Sunday, November 24, 2024
ಉಡುಪಿರಾಜಕೀಯರಾಜ್ಯಸುದ್ದಿ

‘ಕೋರ್ಟ್‌ಗೆ ಹೋದ 6 ವಿದ್ಯಾರ್ಥಿನಿಯರು ನಾಳೆಯಿಂದಲೇ ತರಗತಿಗೆ ಬನ್ನಿ’ ; ಶಾಸಕ ರಘುಪತಿ ಭಟ್ – ಕಹಳೆ ನ್ಯೂಸ್

ಉಡುಪಿ, ಮಾ 15 : ಕೋರ್ಟ್‌ಗೆ ಹೋದ ಆರು ಮಂದಿ ವಿದ್ಯಾರ್ಥಿನಿಯರು ನಾಳೆಯಿಂದಲೇ ತರಗತಿಗೆ ಬರಬೇಕು. ಅವರೆಲ್ಲರಿಗೂ ಸಮವಾದ ಶಿಕ್ಷಣ ನೀಡುತ್ತೇವೆ. ಇಷ್ಟು ದಿನ ಅವರ ಶಿಕ್ಷಣಕ್ಕೆ ಸಮಸ್ಯೆ ಆಗಿದ್ರೆ, ಅವರಿಗೆ ಪ್ರತ್ಯೇಕ ನೋಟ್ಸ್ ನೀಡಲಾಗುತ್ತದೆ ಎಂದು  ಶಾಸಕ ರಘುಪತಿ ಭಟ್ ಹೇಳಿದ್ದಾರೆ.


ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಸತ್ಯ‌ಮೇವ ಜಯತೇ’ ಉಚ್ಛ ನ್ಯಾಯಾಲಯದ‌ ತೀರ್ಪಿನ ಮೂಲಕ ಭಾರತದ ಸಂಸ್ಕೃತಿಗೆ ಜಯವಾಗಿದೆ, ಈ ಮಣ್ಣಿನ ವಿರೋಧಿಗಳು ಸೋಲು ಕಂಡಿದ್ದಾರೆ. ಸಮವಸ್ತ್ರದ ಕುರಿತು ಕರ್ನಾಟಕ ಹೈಕೋರ್ಟ್‌ ಹೊರಡಿಸಿದ ತೀರ್ಪನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತೇನೆ. ಇದು ನಮ್ಮ ಸಂವಿಧಾನಕ್ಕೆ ಲಭಿಸಿದ ಜಯ. ಮತಾಂಧತೆ ಕೊನೆಯಾಗಲಿ, ಕಾನೂನಿನ ಪಾಲನೆಯಾಗಲಿ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕೆಲವರು ಸಂವಿಧಾನ ಬದ್ದವಾದ ನಿಯಮವನ್ನೇ ಧಿಕ್ಕರಿಸಲು ಹೊರಟ್ಟಿದ್ದರು. ಅವರಿಗೆ ನ್ಯಾಯಾಲಯವೇ ತಕ್ಕ ಉತ್ತರ ನೀಡಿದೆ. ಮತಾಂಧತೆ ಕೊನೆಯಾಗಲಿ, ಕಾನೂನಿನ ಪಾಲನೆಯಾಗಲಿ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಜಾಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ.