ಊರಿನ ಸಮಸ್ತರು ಪಾಲ್ಗೊಂಡಿದ್ದರು.