ಬೆಂಗಳೂರು, ಮಾ 15 : ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ‘ನಂದಿನಿ’ ಹಾಲಿನ ದರ ಹೆಚ್ಚಳ ಮಾಡುವ ಸಿದ್ಧತೆ ನಡೆಸಿದ್ದು, ಈ ತಿಂಗಳ ಅಂತ್ಯದೊಳಗೆ ಪ್ರತಿ ಲೀಟರ್ ಗೆ 3 ರೂ ದರ ಏರಿಸಿ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.
ಕರ್ನಾಟಕ ಹಾಲು ಮಹಾಮಂಡಳಿ ನಡೆಸಿದ ಈ ಹಿಂದಿನ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಹೆಚ್ಚಿಸಿ ಸರ್ಕಾರಕ್ಕೆ ಮನವಿ ಮಾಡುವಂತೆ ಹಾಲು ಒಕ್ಕೂಟಗಳು ಒತ್ತಡ ಹೇರಿತ್ತು. ರಾಜ್ಯದ 14 ಹಾಲು ಒಕ್ಕೂಟಗಳು ನಷ್ಟದ ಹಾದಿಯಲ್ಲಿ ಸಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಹಾಲಿನ ದರ ಹೇರಿಕೆಗೆ ಅನುಮತಿ ನೀಡಬೇಕು ಕೆಎಂಎಫ್ ಸಭೆಯಲ್ಲಿ ಎಂದು ಆಗ್ರಹ ಕೇಳಿಬಂದಿತ್ತು.
ಹೀಗಾಗಿ ಕೆಎಂಎಫ್ ನಂದಿನಿ ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಸಿದ್ಧತೆ ನಡೆಸಿದ್ದು, ಸರ್ಕಾರಕ್ಕೂ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದೆ. ಒಂದು ವೇಳೆ ರಾಜ್ಯ ಸರ್ಕಾರ ಕೆಎಂಎಫ್ ನಂದಿನ ಹಾಲಿನ ದರ ಏರಿಕೆ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದರೆ, ಮಾರ್ಚ್ ಅಂತ್ಯದೊಳಗೆ ದರ ಪರಿಷ್ಕರಣೆಯಾಗುವು ಸಾಧ್ಯತೆ ಇದೆ.
ಸದ್ಯ ಅಡುಗೆ ಎಣ್ಣೆ ಸಹಿತ ನಿತ್ಯೋಪಯೋಗಿಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುತ್ತಿದೆ. ಈ ನಡುವೆ ಹಾಲಿನ ಬೆಲೆ ಏರಿಕೆಯಾದರೆ ಜನ ಸಾಮಾನ್ಯರಿಗೆ ನುಂಗಲಾರದ ತುತ್ತಾಗಬಹುದು