ಪುತ್ತೂರು ಡಿವೈಎಸ್ಪಿ ಗಾನ ಕುಮಾರಿ ವಿರುದ್ಧ ಮಾರ್ಚ್ 21 ರಂದು ಪುತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಬೃಹತ್ ಹೋರಾಟ : ಪ್ರತಿಭಟನೆಯ ಯಶಸ್ವಿಗಾಗಿ ಶ್ರೀ ಮಹಾಲಿಂಗೇಶ್ವರನ ಸನ್ನಿಧಾನದಲ್ಲಿ ವಿಶೇಷ ಪ್ರಾರ್ಥನೆ –ಕಹಳೆ ನ್ಯೂಸ್
ಪುತ್ತೂರು : ಹಿಂದೂ ಕಾರ್ಯಕರ್ತರ ವಿರುದ್ಧ ನಿರಂತರ ಸುಳ್ಳು ಕೇಸ್ ದಾಖಲಿಸಿ ದೌರ್ಜನ್ಯ ಎಸಗುತ್ತಿರುವ ಆರೋಪದಲ್ಲಿ ಪುತ್ತೂರು ಡಿವೈಎಸ್ಪಿ ಗಾನ ಕುಮಾರಿ ವಿರುದ್ಧ ಮಾರ್ಚ್ 21 ರಂದು ಬೃಹತ್ ಹೋರಾಟ ನಡೆಸುವ ತೀರ್ಮಾಣವನ್ನ ಹಿಂದೂ ಜಾಗರಣ ವೇದಿಕೆ ಕೈಗೊಂಡಿದೆ.
ಮಾರ್ಚ್ 21 ರಂದು ನಡೆಯಲಿರುವ ಪ್ರತಿಭಟನೆಯು ಯಶಸ್ವಿಯಾಗಿ ನಡೆಯುವಂತೆ ಆಗಲು, ಇಂದು ಪುತ್ತೂರಿನ ಒಡೆಯ ಶ್ರೀ ಮಹಾಲಿಂಗೇಶ್ವರನ ಸನ್ನಿಧಾನದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮಾರ್ಚ್ 21 ರಂದು ಡಿವೈಎಸ್ಪಿ ಕಛೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದು, ಕಾರ್ಯಕರ್ತರನ್ನು ನ್ಯಾಯಾಲಯಕ್ಕೆ ಕುಣಿಸುವ ಕೆಲಸದಲ್ಲಿ ಪುತ್ತೂರು ಡಿವೈಎಸ್ಪಿ ಗಾನ.ಪಿ.ಕುಮಾರ್ ನಿರತರಾಗಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ. ಗೌರವಾಧ್ಯಕ್ಷ ಡಾ.ಎಮ್.ಕೆ ಪ್ರಸಾದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ಹಿಂದೂ ಕಾರ್ಯಕರ್ತರ ಮೇಲೆ ನೀಡಲಾಗುವ ಸುಳ್ಳು ದೂರುಗಳನ್ನು ಸಮರ್ಪಕವಾಗಿ ತನಿಖೆ ನಡೆಸದೆ, ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಹಲವು ಪ್ರಕರಣಗಳು ಹಿಂದೂ ಜಾಗರಣ ವೇದಿಕೆಯ ಗಮನಕ್ಕೆ ಬಂದಿರುವ ಹಿನ್ನಲೆಯಲ್ಲಿ ಈ ಮುತ್ತಿಗೆ ಪ್ರತಿಭಟನೆಯನ್ನು ನಡೆಸಲು ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ.