Thursday, January 23, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ 2022ರ ಬಜೆಟ್ ಬಗೆಗೆ ವಿದ್ಯಾರ್ಥಿಗಳ ವಿಚಾರ ಮಂಡನೆ ಮತ್ತು ಅವಲೋಕನ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಸ್ವಾತಂತ್ರ್ಯಾ ನಂತರದಿಂದಲೂ ರಾಷ್ಟ್ರ ಅಭಿವೃದ್ಧಿ ಪಥದಲ್ಲೇ ಇದೆ. ಭಾರತ ಸರ್ವತೋಮುಖ ಅಭಿವೃದ್ಧಿ ಹೊಂದಲು ನಮ್ಮ ಹಣಕಾಸಿನ ಯೋಜನೆಗಳನ್ನು ಬದಲಾಯಿಸಬೇಕು. ಪ್ರಸ್ತುತ ದೇಶದ ಸುಸ್ಥಿರ ಅಭಿವೃದ್ದಿಯತ್ತ ಗಮನ ಹರಿಸುವ ಅಗತ್ಯತೆ ಇದೆ ಎಂದು ಇಲ್ಲಿನ ಸರಕಾರಿ ಮಹಿಳಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಸುಕೇಶ್ ಪಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಬಜೆಟ್ 2022ರ ಬಗೆಗೆ ವಿದ್ಯಾರ್ಥಿಗಳ ವಿಚಾರ ಮಂಡನೆ ಮತ್ತು ಅವಲೋಕನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆಗಳು ದೇಶದ ಆರ್ಥಿಕ ಮೂಲವಾಗಿದ್ದು, ತೆರಿಗೆಗಳ ಆಧಾರದಲ್ಲಿ ಬಜೆಟ್ ಲೆಕ್ಕಾಚಾರಗಳು ನಿರ್ಧಾರವಾಗುತ್ತದೆ. ರಾಷ್ಟ್ರದಲ್ಲಿ ಬೃಹತ್ ಬದಲಾವಣೆ ತರಲು ತೆರಿಗೆ ಸಂಗ್ರಹಿಸುವ ವಿಧಾನ ಬದಲಾಯಿಸುವುದು ಉತ್ತಮವಾಗಿದ್ದು, ಯಾವುದೇ ಯೋಜನೆಗಳನ್ನು ಜಾರಿಗೊಳಿಸುವಾಗ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಂತಹ ಯೋಜನೆಗಳನ್ನು ರೂಪಿಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.

ಸ್ನಾತಕೋತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ ಮಾತನಾಡಿ, ಪ್ರಸ್ತುತ ಶೀಘ್ರವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ, ಭವಿಷ್ಯದ ಯೋಜನೆಗಳನ್ನು ನಿರ್ಲಕ್ಷಿಸುವ ಕಾರ್ಯಗಳಾಗುತ್ತಿದೆ. ಹೊಸ ಬಗೆಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಾಗ ವರ್ತಮಾನದ ಚಿಂತನೆಯ ಜೊತೆಗೆ ಭವಿಷ್ಯದ ಕುರಿತು ಕಾಳಜಿಯಿರಬೇಕು ಎಂದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಕವನ ಪೈ, ಯುಕ್ತ ಶೆಟ್ಟಿ ಕೆ, ಮನಿμÁ ಶೆಟ್ಟಿ ಕೆ, ಮಿಥುನ್ ಕುಮಾರ್ ಕೆ, ಹರ್ಷ ನಾಯಕ್, ಗ್ರೀಷ್ಮ ಬಿ.ಎಸ್, ಅನುಶ್ರೀ.ಕೆ, ಸ್ವಪ್ನ ರೈ, ರೂಪಾ.ಕೆ ಬಜೆಟ್ ಮಂಡಿಸಿದರು. ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನರಸಿಂಹ ಭಟ್ ಎಂ.ಎನ್, ಉಪಸ್ಥಿತರಿದ್ದರು. ಪ್ರಥಮ ಎಂ.ಕಾಂ ವಿಧ್ಯಾರ್ಥಿನಿ ಅಕ್ಷಿತಾ ಸ್ವಾಗತಿಸಿ, ಸೌಮ್ಯ ವಂದಿಸಿದರು. ವಿಭಾಶ್ರೀ ಕಾರ್ಯಕ್ರಮ ನಿರೂಪಿಸಿದರು.