Wednesday, November 27, 2024
ಸುದ್ದಿ

ಜೈಶ್‌ ಆತ್ಮಾಹುತಿ ದಾಳಿಯನ್ನು ವಿಫ‌ಲಗೊಳಿಸಿದ ನಮ್ಮ ಸೇನೆ.

ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದ ಹೈಸೆಕ್ಯೂರಿಟಿ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಬಿಎಸ್‌ಎಫ್ ಶಿಬಿರದ ಮೇಲೆ ದಾಳಿ ನಡೆಸಿ, ವಿಧ್ವಂಸಕ ಕೃತ್ಯವೆಸಗಲು ಮುಂದಾಗಿದ್ದ ಪಾಕಿಸ್ತಾನ ಮೂಲದ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಯತ್ನವನ್ನು ಭಾರತೀಯ ಸೇನೆ ವಿಫ‌ಲಗೊಳಿಸಿದೆ. ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಬಿಎಸ್‌ಎಫ್ನ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಹುತಾತ್ಮರಾಗಿ ದ್ದಾರೆ. ಇದೇ ವೇಳೆ, ಕಾರ್ಯಾಚರಣೆಯನ್ನು ಸೇನೆ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಎಲ್ಲ ಮೂವರು ಉಗ್ರರನ್ನೂ ಹತ್ಯೆಗೈಯ್ಯಲಾಗಿದೆ.

ಪಾಕ್‌ ಸೇನೆ ಇಬ್ಬರು ಮಕ್ಕಳನ್ನು ಬಲಿತೆಗೆದು ಕೊಂಡ ಮಾರನೇ ದಿನವೇ ಈ ಘಟನೆ ನಡೆದಿದೆ. ಸೋಮವಾರ ಎಲ್‌ಒಸಿಯ ಎರಡು ವಲಯಗಳಲ್ಲಿ ಒಳನುಸುಳಲು ಉಗ್ರರು ಯತ್ನಿಸಿದ್ದು, ಎಲ್ಲ ಐವರು ಉಗ್ರರನ್ನೂ ಸೇನೆಯು ಸದೆಬಡಿದಿತ್ತು. ಮಂಗಳವಾರ ಬೆಳಗ್ಗೆ ಜೈಶ್‌ ಸಂಘಟನೆಯ ಮೂವರು ಉಗ್ರರು, ವಿಮಾನನಿಲ್ದಾಣದ ಸಮೀಪ ದಲ್ಲೇ ಇರುವ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯ ಶಿಬಿರದ ಮೇಲೆ ದಾಳಿಗೆ ಯತ್ನಿಸಿದ್ದು, ತಕ್ಷಣ ಎಚ್ಚೆತ್ತ ಯೋಧರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅತಿದೊಡ್ಡ ದಾಳಿಯನ್ನು ತಡೆದಿದ್ದಾರೆ.
ಮೊದಲೇ ಸಿಕ್ಕಿತ್ತು ಮಾಹಿತಿ: ಜೈಶ್‌ನ “ನೂರಾ ತ್ರಾಲಿ’ ಎಂಬ ಹೆಸರಿನ ಉಗ್ರರು ನಗರದೊಳಕ್ಕೆ ಆತ್ಮಾಹುತಿ ದಳವೊಂದನ್ನು ತಂದಿದ್ದಾರೆ ಎಂದು ಗುಪ್ತಚರ ಇಲಾಖೆಯು ಮಾಹಿತಿ ನೀಡಿತ್ತು. ಮಂಗಳವಾರ ಬೆಳಗ್ಗೆ ಮೂವರು ಉಗ್ರರು ಏಕಾಏಕಿ ಗೋಗೋಲ್ಯಾಂಡ್‌ನ‌ಲ್ಲಿರುವ ಬಿಎಸ್‌ ಎಫ್ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಿದರು. ವಾಯುಪಡೆಯ ಹಳೆಯ ವಾಯು ನೆಲೆಯೂ ಇದೇ ಪ್ರದೇಶದಲ್ಲಿದೆ. ಹಾನಿಗೊಂಡಿದ್ದ ಗೋಡೆಯ ಮೂಲಕ ಒಳ ಪ್ರವೇಶಿಸಿದ ಉಗ್ರರು, ಎಲ್ಲ ದಿಕ್ಕುಗಳಿಂದಲೂ ಗುಂಡಿನ ಮಳೆಗರೆದರು. ಆರಂಭಿಕ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡರು. ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಬಿ.ಕೆ. ಯಾದವ್‌ ಅವರ ಮೃತದೇಹವು ಕಾರ್ಯಾಚರಣೆಯ ಬಳಿಕ ನಡೆದ ಶೋಧ ಕಾರ್ಯದ ವೇಳೆ ಪತ್ತೆಯಾಯಿತು ಎಂದು ರಾಜ್ಯ ಡಿಜಿಪಿ ಎಸ್‌.ಪಿ.ವೇದ್‌ ತಿಳಿಸಿದ್ದಾರೆ. ಪಾಕ್‌ನ ಜೈಶ್‌ ಉಗ್ರ ಸಂಘಟನೆಯೇ ದಾಳಿ ಹೊಣೆ ಹೊತ್ತುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು