ಬೆಳ್ಳಂಬೆಳಿಗ್ಗೆ ಮಂಗಳೂರಿನ ಮೆಸ್ಕಾಂ ಹಿರಿಯ ಅಧಿಕಾರಿ ಸೇರಿ ರಾಜ್ಯದ 18 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ-ಕಹಳೆ ನ್ಯೂಸ್
ಮಂಗಳೂರು: ಹಿರಿಯ ಮೆಸ್ಕಾಂ ಅಧಿಕಾರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದಯಾಸುಂದರ್ ಅವರ ಮನೆ ಹಾಗೂ ಕಚೇರಿ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಎ.ಸಿ.ಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಮಂಗಳೂರಿನ ಮೆಸ್ಕಾಂ ಕಛೇರಿಯಲ್ಲಿ ದಯಾ ಸುಂದರ್ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಮಂಗಳೂರಿನ ಕದ್ರಿ ಕಂಬಳದಲ್ಲಿ ಸ್ವಂತ ಫ್ಲ್ಯಾಟ್ ಹೊಂದಿದ್ದಾರೆ. ಅದನ್ನು ಬಾಡಿಗೆಗೆ ನೀಡಿರುವ ಅವರು ಬೇರೊಂದು ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದರು.
ಮಲ್ಲಿಕಟ್ಟೆಯ ವಿಜಯಾ ಅಪಾರ್ಟ್ ಮೆಂಟ್ ಬಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ದಯಾಸುಂದರ್ ಮನೆ ಮತ್ತು ಕುಲಶೇಖರ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ. ಏಕಾಏಕಿ ದಾಳಿ ಮಾಡಿದ ಎಸಿಬಿ ಅಧಿಕಾರಿಗಳ ತಂಡ ದಾಖಲೆ ಪರಿಶೀಲನೆಯಲ್ಲಿ ನಿರತವಾಗಿದೆ.